ನೇರವಾಗಿ ಹೇಳಲಾಗದ್ದನ್ನು ಪತ್ರದ ಮೂಲಕ ಬರೆದು ತಿಳಿದಿ ಎಂದು ಬಿಗ್ ಬಾಸ್ ಟಾಸ್ಕ್ ನೀಡಿದ್ದರು. ಆಗ ರಾಜಣ್ಣ ರೂಪೇಶ್ ಶೆಟ್ಟಿ, ಆರ್ಯವರ್ಧನ್ ಗುರೂಜಿ ಮನಸ್ಸಿಗೆ ನೋವಾಗುವಂತೆ ಪತ್ರ ಬರೆದಿದ್ದರು. ಅದಕ್ಕೆ ಬೇಸರ ಮಾಡಿಕೊಂಡಿದ್ರು.
2/ 8
ನಾನು ರೂಪೇಶ್ ಶೆಟ್ಟಿ, ರಾಜಣ್ಣ ಹೊರಗೆ ಹೋದಾಗ ಭೇಟಿಯಾದ್ರೆ, ಅದನ್ನು ವಿಡಿಯೋ ರೆಕಾರ್ಡ್ ಮಾಡಿ, ನಮ್ಮ ಮರ್ಯಾದೆ ತೆಗೆಯಬಹುದು. ಬಿಗ್ ಬಾಸ್ ಮನೆಯಲ್ಲಿ ಈ ರೀತಿ ಹೇಳ್ತಾ ಇದ್ರು. ಈಗ ಈ ರೀತಿ ಹೇಳ್ತಾ ಇದಾರೆ ಎಂದು ತಿರುಚಬಹುದು ಎಂದು ಆರ್ಯವರ್ಧನ್ ಗುರೂಜಿ ಹೇಳಿದ್ದಾರೆ.
3/ 8
ವಿಡಿಯೋ ಮಾಡುವ ರೀತಿ ನಿಮ್ಮಷ್ಟು ನೀಚ ಬುದ್ಧಿ ನನಗಿಲ್ಲ ಎಂದು ಆರ್ಯವರ್ಧನ್ ಗುರೂಜಿ ಮೇಲೆ ಸುದೀಪ್ ಮುಂದೆಯೇ ರೂಪೇಶ್ ರಾಜಣ್ಣ ಗರಂ ಆಗ್ತಾರೆ.
4/ 8
ಆದ್ರೂ ಆರ್ಯವರ್ಧನ್ ಗುರೂಜಿ ಒಪ್ಪಲಿಲ್ಲ. ನೀವು ಯಾವಾಗ ಏನ್ ಬೇಕಾದ್ರೂ ಮಾಡಬಹುದು. ನಿಮ್ಮನ್ನು ನಂಬೋಕೆ ಆಗಲ್ಲ ಎಂದು ವಾರದ ಕಥೆ ಕಿಚ್ಚನ ಕಥೆ ಕಾರ್ಯಕ್ರಮದಲ್ಲಿ ಹೇಳಿದ್ರು.
5/ 8
ಗುರುಗಳೇ ಏನ್ ಮಾತನಾಡುತ್ತೀರಿ, ಮನೆ ಒಳಗಿನ ವಿಷಯ ಮಾತನಾಡಬೇಕು. ಅದು ಬಿಟ್ಟು ನಾನು ವಿಡಿಯೋ ಮಾಡ್ತೀನಿ ಅಂತೆಲ್ಲಾ ಹೇಳ್ತೀರಿ ಎಂದು ಬೇಸರ ಮಾಡಿಕೊಂಡ್ರು.
6/ 8
ನೋಡಿ ರಾಜಣ್ಣ, ನಾನು ನಿಮ್ಮ ಮಾತಿಗೆ ಉತ್ತರ ಕೊಟ್ಟಿಲ್ಲ. ಸುದೀಪ್ ಸರ್ ಕೇಳಿದ್ದಕ್ಕೆ ಹೇಳಿದ್ದು. ನೀವು ನನ್ನ ಜೊತೆ ಮಾತನಾಡಬೇಡಿ ಎಂದು ಹೇಳ್ತಾರೆ.
7/ 8
ರಾಜಣ್ಣ ಬರೆದ ಪತ್ರದಿಂದ ಶುರುವಾದ ಮನಸ್ತಾಪ ವಿಡಿಯೋ ತನಕ ಹೋಗಿದೆ. ಕೋಪಗೊಂಡ ರಾಜಣ್ಣ ಗುರೂಜಿಗೆ ನೀಚ ಎಂದಿದ್ದಾರೆ.
8/ 8
ಇಲ್ಲ ಸಲ್ಲದ್ದನ್ನು ಹೇಳಬೇಡಿ. ಜನತೆಗೆ ನಿಜ ಏನು ಅಂತ ಗೊತ್ತು. ಎಲ್ಲರು ಟಿವಿ ನೋಡಿರುತ್ತಾರೆ ಎಂದು ಆರ್ಯವರ್ಧನ್ ಗುರೂಜಿ ಮೇಲೆ ರೂಪೇಶ್ ರಾಜಣ್ಣ ಕೋಪ ಮಾಡಿಕೊಂಡ್ರು.