ಬಿಗ್ ಬಾಸ್ ನಲ್ಲಿ ಅಮೂಲ್ಯ, ರಾಕಿ ಸದಾ ಜೊತೆಗೆ ಇದ್ದು ಗುರುತಿಸಿಕೊಂಡಿದ್ದಾರೆ. ಅಮೂಲ್ಯ ರಾಕೇಶ್ ಗೆ ಪಾಪು ಪಾಪು ಎಂದು ಕರೆಯುತ್ತಾರೆ. ರಾಕಿ ಅಮ್ಮ ಎನ್ನುತ್ತಾರೆ.
2/ 8
ಕತ್ತೆ ಬೆಳೆದ ಹಾಗೆ ಬೆಳೆದಿದ್ದೀಯಾ, ಒಂದು ಮದುವೆ ಮಾಡಿಕೊಳ್ಳೋಣ, ಮಕ್ಕಳು ಮಾಡಿಕೊಳ್ಳೋಣ ಅನ್ನೋದು ಇಲ್ಲ ನಿನಗೆ ಎಂದು ಅಮೂಲ್ಯ ಗೌಡ ರಾಕೇಶ್ ಗೆ ಹೇಳ್ತಾರೆ.
3/ 8
ಮಗನಾದ ರಾಕೇಶ್ ನನ್ನು ಕರೆದುಕೊಂಡು, ಅಮೂಲ್ಯ ಹೆಣ್ಣು ನೋಡೋಕೆ ಬಂದಿದ್ದಾರೆ. ದಿವ್ಯಾ ಉರುಡುಗ ಹುಡುಗಿ. ನಿಮಗೆ ಹುಡುಗಿ ಹೇಗಿರಬೇಕು ಎಂದು ದಿವ್ಯಾ ಕೇಳಿದ್ದಾರೆ.
4/ 8
ರಾಕೇಶ್, ನನಗೆ ಹುಡುಗಿ ಸಿಕ್ರೆ ಸಾಕು ಎನ್ನುತ್ತಾರೆ. ಅದಕ್ಕೆ ಅಮೂಲ್ಯ ಆ ರೀತಿ ಮಾತನಾಡಬೇಡ ಹುಡುಗಿಯರು ಒಪ್ಪಲ್ಲ ಎಂದು ಬುದ್ಧಿ ಮಾತು ಹೇಳ್ತಾರೆ.
5/ 8
ಯಾವ ಗಳಿಗೆಯಲ್ಲಿ ನಿನ್ನ ಹೆತ್ತು ಬಿಟ್ಟೇನೋ ಎಂದು ಅಮೂಲ್ಯ ಹೇಳ್ತಾರೆ. ಅದಕ್ಕೆ ರಾಕೇಶ್ ಹೆತ್ತಿದ್ದೀಯಾ ಹಾಗೇ ಮೇಲಕ್ಕೆ ಕಳಿಸಿಬಿಡು ಎಂದು ಜೋಕ್ ಮಾಡ್ತಾರೆ.
6/ 8
ಅಮೂಲ್ಯ ಗೌಡ, ದಿವ್ಯಾ ತಂಗಿ ಇದಾಳಾ ಕೇಳಿ. ಅವರನ್ನೇ ಮದುವೆ ಮಾಡೋಣ ಎನ್ನುತ್ತಾರೆ. ಅದಕ್ಕೆ ರಾಕೇಶ್ ಬಿಗ್ ಬಾಸ್ ಮನೆಯಲ್ಲಿ ಅಮೂಲ್ಯ ಅಂತ ಇದಾರೆ. ಅವರನ್ನೇ ಕೇಳಬೇಕು ಮದುವೆಗೆ ಒಪ್ತಾರಾ ಎಂದು ಎಂದಿದ್ದಾರೆ.
7/ 8
ರಾಕೇಶ್ ಅಡಿಗ ತಮ್ಮ ಮನಸ್ಸಲ್ಲಿರೋ ಮಾತನ್ನು ಇನ್ಡೈರೆಕ್ಟ್ ಆಗಿ ಹೇಳಿದ್ದಾರೆ ಅಮೂಲ್ಯಗೆ ಮದುವೆ ಬೇಡಿಕೆ ಇಟ್ಟಿದ್ದಾರೆ. ಇದು ಜೋಕ್. ಆದ್ರೆ ನಿಜ ಇರಬಹುದು ಎಂದು ಅಭಿಮಾನಿಗಳು ಹೇಳಿದ್ದಾರೆ.
8/ 8
ರಾಕಿ ಹೇಳಿದ ಮಾತು ಕೇಳಿ ಅಮೂಲ್ಯ ನೆಲ ಹೊರೆಸೋ ಕೋಲು ತಂದು, ಹೊಡೆಯಲು ಹೋಗ್ತಾರೆ. ಸೂಪರ್ ಆಗಿರೋ ಅಮೂಲ್ಯನಾ, ತಕ್ಕ ಮಟ್ಟಿಗೆ ಇದಾಳೆ ಅಂತೀಯಾ ಎನ್ನುತ್ತಾರೆ.