ಇಲ್ಲಿ ಆಗಿರುವ ಸಂಬಂಧಗಳು ಡಿಫರೆಂಟ್ ಆಗಿತ್ತು. ಸಾಧ್ಯವಾದರೆ ಕಾವ್ಯಶ್ರೀ ಗೌಡ, ಅಮೂಲ್ಯ ಗೌಡ, ಅನುಪಮಾ ಗೌಡ, ದಿವ್ಯಾ ಉರುಡುಗ ಜೊತೆ ನಾನು ಇಲ್ಲಿ ಮತ್ತೆ ಒಂದ್ಸಲ ಒಟ್ಟಿಗೆ ಊಟ ಮಾಡಬೇಕು ಎಂದು ತಮ್ಮ ಆಸೆಯನ್ನು ರಾಕೇಶ್ ಹೇಳಿಕೊಂಡಿದ್ದರು.
2/ 8
ರಾಕೇಶ್ ಅಡಿಗ ಕೇಳಿದ ಆಸೆಯನ್ನು ಬಿಗ್ ಬಾಸ್ ನೆರವೇರಿಸಿದ್ರು. ಮನೆಗೆ ಅನುಪಮಾ ಗೌಡ, ಅಮೂಲ್ಯ ಗೌಡ, ಕಾವ್ಯಶ್ರೀ ಗೌಡ ಅವರನ್ನು ಕರೆಸಿದ್ದರು. ಅವರನ್ನು ನೋಡಿ ಸ್ಪರ್ಧಿಗಳು ಖುಷಿಪಟ್ಟರು.
3/ 8
ಅನುಪಮಾ ಗೌಡ, ಅಮೂಲ್ಯ ಗೌಡ, ಕಾವ್ಯಶ್ರೀ ಗೌಡ ಜೊತೆ ಸ್ಪರ್ಧಿಗಳಿಗೆ ಗಾರ್ಡನ್ ಏರಿಯಾದಲ್ಲಿ ಊಟದ ವ್ಯವಸ್ಥೆ ಮಾಡಿದ್ದರು. ಎಲ್ಲರು ಎಂಜಾಯ್ ಮಾಡ್ತಾ ಊಟ ಮಾಡಿದ್ರು.
4/ 8
ಆಚೆ ಕಡೆ ನಾವು ಸಿಗಬಹುದು. ಆದರೆ ಬಿಗ್ ಬಾಸ್ ಮನೆ ತರ ಅದು ಆಗಲ್ಲ. ಅದಕ್ಕೆ ನಾನು ಬಿಗ್ ಬಾಸ್ ಬಳಿ ಈ ಆಸೆ ಕೇಳಿಕೊಂಡೆ. ನೀವೆಲ್ಲಾ ಬಂದಿದ್ದಕ್ಕೆ ಥ್ಯಾಂಕ್ಸ್ ಎಂದು ರಾಕೇಶ್ ಅಡಿಗ ಹೇಳಿದ್ದಾರೆ.
5/ 8
ಎಲ್ಲರಿಗೂ ಆಲ್ ದಿ ಬೆಸ್ಟ್. ಒಳ್ಳೆಯದಾಗಲಿ. ಥ್ಯಾಂಕ್ಸ್ ಎಲ್ಲರಿಗೂ, ಥ್ಯಾಂಕ್ಸ್ ರಾಕಿ ಎಂದು ಕಾವ್ಯಶ್ರೀ ಹೇಳಿದ್ದಾರೆ. ರಾಕೇಶ್ ಆಕೆ ತಲೆಗೆ ಪ್ರೀತಿಯಿಂದ ಮುತ್ತಿಟ್ಟಿದ್ದಾರೆ.
6/ 8
ನಿಮ್ಮ ಎಲ್ಲರನ್ನೂ ನಾನು ತುಂಬಾ ಮಿಸ್ ಮಾಡಿಕೊಂಡೆ. ಇಲ್ಲಿಂದ ನಗ್ತಾ ಹೋದೆ. ಆದ್ರೆ ಹೋದ ಮೇಲೆ ಇಲ್ಲಿಯ ಬೆಲೆ ತಿಳಿಯಿತು. ಎಲ್ಲರಿಗೂ ಆಲ್ ದಿ ಬೆಸ್ಟ್, ಥ್ಯಾಂಕ್ಸ್ ಪಾಪಾ ಎಂದು ಅಮೂಲ್ಯ ಗೌಡ ಹೇಳಿದ್ದಾರೆ.
7/ 8
ನೀನು ನಮ್ಮನ್ನೆಲ್ಲಾ ಕರೆಸಬೇಕು ಎಂದು ನಿನ್ನ ಆಸೆ ಕೇಳಿಕೊಂಡಾಗ ನಮಗೆ ತುಂಬಾ ಖುಷಿ ಆಯ್ತು ಎಂದು ಅನುಪಮಾ ಗೌಡ ಹೇಳಿದ್ದಾರೆ. ಎಲ್ಲರಿಗೂ ಆಲ್ ದಿ ಬೆಸ್ಟ್ ಎಂದಿದ್ದಾರೆ.
8/ 8
ರಾಕಿ ಹೇಳಿದ ಹಾಗೆಯೇ, ಬಿಗ್ ಬಾಸ್ ಮನೆ ತರ ಒಂದು ಚಾನ್ಸ್ ಯಾವತ್ತೂ ಸಿಗಲ್ಲ. ಐ ಥಿಂಕ್ ಈಡೀ ಪ್ರಪಂಚದಲ್ಲೇ ಮತ್ತೆ ಈ ರೀತಿಯ ಅವಕಾಶ ಸಿಗಲ್ಲ ಎಂದು ಅಮೂಲ್ಯ ಹೇಳಿದ್ದಾರೆ. ಎಲ್ಲರೂ ಖುಷಿಯಾಗಿ ಊಟ ಮಾಡಿ ಎಂಜಾಯ್ ಮಾಡಿದ್ದಾರೆ.