ಬಿಗ್ ಬಾಸ್ ಮನೆಯಲ್ಲಿ ಮತ್ತೊಬ್ಬರ ಮಾತು ಕೇಳಿಸಿಕೊಳ್ಳದೇ ಇರುವವರು ಯಾರು ಎಂದು ಸುದೀಪ್ ಅವರು ಸ್ಪರ್ಧಿಗಳಿಗೆ ಪ್ರಶ್ನೆ ಮಾಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇನ್ನೊಬ್ಬರ ಮಾತು ಕೇಳದವರು ಅಂದ್ರೆ ಅದು ರೂಪೇಶ್ ರಾಜಣ್ಣ ಸರ್ ಎಂದು ಆರ್ಯವರ್ಧನ್ ಗುರೂಜಿ ಹೇಳಿದ್ದಾರೆ. ಅವರು ಹೇಳಿದ್ದೇ ಆಗಬೇಕು ಸರ್ ಎಂದು ಹೇಳುತ್ತಾರೆ. ರೂಪೇಶ್ ರಾಜಣ್ಣ ಬಿಗ್ ಬಾಸ್ ಮನೆಯಲ್ಲಿ ಜಗಳಕ್ಕೆ ಹೆಸರಾಗಿದ್ದರು. ರಾಜಣ್ಣ ಅಂದ್ರೆ ಜಗಳ ಎನ್ನುವಂತಾಗಿತ್ತು. ಅವರು ಯಾರ ಮಾತನ್ನು ಕೇಳಲ್ಲ. 17 ಜನರ ಬಾಯಿ ಮುಚ್ಚಿಸಿ ಮಾತನಾಡುವ ಶಕ್ತಿ ಇರುವುದು ರೂಪೇಶ್ ರಾಜಣ್ಣ ಅವರಿಗೆ ಮಾತ್ರ ಎಂದು ಅಮೂಲ್ಯ ಗೌಡ ಹೇಳಿದ್ದಾರೆ. ಎಲ್ಲರೂ ನಕ್ಕಿದ್ದಾರೆ. ಎಷ್ಟೋ ಜನಕ್ಕೆ ನೀವು ಅವರ ಮಾತು ಕೇಳಿಸಿಕೊಳ್ಳದೇ ಇರುವುದೇ ಖುಷಿ ಆಗಿದೆ. ಯಾಕಂದ್ರೆ ನೀವು ಕೇಳಿಸಿಕೊಂಡ್ರೆ ಮತ್ತೆ ಒಂದು ವಾರ ಅದನ್ನು ಬಿಡ್ತಾ ಇರಲಿಲ್ಲ ಎಂದು ಸುದೀಪ್ ಹೇಳಿದ್ದಾರೆ. ಮನೆಯಲ್ಲೂ ಹೀಗೆ ಇರ್ತಾರಾ ಎಂದು ರಾಜಣ್ಣ ಅವರ ಪತ್ನಿಗೆ ಸುದೀಪ್ ಅವರು ಕೇಳಿದ್ದಾರೆ. ಅದಕ್ಕೆ ಅವರು ಮನೆಯಲ್ಲಿ ಆ ರೀತಿ ಇರಲ್ಲ. ಅವರು ತುಂಬಾ ಅಮಾಯಕರು ಎಂದು ಹೇಳಿದ್ದಾರೆ. ರಾಜಣ್ಣ ಅವರ ಪತ್ನಿ ಮಾತು ಕೇಳಿ ಸುದೀಪ್ ಶಾಕ್ ಆಗಿದ್ದಾರೆ. ರಾಜಣ್ಣ ಅಮಾಯಕರು ಆದ್ರೆ, ಮತ್ತೆ ನಾವ್ ಏನು ಎಂದು ಪ್ರಶ್ನೆ ಮಾಡಿದ್ದಾರೆ. ಎಲ್ಲರೂ ಬಿದ್ದು, ಬಿದ್ದು ನಕ್ಕಿದ್ದಾರೆ. ರಾಜಣ್ಣ ಮನೆಯಲ್ಲಿ ಸೈಲೆಂಟ್. ಅದನ್ನು ಬಿಗ್ ಬಾಸ್ ಮನೆಯೊಳಗೆ ಬಂದು ತಮ್ಮ ಎಲ್ಲಾ ಕೋಪ ಹೊರ ಹಾಕಿದ್ದಾರೆ ಎಂದು ಸುದೀಪ್ ಅವರು ರೇಗಿಸಿದ್ದಾರೆ.