ಈ ವಾರ ಮನೆಯ ಕ್ಯಾಪ್ಟನ್ ಆಗಿ ರೂಪೇಶ್ ರಾಜಣ್ಣ ಇದ್ದಾರೆ. ಅವರ ಕ್ಯಾಪ್ಟೆನ್ಸಿ ಬಗ್ಗೆ ಪ್ರಶಾಂತ್ ಸಂಬರ್ಗಿ, ರೂಪೇಶ್ ಶೆಟ್ಟಿ, ಆರ್ಯವರ್ಧನ್ ಗುರೂಜಿ ಕೂತು ಮಾತನಾಡುತ್ತಿದ್ದಾರೆ. ಟಾಸ್ಕ್ ವೇಳೆ ದಿವ್ಯಾ ಉರುಡುಗ ಜೊತೆ ಮಾತನಾಡಿದ್ದು ಸರಿ ಅಲ್ಲ ಎಂದು ಪ್ರಶಾಂತ್ ಸಂಬರ್ಗಿ ಹೇಳಿದ್ರು. ನಾನು ಮಾತನಾಡುವುದೇ ಹೀಗೆ ಎಂದು ರಾಜಣ್ಣ ಹೇಳಿದ್ರು. ಮೂರು, ನಾಲ್ಕು ಜನ ನನ್ನ ಸುತ್ತಿ ಹಾಕಿಕೊಂಡು ಮಾತನಾಡುವಾಗ ಫ್ರೆಂಡ್ ಎಲ್ಲಿ ಅಣ್ಣ ಕೂತಿದ್ದ ಎಂದು ರೂಪೇಶ್ ರಾಜಣ್ಣ ಪ್ರಶ್ನೆ ಮಾಡಿದ್ದಾರೆ. ಅದು ಬೆಳಗ್ಗೆ ಎದ್ದ ತಕ್ಷಣ ನನ್ನ ಸ್ಟೈಲ್ ಇದೆ. ನಾನು ಇದೇ ರೀತಿ ಮಾತನಾಡುವುದು ಎಂದು ರಾಜಣ್ಣ ಹೇಳ್ತಾರೆ. ಅಲ್ಲದೇ ಸ್ನೇಹಿತ ಆಗಿ ನೀನು ಎಲ್ಲಿ ಬೆಂಬಲಕ್ಕೆ ಬಂದೆ ಎಂದು ಕೇಳ್ತಾರೆ. ನಾನು ಮಾತನಾಡೋಣ ಎಂದುಕೊಂಡಿದ್ದೇ, ಆದ್ರೆ ನೀನೇ ಬೈದೆ ಮಧ್ಯೆ ಬರಬೇಡಿ ಅಂತ. ಅಲ್ಲದೇ ಇದು ನನ್ನ ಅವರ ವಿಷ್ಯ ಎಂದೆ ರಾಜಣ್ಣ ನೀನು ಎಂದು ಪ್ರಶಾಂತ್ ಸಂಬರ್ಗಿ ಹೇಳಿದ್ದಾರೆ. ನೀನು ನನಗೆ ಅಡ್ವೈಸ್ ಮಾಡು ಅಂದಿಲ್ಲ. ಅಲ್ಲಿ ಬೇರೆಯವರಿಗೆ ಹೇಳಬಹುದಿತ್ತು ಅಲ್ವಾ? ನೀನು ಯಾವ ಸೀಮೆ ಫ್ರೆಂಡ್ ಎಂದು ರಾಜಣ್ಣ ಪ್ರಶಾಂತ್ ಅವರನ್ನು ಕೇಳಿದ್ದಾರೆ. ಸ್ನೇಹಿತನಾಗಿ ಅಡ್ವೈಸ್ ಮಾಡೋ ಲಿಬರ್ಟಿ ಇಲ್ವಾ ನನಗೆ. ಕೆಳಗೆ ಬಿದ್ರೂ ಮೀಸೆ ಮಣ್ಣಾಗಲಿಲ್ಲ ಅನ್ನುವವನು ನೀನು ಎಂದು ಪ್ರಶಾಂತ್ ಸಂಬರ್ಗಿ ಹೇಳಿದ್ದಾರೆ. ನನಗೆ ಅಡ್ವೈಸ್ ಕೊಡಲು ನೀವ್ಯಾರು ಎಂದು ರಾಜಣ್ಣ ಕೇಳಿದ್ದಾರೆ. ಅದಕ್ಕೆ ಪ್ರಶಾಂತ್ ಸಂಬರ್ಗಿ ಏನೂ ಮಾತನಾಡದೇ ಸುಮ್ಮನೇ ಕೂತು ಬಿಟ್ರು.