ಬಿಗ್ ಬಾಸ್ ಸೀಸನ್ 09 ರಲ್ಲಿ ಅಮೂಲ್ಯ ಗೌಡ ಮತ್ತು ರಾಕೇಶ್ ಅಡಿಗ ತುಂಬಾ ಆತ್ಮೀಯರಾಗಿದ್ದಾರೆ. ಯಾವಾಗಲೂ ಜೊತೆಗೆ ಇರುತ್ತಾರೆ. ತಮ್ಮ ಅನಿಸಿಕೆಗಳನ್ನು ಶೇರ್ ಮಾಡಿಕೊಳ್ತಾರೆ.
2/ 8
ಅಮೂಲ್ಯ ಗೌಡ ರಾಕೇಶ್ ನನ್ನು ಪಾಪು ಎಂದು ಕರೆಯುತ್ತಾಳೆ. ರಾಕಿ ಅಮ್ಮ ಅಮ್ಮ ಎಂದು ಕರೆಯುತ್ತಾರೆ. ಇಬ್ಬರ ನಡುವಿನ ಸಂಭಾಷಣೆ ತುಂಬಾ ತಮಾಷೆ ಆಗಿರುತ್ತೆ.
3/ 8
ತಲೆಗೆ ಎಣ್ಣೆ ಹಚ್ಚುವ ವಿಷಯದಲ್ಲಿ ಅಮೂಲ್ಯ ಮತ್ತು ರಾಕೇಶ್ ಅಡಿದ ಮಧ್ಯೆ ಮನಸ್ತಾಪ ಉಂಟಾಗಿದೆ. ನಿನಗೆ ಸ್ವಾಭಿಮಾನ, ಅಹಂಕಾರ ಹೆಚ್ಚು ಎಂದು ರಾಕೇಶ್ ಅಮೂಲ್ಯಗೆ ಹೇಳಿದ್ದಾರೆ.
4/ 8
ರಾಕೇಶ್ ಅಡಿಗ ಕೈಗೆ ಏಟು ಆಗಿರುವ ಕಾರಣ, ತಲೆಗೆ ಎಣ್ಣೆ ಹಚ್ಚು ಎಂದು ಅಮೂಲ್ಯ ಅವರನ್ನು ಕೇಳ್ತಾರೆ. ಅದಕ್ಕೆ ಅವರು ಆಗಲ್ಲ ಎನ್ನುತ್ತಾರೆ. ರಾಕಿ, ದಿವ್ಯಾ ರೇಗಿಸಿದ್ದಕ್ಕೆ ಅಮೂಲ್ಯ ಬೇಸರ ಮಾಡಿಕೊಂಡಿದ್ರು. ಅದಕ್ಕೆ ಎಣ್ಣೆ ಹಚ್ಚಲ್ಲ ಎಂದು ಹೇಳಿದ್ದಾರೆ.
5/ 8
ನಂತರ ನಾನೇ ಎಣ್ಣೆ ಹಚ್ಚಿಕೊಳ್ತೇನೆ ಅದಕ್ಕೆ ಕೋಪ ಮಾಡಿಕೊಳ್ಳಬೇಡ ಎಂದು ರಾಕೇಶ್ ಎಣ್ಣೆ ಹಚ್ಚಿಕೊಳ್ತಾರೆ. ಕೊನೆಗೆ ಉಳಿಯುವುದ ಅಷ್ಟೇ, ನಮ್ಮ ಕೈ, ನಮ್ಮ ತಲೆ ಎಂದು ರಾಕಿ ಹೇಳ್ತಾರೆ.
6/ 8
ನನಗೆ ಇವತ್ತು ನೀನು ಮಾತನಾಡಿದ್ದು ಇಷ್ಟ ಆಗಲಿಲ್ಲ. ನನ್ನ ಕೈ ನೋಯ್ತಾ ಇತ್ತು. ಅದಕ್ಕೆ ಎಣ್ಣೆ ಹಚ್ಚು ಎಂದೆ ಎಂದು ರಾಕೇಶ್ ಹೇಳ್ತಾರೆ. ಅಮೂಲ್ಯ, ನಿನ್ನ ಕೈ ನೋವಾಗಿದ್ದು ನನಗೆ ಗೊತ್ತಿಲ್ಲ. ನನಗೆ ಸ್ವಾಭಿಮಾನ ಹೆಚ್ಚು ಎಂದು ಹೇಳಿದ್ರು.
7/ 8
ನಿನಗೆ ಸ್ವಾಭಿಮಾನ ಹೆಚ್ಚು. ಅಹಂಕಾರವೂ ಹೆಚ್ಚು ಎಂದು ರಾಕಿ ಹೇಳ್ತಾರೆ. ಅದಕ್ಕೆ ಅಮೂಲ್ಯ ಬೇಸರ ಮಾಡಿಕೊಳ್ತಾರೆ. ಹೌದು ನನಗೆ ಸ್ವಾಭಿಮಾನ ಹೆಚ್ಚು ಎಂದು ಹೇಳಿ ಹೋಗ್ತಾರೆ.
8/ 8
ತುಂಬಾ ಹೊತ್ತು ಅಮೂಲ್ಯ ಗೌಡ ಕೋಪ ಮಾಡಿಕೊಂಡಿದ್ರು, ರಾಕಿ ಏನೇನೋ ಹೇಳಿ, ಹಾಡು ಹೇಳಿ ಸಮಾಧಾನ ಮಾಡಿದ್ರು. ನಂತರ ಅಮೂಲ್ಯ ರಾಕಿಯನ್ನು ಮಾತನಾಡಿಸಿದ್ರು.