ಬಿಗ್ ಬಾಸ್ ಪತ್ರ ಬರೆಯುವ ಟಾಸ್ಕ್ ನೀಡಿದ್ದರು. ರಾಜಣ್ಣ ಅವರೇ ನೀವು 4 ಜನಕ್ಕೆ ಪತ್ರ ಬರೆದಿದ್ರಿ. ಎಲ್ಲದರಲ್ಲೂ ದೂರಗಳೇ ಇದ್ವು. ನೇರವಾಗಿ ಹೇಳಲು ನಿಮಗೆ ಅವರು ಸಿಗಲಿಲ್ವಾ ಎಂದು ಸುದೀಪ್ ಕೇಳಿದ್ದಾರೆ.
2/ 8
ರಾಜಣ್ಣ ಆರ್ಯವರ್ಧನ್ ಗುರೂಜಿ, ಅಮೂಲ್ಯ ಗೌಡ, ದಿವ್ಯಾ ಉರುಡುಗ, ರೂಪೇಶ್ ಶೆಟ್ಟಿಗೆ ಪತ್ರ ಬರೆದಿರುತ್ತಾರೆ. ರಾಜಣ್ಣ ಪತ್ರದಿಂದ ಮನೆಯವರೆಲ್ಲಾ ಬೇಸರ ಮಾಡಿಕೊಂಡಿದ್ರು.
3/ 8
ರೂಪೇಶ್ ರಾಜಣ್ಣ ಅವರು ಬರೆದ ಪತ್ರ ಓದ್ತಾ ಇದ್ರೆ ಆಘಾತ ಆಯ್ತು. ಬೇರೆ ಯಾರೂ ಬರೆದಿದ್ರೆ ಅಷ್ಟು ನೋವಾಗ್ತಾ ಇರಲಿಲ್ಲ. ಸುಮ್ಮನೇ ಯಾರಿಗೂ ಸ್ನೇಹಿತರ ಸ್ಥಾನ ಕೊಡಲ್ಲ ಎಂದು ರೂಪೇಶ್ ಶೆಟ್ಟಿ ಹೇಳಿದ್ದಾರೆ.
4/ 8
ನನಗೆ ಅನ್ನಿಸಿದ್ದನ್ನು ನಾನು ಪತ್ರದಲ್ಲಿ ಬರೆದು ಕೊಟ್ಟೆ ಸರ್. ನಾನು ಬರುವಾಗ ರೂಪೇಶ್ ಶೆಟ್ಟಿ ನನ್ನ ಸ್ನೇಹಿತ ಆಗ್ತಾರೆ ಎಂದುಕೊಂಡು ಬಂದಿರಲಿಲ್ಲ ಎಂದು ರೂಪೇಶ್ ರಾಜಣ್ಣ ಹೇಳಿದ್ದಾರೆ.
5/ 8
ರಾಜಣ್ಣ ಬರೆದ ಪತ್ರದಲ್ಲಿ ನೀವು ಯಾರ ಗೆಲುವನ್ನು ಸಂಭ್ರಮಿಸಲ್ಲ. ನಿಮ್ಮ ಕೆಲವೊಂದು ಮಾತುಗಳು ನನಗೆ ಇಷ್ಟ ಆಗಲ್ಲ. ನಾನು ಹೇಳಿದೆ, ನೀವು ತಿದ್ದಿಕೊಳ್ಳಲಿಲ್ಲ ಎಂದು ಬರೆದಿದ್ರು. ಅದಕ್ಕೆ ರೂಪೇಶ್ ಶೆಟ್ಟಿಗೆ ಬೇಸರ ಆಗಿತ್ತು.
6/ 8
ರಾಜಣ್ಣ ತಮ್ಮ ಅನಿಸಿಕೆ ಹೇಳೋ ಭರದಲ್ಲಿ ಒಳ್ಳೆಯ ಸ್ನೇಹಿತರನ್ನು ಕಳೆದುಕೊಳ್ತಾ ಇದ್ದಾರೆ. ಮೇ ಬಿ ರೂಪೇಶ್ ಶೆಟ್ಟಿ ಮೊದಲಿನ ರೀತಿ ರಾಜಣ್ಣ ಜೊತೆ ಇರೋಕೆ ಆಗಲ್ಲ ಎಂದು ದಿವ್ಯಾ ಉರುಡುಗ ಹೇಳಿದ್ದಾರೆ.
7/ 8
ನನ್ನಲ್ಲೂ ತಪ್ಪುಗಳು ಆದಾಗ ಹೇಳಿದ್ದಾರೆ ಸರ್. ನಾನು ಕೆಲವೊಂದು ವಿಚಾರಗಳನ್ನು ನೇರವಾಗಿ ರೂಪೇಶ್ ಅವರಿಗೆ ಹೇಳಿದ್ದೆ. ಆದ್ರೆ ಅವರಿಗೆ ಅರ್ಥ ಆಗಲಿಲ್ಲ. ಅದಕ್ಕೆ ಪತ್ರ ಬರೆದೆ ಎಂದು ರಾಜಣ್ಣ ಹೇಳಿದ್ದಾರೆ.
8/ 8
ರಾಜಣ್ಣನನ್ನು ಸ್ನೇಹಿತ ಅಂದುಕೊಂಡು ನಾನು ಮೂರ್ಖ ಆದೆ ಎಂಬ ಭಾವನೆ ನನ್ನಲ್ಲಿ ಮೂಡಿತು ಎಂದು ರೂಪೇಶ್ ಶೆಟ್ಟಿ ಹೇಳಿದ್ದಾರೆ. ಅಲ್ಲದೇ ರಾಜಣ್ಣನ ಪತ್ರದಿಂದ ಗುರೂಜಿ, ದಿವ್ಯಾ, ಅಮೂಲ್ಯ ಸಹ ಬೇಸರ ಮಾಡಿಕೊಂಡಿದ್ರು.