Bigg Boss Kannada: ಕಳಪೆ ಕಾರಣ ಕೇಳಿ ರೊಚ್ಚಿಗೆದ್ದ ರಾಜಣ್ಣ; ದಿವ್ಯಾ ಮೇಲೆ ಸಿಡಿ ಸಿಡಿ!
ಬಿಗ್ ಬಾಸ್ ಮನೆಯಲ್ಲಿ ರಾಜಣ್ಣ ಯಾವುದಾದರೂ ಒಂದು ವಿಚಾರಕ್ಕೆ ಜಗಳ ಆಡ್ತಾನೆ ಇರ್ತಾರೆ. ಈ ಬಾರಿ ಕಳಪೆ ವಿಚಾರವಾಗಿ ಕಿರಿಕ್ ನಡೆದಿದೆ. ಅಷ್ಟಕ್ಕೂ ಬಿಗ್ ಬಾಸ್ ಮನೆಯಲ್ಲಿ ಆಗಿದ್ದಾದರೂ ಏನು?
ಬಿಗ್ ಬಾಸ್ ಮನೆಯಲ್ಲಿ ವಾರದ ಟಾಸ್ಕ್ ಮುಗಿದ ಮೇಲೆ, ಕಳಪೆ ಮತ್ತು ಉತ್ತಮ ಅಂತ ಅಂಕ ನೀಡಲಾಗುತ್ತೆ. ಈ ವಾರದ ಕಳಪೆ, ಉತ್ತಮ ಅಂಕ ನೀಡಲು ಸ್ಪರ್ಧಿಗಳು ಕೂತಿದ್ದಾರೆ.
2/ 8
ನನ್ನ ಕಳಪೆಯನ್ನು ಅಮೂಲ್ಯ ಅವರಿಗೆ ಕೊಡ್ತೇನೆ. ರಾಕೇಶ್ ಮತ್ತು ಅಮೂಲ್ಯ ಬಗ್ಗೆ ಗುರೂಜಿ ತಪ್ಪಾಗಿ ಮಾತನಾಡಿದ್ದರು. ಅದಕ್ಕೆ ಅಮೂಲ್ಯ ನಾನು ನಿಮ್ಮನ್ನು ಮಾತನಾಡಿಸಲ್ಲ ಎಂದು ಗುರೂಜಿಗೆ ಹೇಳಿದ್ರು. ಅದಕ್ಕೆ ಬೇಸರ ಮಾಡಿಕೊಂಡು ಗುರೂಜಿ ಅವರಿಗೆ ಕಳಪೆ ನೀಡಿದ್ದಾರೆ.
3/ 8
ದಿವ್ಯಾ ಉರುಡುಗ ಅವರು ರೂಪೇಶ್ ರಾಜಣ್ಣ ಅವರಿಗೆ ಕಳಪೆ ಅಂತ ಅಂಕ ಕೊಟ್ಟಿದ್ದಾರೆ. ಗೇಮ್ಗಳಲ್ಲಿ ಅಗ್ರೆಸಿವ್ ಆಗ್ತಾರೆ ಎನ್ನುವ ಕಾರಣ ಕೊಟ್ಟಿದ್ದಾರೆ.
4/ 8
ದಿವ್ಯಾ ಉರುಡುಗ ಕೊಟ್ಟ ಕಾರಣ ಕೇಳಿ ರೂಪೇಶ್ ರಾಜಣ್ಣ ಬೇಸರ ಮಾಡಿಕೊಂಡರು. ಬ್ಯಾಲೆನ್ಸ್ ಟಾಸ್ಕ್ ನಲ್ಲಿ ಗುರೂಜಿ ಜೊತೆ ಜೋರಾಗಿ ಮಾತನಾಡಿದ್ದಾರೆ ಎಂದು ದಿವ್ಯಾ ಹೇಳಿದ್ದಾರೆ.
5/ 8
ಕಳಪೆಗೆ ರೀಸನ್ ಕೊಟ್ರೆ ದಿವ್ಯಾ ರೀತಿ ಕೊಡಬೇಕು. ಅಗ್ರೆಸಿವ್ ಆಗಿ ಆಟ ಆಡಿದ್ದಕ್ಕೆ ಕಳಪೆ ಕೊಟ್ರೆ, ನೆಕ್ಟ್ ಆಟ ಸೈಲೆಂಟ್ ಆಗಿ ಆಡಿದೆ ಎಂದು ರಾಜಣ್ಣ ಹೇಳಿದ್ದಾರೆ.
6/ 8
ಗುರೂಜಿಗೆ ನಿಮ್ಮಿಂದ ಪೆಟ್ಟು ಆಯ್ತು ಎಂದು ದಿವ್ಯಾ ಉರುಡುಗ ಹೇಳ್ತಾರೆ. ಅದಕ್ಕೆ ಕೋಪಗೊಂಡ ರಾಜಣ್ಣ ನಾನು ಟೇಬಲ್ ತೆಗೆದು ಅವರಿಗೆ ಹೊಡೆದೇನಾ ಎಂದು ಪ್ರಶ್ನೆ ಮಾಡಿದ್ದಾರೆ.
7/ 8
ನೀವು ಸೈಲೆಂಟ್ ಆಗಿ ಆಡಿದ್ದಕ್ಕಿಂತ ಅಗ್ರೆಸಿವ್ ಆಗಿ ಆಡಿದ್ದು ಎಲ್ಲರಿಗೂ ಕಾಣಿಸಿತು. ನನಗೆ ಅನ್ನಿಸಿದ್ದನ್ನು ನಾನು ಹೇಳಿದ್ದೇನೆ ಎಂದು ದಿವ್ಯಾ ತಮ್ಮನ್ನು ತಾವು ಸಮರ್ಥನೆ ಮಾಡಿ ಕೊಳ್ತಾರೆ.
8/ 8
ನಾನು ಈ ಮನೆಯಲ್ಲಿ ಬಲಿಕಾ ಬಕ್ರಾ ಅದೆ ಎಂದು ಎಲ್ಲರ ಮುಂದೆ ಹೇಳ್ತಾ ಇದ್ದೇನೆ. ಕಾರಣವೇ ಇಲ್ಲದ ಕಾರಣ ಕೊಡೋದು ತಪ್ಪು ಎಂದು ದಿವ್ಯಾಗೆ ಹೇಳಿದ್ದಾರೆ.