ಬಿಗ್ ಬಾಸ್ ಸೀಸನ್ 09 ರ ಕೊನೆ ಕಳಪೆ ಪಟ್ಟವನ್ನು ರಾಕೇಶ್ ಅಡಿಗ ಪಡೆದು, 24 ಗಂಟೆ ಜೈಲು ವಾಸ ಅನುಭವಿಸಿದ್ರು. ಮುಂದಿನ ವಾರವೇ ಗ್ರ್ಯಾಂಡ್ ಫಿನಾಲೆ ಇದ್ದು, ಈಗ ಕಳಪೆ ಪಟ್ಟ ಪಡೆದಿದ್ದಾರೆ.
2/ 8
ಈ ವಾರದ ಎಲ್ಲಾ ಟಾಸ್ಕ್ ಗಳನ್ನು ಉತ್ತಮವಾಗಿ ಆಡಿ ಆರ್ಯವರ್ಧನ್ ಗುರೂಜಿ ಉತ್ತಮ ಪದಕ ಪಡೆದ್ರು. ಕೊನೆಯ ಟಾಸ್ಕ್ ಬಿಟ್ಟು, ಗುರೂಜಿ ಎಲ್ಲಾ ಟಾಸ್ಕ್ ಸೂಪರ್ ಆಗಿ ಆಡಿದ್ದಾರೆ.
3/ 8
ರಾಕೇಶ್ ಅಡಿಗ ಓಟಿಟಿಯಿಂದ ಹೆಚ್ಚು ವೋಟ್ ಪಡೆದು, ಟಿವಿ ಬಿಗ್ ಬಾಸ್ಗೆ ಎಂಟ್ರಿ ಪಡೆದಿದ್ದರು. ಸದಾ ತಾಳ್ಮೆಯಿಂದ ಇರುವ ರಾಕೇಶ್ ಅಡಿಗ ಹಲವು ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ.
4/ 8
ಅಲ್ಲದೇ ಬಿಗ್ ಬಾಸ್ ಸೀಸನ್ 09 50 ದಿನ ಪೂರೈಸಿದಾಗ, 50 ದಿನಗಳ ಆಟ ನೋಡಿ ಸುದೀಪ್ ಅವರು ಕಿಚ್ಚನ ಚಪ್ಪಾಳೆ ಕೊಟ್ಟಿದ್ದರು. ಪ್ರಬಲ ಸ್ಪರ್ಧಿ ಆಗಿದ್ದಾರೆ ರಾಕೇಶ್.
5/ 8
ರಾಕೇಶ್ ಅಡಿಗ ಟಾಪ್ ನಲ್ಲಿ ಇರ್ತಾರೆ. ಅವರೇ ಬಿಗ್ ಬಾಸ್ ವಿನ್ನರ್ ಆಗಬಹುದು ಎಂದು ಮನೆಯಿಂದ ಹೊರ ಬಂದ ಎಷ್ಟು ಸ್ಪರ್ಧಿಗಳು ಹೇಳಿದ್ದಾರೆ.
6/ 8
ದೀಪಿಕಾ ದಾಸ್, ರೂಪೇಶ್ ರಾಜಣ್ಣ, ದಿವ್ಯಾ ಉರುಡುಗ, ಆರ್ಯವರ್ಧನ್ ಗುರೂಜಿ ರಾಕೇಶ್ ಅವರಿಗೆ ಕಳಪೆ ನೀಡಿದ ಕಾರಣ ಜೈಲಿಗೆ ಹೋದ್ರು.
7/ 8
ಮನೆಯ ಕೆಲವರು ಕಳಪೆ ಅಸಮಾಧಾನ ಹೊರ ಹಾಕಿದ್ರು. ಅಂಕ ಪಟ್ಟಿಯಲ್ಲಿ ರಾಕೇಶ್ 2ನೇ ಸ್ಥಾನದಲ್ಲಿ ಇದ್ದಾರೆ. ಆದ್ರೂ ಕಳಪೆ ಕೊಟ್ಟಿದ್ದು ಸರಿ ಅಲ್ಲ ಎನ್ನುವ ಮಾತುಗಳು ಕೇಳಿ ಬಂದವು.
8/ 8
ಅಲ್ಲದೇ ಫಿನಾಲೆ ಹತ್ತಿರ ಇರುವಾಗ ಕಳಪೆ ಪಡೆದಿದ್ದು, ಗೆಲುವಿನ ಓಟಕ್ಕೆ ಬ್ರೇಕ್ ಹಾಕುತ್ತಾ ಎನ್ನುವ ಪ್ರಶ್ನೆಗಳು ಎದ್ದಿವೆ. ಆದ್ರೂ ರಾಕೇಶ್ ಗೆಲ್ಲಬೇಕು ಎನ್ನುತ್ತಿದ್ದಾರೆ.