ಬಿಗ್ ಬಾಸ್ ಈ ವಾರದ ಟಾಸ್ಕ್ ಆಗಿ ಪಡೆದಿರುವ ಅಂಕಗಳನ್ನು ಉಳಿಸಿಕೊಳ್ಳಬೇಕು ಎಂದಿದ್ದಾರೆ. ಅದನ್ನು ಬಿಗ್ ಬಾಸ್ ಸ್ಪರ್ಧಿಗಳು ಎಚ್ಚರಿಕೆಯಿಂದ ಆಡಿ ಅಂಕಗಳನ್ನು ಉಳಿಸಿಕೊಳ್ಳಬೇಕಿದೆ. ಚೆಂಡನ್ನು ಬ್ಯಾಲೆನ್ಸ್ ಮಾಡುವ ಟಾಸ್ಕ್ ನ್ನು ರೂಪೇಶ್ ಶೆಟ್ಟಿ, ರಾಕೇಶ್ ಆಡುತ್ತಿದ್ದಾರೆ.
2/ 8
ಚೆಂಡನ್ನು ಸಂಭಾಳಿಸುತ್ತಾ, ಅಂತಿಮ ಸ್ಥಾನದಲ್ಲಿರುವ ಮೇಜಿಗೆ ವರ್ಗಾಯಿಸಬೇಕು ಎನ್ನುವುದು ಟಾಸ್ಕ್. ಈ ಗೇಮ್ ಆಡಲು 3 ಜೋಡಿ ಇವೆ. ಅದರಲ್ಲಿ ಆರ್ಯವರ್ಧನ್ ಗುರೂಜಿ ಮತ್ತು ರಾಜಣ್ಣ ಜೋಡಿಯಾಗಿದ್ದಾರೆ.
3/ 8
ದೀಪಿಕಾ ದಾಸ್ ಮತ್ತು ಅನುಪಮಾ ಜೋಡಿಯಾಗಿದ್ದು, ಕರೆಕ್ಟ್ ಆಗಿ ಚೆಂಡನ್ನು ಬ್ಯಾಲೆನ್ಸ್ ಮಾಡಿ, ಆ ಕಡೆಯ ಮೇಜಿನತ್ತ ಸಾಗಿಸುತ್ತಿದ್ದಾರೆ.
4/ 8
ಆದ್ರೆ ಆರ್ಯವರ್ಧನ್ ಗುರೂಜಿ ಮತ್ತು ರೂಪೇಶ್ ರಾಜಣ್ಣ ಬ್ಯಾಲೆನ್ಸ್ ಮಾಡುತ್ತಿರುವ ಚೆಂಡು ಪದೇ ಪದೇ ಬಿದ್ದು ಹೋಗುತ್ತಿದೆ. ನಾನು ಕರೆಕ್ಟ್ ಆಗಿ ಮಾಡ್ತಾ ಇದ್ದೇನೆ ಎಂದು ಗುರೂಜಿ ಹೇಳ್ತಾ ಇದ್ದಾರೆ. ನೀವು ಅಲ್ಲಾಡಬೇಡಿ ಎಂದು ರಾಜಣ್ಣ ಏರು ಧ್ವನಿಯಲ್ಲಿ ಹೇಳ್ತಾರೆ.
5/ 8
ನಿಮ್ಮ ಕೈ ತುಂಬಾ ಅಲ್ಲಾಡ್ತಾ ಇದೆ. ನಿಮ್ಮ ಕೈಯಲ್ಲಿ ಬಗ್ಗೋಕೆ ಆಗ್ತಾ ಇಲ್ಲ. ಅದಕ್ಕೆ ನನಗೆ ಹೇಳ್ತಾ ಇದ್ದೀರಿ ಎಂದು ಗುರೂಜಿ ರಾಜಣ್ಣನಿಗೆ ಹೇಳಿದ್ದಾರೆ. ಅಲ್ಲದೇ ಗುರೂಜಿ ಸರಿ ಮಾಡ್ತಾ ಇದಾರೆ. ನೀವೇ ತಪ್ಪು ಎಂದು ಅರುಣ್ ಸಾಗರ್ ಹೇಳ್ತಾರೆ.
6/ 8
ಮನೆಯವರೆಲ್ಲಾ ರಾಜಣ್ಣ ನೀವು ಬೇಗ ಬೇಗ ಹೋಗ್ತಾ ಇದೀರಾ ಅಂತ ಹೇಳ್ತಾರೆ. ಅದಕ್ಕೆ ಕೋಪಗೊಂಡ ರಾಜಣ್ಣ, ನೀವೆಲ್ಲಾ ನನಗೆ ಏಕೆ ಹೇಳ್ತೀರಾ? ಸುಮ್ಮನೇ ನಿಂತುಕೊಳ್ಳಿ ಎನ್ನುತ್ತಾರೆ.
7/ 8
ನನಗೆ ಕೋಲು ತೆಗೆದುಕೊಂಡು ಹೊಡೆದು ಬಿಡು ರಾಜಣ್ಣ. ಯಾಕಂದ್ರೆ, ನಾನು ನಿನ್ನ ಮಾತು ಬಾಯಲ್ಲಿ ಕೇಳುತ್ತಿಲ್ಲ ಅಲ್ವಾ ಅದಕ್ಕೆ ಎಂದು ಗುರೂಜಿ ಬೇಸರ ಮಾಡಿಕೊಳ್ತಾರೆ.
8/ 8
ಇವತ್ತು ನೀವು ನನ್ನನ್ನು ಸಾಯಿಸುತ್ತಾ ಇದೀರಿ ನಡೀರಿ ಎಂದು ರಾಜಣ್ಣ ಹೇಳ್ತಾರೆ. ಅದಕ್ಕೆ ಗುರೂಜಿ ಇವರನ್ನು ನನ್ನ ಜೊತೆ ಯಾಕೆ ಕೊಟ್ರಿ ಎಂದು ಹೇಳ್ತಾರೆ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.