ಬಿಗ್ ಬಾಸ್ ಸೀಸನ್ 09 ಮುಗಿದಿದೆ. ರೂಪೇಶ್ ಶೆಟ್ಟಿ ವಿನ್ನರ್ ಆಗಿದ್ದಾರೆ. ರಾಕೇಶ್ ಅಡಿಗ ರನ್ನರ್ ಅಪ್ ಆಗಿದ್ದಾರೆ. ಇಬ್ಬರು ಸದ್ಯ ಸಂದರ್ಶನಗಳನ್ನು ಕೊಡುವಲ್ಲಿ ಬ್ಯುಸಿ ಆಗಿದ್ದಾರೆ. ರಾಕೇಶ್ ಅಡಿಗಾಗೆ ಹುಡುಗಿರು ಜಾಸ್ತಿ ಸ್ನೇಹಿತರು. ಅಮೂಲ್ಯ ಗೌಡ, ಅನುಪಮಾ ಗೌಡ, ಕಾವ್ಯಶ್ರೀ ಜೊತೆ ಹೆಚ್ಚು ಕ್ಲೋಸ್ ಆಗಿ ಇದ್ದರು. ಅದಕ್ಕೆ ಹಲವು ಬಾರಿ ಟೀಕೆಗೆ ಒಳಗಾಗಿದ್ದರು. ಬಿಗ್ ಬಾಸ್ ಮನೆಗೂ ಬರೂಕ್ಕೂ ಮುಂಚೆ ರಾಕೇಶ್ ಅಡಿಗ ಓಟಿಟಿಯಲ್ಲಿ ಸೋನು ಗೌಡ ಅವರು ಜೊತೆ ಹೆಚ್ಚು ಕ್ಲೋಸ್ ಆಗಿದ್ದರು. ಅವರೊಟ್ಟಿಗೆ ಇರುತ್ತಿದ್ದರು. ಸೋನು ಗೌಡ ಜೊತೆ ಒಂದು ನಂಟು ಬೆಳೆದಿತ್ತು. ಇಬ್ಬರು ತಮ್ಮ ವಿಚಾರಗಳನ್ನು ಶೇರ್ ಮಾಡಿಕೊಳ್ತಾ ಇದ್ದರು. ಬಿಗ್ ಬಾಸ್ ನಲ್ಲಿ ಸೋನು ತರ ಯಾರು ಸಿಗಲ್ಲ ಅಂದುಕೊಂಡಿದ್ರಂತೆ ರಾಕೇಶ್. ರಾಕೇಶ್ ಅಡಿಗಾಗ ಸೋನು ಗೌಡ ಮನೆಯಿಂದ ಮದುವೆ ಪ್ರಪೋಸಲ್ ಬರುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ. ಖಂಡಿತವಾಗಿ ಬರಲ್ಲ ಎಂದು ಹೇಳಿದ್ದಾರೆ. ಸೋನು ಕುಟುಂಬದ ಕಡೆಯಿಂದ ಮದುವೆ ಪ್ರಪೋಸಲ್ ಬಂದರೆ ಸೋನುನೇ ಉತ್ತರ ಕೊಡುತ್ತಾರೆ. ಸೋನುಗೆ ನನ್ನ ಬಗ್ಗೆ ಚೆನ್ನಾಗಿ ಗೊತ್ತು. ಮದುವೆ ಬಗ್ಗೆ ಮಾತು ಬಂದರೆ ನೋ ಅಂತಾನೇ ಹೇಳ್ತೀನಿ. ಸೋನು ಗೌಡ ಅವರ ಮನೆ ಕಡೆಯಿಂದ ಮದುವೆ ಮಾತು ಬರೋದೇ ಇಲ್ಲಾ, ಪ್ರಪೋಸಲ್ ಕೂಡ ಬರಲ್ಲ ಎಂದು ರಾಕೇಶ್ ಅಡಿಗ ಹೇಳಿದ್ದಾರೆ. ರಾಕೇಶ್ ಅಡಿಗ ಅವರು ಬಿಗ್ ಬಾಸ್ ನಿಂದ ಆಚೆ ಬಂದ ನಂತರ ಏನ್ ಮಾಡ್ತಾರೆ ಎಂದು ಹಲವು ಪ್ರಶ್ನೆಗಳು ಎದ್ದಿವೆ. ಅದಕ್ಕೆ ಅವರೇ ಉತ್ತರ ನೀಡಬೇಕಿದೆ.