ಬಣ್ಣ ಹಚ್ಚುವ ಟಾಸ್ಕ್ ಆಡುವಾಗ ಅಮೂಲ್ಯ ಮತ್ತೆ ದೀಪಿಕಾ ರೂಲ್ಸ್ ಬ್ರೇಕ್ ಮಾಡ್ತಾರೆ. ಕೈಗೆ ಬಣ್ಣ ಹಚ್ಚಿಕೊಂಡು, ಎದುರಾಳಿ ಸದಸ್ಯರ ಟೀ ಶರ್ಟ್ಗೆ ಹಚ್ಚ ಬೇಕಿತ್ತು.
2/ 8
ಅಮೂಲ್ಯ ಗೌಡ, ದೀಪಿಕಾ ದಾಸ್ ಬಣ್ಣ ಹಚ್ಚು ಬದಲು ಎರಚಾಡಿಕೊಂಡಿದ್ದಾರೆ. ಇದು ತಪ್ಪು ಎಂದು ಮನೆಯವರೆಲ್ಲಾ ಹೇಳಿದ್ರು. ಆದ್ರೂ ಅವರು ಅದೇ ರೀತಿ ಮಾಡಿದ್ದಾರೆ.
3/ 8
ಕ್ಯಾಪ್ಟನ್ ಆಗಿರುವ ರಾಜಣ್ಣ ಇದೇನ್ ಆಟ. ಇದು ಆಟ ಅಲ್ಲ. ಬುಕ್ ನಲ್ಲಿ ಇರುವುದು ಒಂದು. ನೀವು ಆಟ ಆಡ್ತೀರೋದೇ ಮತ್ತೊಂದು ಎಂದು ಇಬ್ಬರಿಗೂ ಹೇಳ್ತಾರೆ.
4/ 8
ಆಗ ರಾಜಣ್ಣನ ಜೊತೆ ದಿವ್ಯಾ ಉರುಡುಗ ಮತ್ತು ದೀಪಿಕಾ ದಾಸ್ ಜಗಳ ಮಾಡ್ತಾರೆ. ಅಮೂಲ್ಯ ಗೌಡ ಅವರದ್ದೇ ತಪ್ಪು ಎಂದು ವಾದ ಮಾಡ್ತಾರೆ. ರಾಜಣ್ಣ ನನ್ನ ಮಾತನಾಡೋಕೆ ಬಿಡಿ ಎಂದು ಹೇಳ್ತಾರೆ.
5/ 8
ಹುಡುಗಿಯರ ಬಳಿ ಹುಡುಗರ ಹತ್ತಿರ ಜಗಳಕ್ಕೆ ಹೋದಂಗೆ ಹೋಗಬೇಡಿ. ಇದನ್ನ ನೀವು ಕಲಿಯಬೇಕು. ನಾನು ಇದನ್ನ ಗಮನಿಸ್ತಿರೋದು ಎರಡನೇ ಬಾರಿ ಎಂದು ದಿವ್ಯಾ ಉರುಡುಗ ಹೇಳ್ತಾರೆ.
6/ 8
ಕಿರುಚಿ ಮಾತನಾಡಬಾರದು. ಹೆಣ್ಮಕ್ಕಳ ಹತ್ತಿರ ಬಂದು ಮಾತನಾಡಬಾರದು. ನೀವು ವಾದ ಮಾಡುವಾಗ ಹೆಣ್ಣು ಮಕ್ಕಳ ಮುಖದ ಹತ್ತಿರ ಬರುತ್ತೀರಿ ಎಂದು ದೀಪಿಕಾ ದಾಸ್ ಹೇಳ್ತಾರೆ.
7/ 8
ನಿಮಗೆ ಹೆಣ್ಣು ಮಕ್ಕಳ ಬಗ್ಗೆ ಗೌರವ ಇಲ್ಲ ಎಂದು ಹೇಳಿಲ್ಲ. ಆದ್ರೆ ನಿಮ್ಮ ಮಾತಿನ ಟ್ಯೂನ್ ಸರಿಯಿಲ್ಲ ಎಂದು ಅನುಪಮಾ ಗೌಡ ಹೇಳ್ತಾರೆ. ದೀಪಿಕಾ ದಾಸ್, ಅನುಪಮಾ ಗೌಡ, ದಿವ್ಯಾ ಉರುಡುಗ ಎಲ್ಲ ಒಟ್ಟಿಗೆ ರಾಜಣ್ಣನಿಗೆ ಪ್ರಶ್ನೆ ಮಾಡ್ತಾರೆ.
8/ 8
ಹೆಣ್ಮಕ್ಕಳ ಬಗ್ಗೆ ನನಗೆ ಗೌರವ ಇಲ್ಲ ಅಂತ ನಿಮ್ಮಿಂದ ನಾನು ಸರ್ಟಿಫಿಕೇಟ್ ತಗೊಳ್ಳೋಕೆ ರೆಡಿ ಇಲ್ಲ. ನೀವು ಸಾವಿರ ಮಾತನಾಡಬಹುದು. ನಾವು ಕೇಳಿಸಿಕೊಂಡು ಸುಮ್ಮನಿರಬೇಕಾ? ಎಂದು ರಾಜಣ್ಣ ಹೇಳ್ತಾರೆ.