ಓಟಿಟಿಯಿಂದ ಬಿಗ್ ಬಾಸ್ ಸೀಸನ್ 09 ಕ್ಕೆ ಎಂಟ್ರಿ ಪಡೆದಿದ್ದ ರೂಪೇಶ್ ಶೆಟ್ಟಿ ಹಾಗೂ ರಾಕೇಶ್ ಅಡಿಗ ಫೈನಲ್ಗೆ ಎಂಟ್ರಿ ಕೊಟ್ಟಿದ್ದಾರೆ. ಇಬ್ಬರ ಫೈನಲಿಸ್ಟ್ ಹೆಸರನ್ನು ಸುದೀಪ್ ಘೋಷಣೆ ಮಾಡಿದ್ದಾರೆ.
2/ 8
ರೂಪೇಶ್ ಶೆಟ್ಟಿ ಹಾಗೂ ರಾಕೇಶ್ ಅಡಿಗ ಓಟಿಟಿ ಸೀಸನ್ ನಿಂದ ತುಂಬಾ ಚೆನ್ನಾಗಿ ಆಡಿಕೊಂಡು ಬರುತ್ತಿದ್ದಾರೆ. ಇತರೆ ಸ್ಪರ್ಧಿಗಳನ್ನು ಹಿಂದಿಕ್ಕಿ ಕೊನೆ ಹಂತ ತಲುಪಿದ್ದಾರೆ.
3/ 8
ರೂಪೇಶ್ ಶೆಟ್ಟಿ ಸಾನ್ಯಾ ಐಯ್ಯರ್ ಔಟ್ ಆದ ಮೇಲೆ ಚೆನ್ನಾಗಿ ಆಟಗಳ ಮೇಲೆ ಗಮನ ಕೊಟ್ಟರು ಎಂದು ಅಭಿಮಾನಿಗಳು ಹೇಳಿದ್ದಾರೆ. ಎಲ್ಲಾ ಆಟಗಳನ್ನು ಚೆನ್ನಾಗಿ ಆಡಿ ಫೈನಲ್ ಗೆ ಎಂಟ್ರಿ ಕೊಟ್ಟಿದ್ದಾರೆ.
4/ 8
ಸದಾ ತಾಳ್ಮೆಯಿಂದ ಇರುತ್ತಿದ್ದ ರಾಕೇಶ್ ಅಡಿಗ ಕನ್ನಡಿಗರ ಮನಸ್ಸು ಗೆದ್ದಿದ್ದಾರೆ. ಎಲ್ಲೂ ಜಗಳವಾಡದೇ, ಖುಷಿ ಖುಷಿಯಿಂದ ಗೇಮ್ ಆಟಿ, ಮನೆಯವರ ಜೊತೆಯೂ ಚೆನ್ನಾಗಿ ಇದ್ದು, ಫೈನಲ್ ತಲುಪಿದ್ದಾರೆ.
5/ 8
ನನಗೆ ಇದು ಕನಸೋ, ನನಸೋ ಅಂತ ಅರ್ಥ ಆಗುತ್ತಿಲ್ಲ. ನನಗೆ ಮತ ನೀಡಿದ ಎಲ್ಲರಿಗೂ ಧನ್ಯವಾದ ಹೇಳುತ್ತೇನೆ. ಅದರಲ್ಲಿ ಕಿಚ್ಚ ಸುದೀಪ್ ಸರ್ ಫೋಕಸ್ ಅಂತ ಹೇಳಿದ್ದಕ್ಕೆ ನಾನು ಉತ್ಸಾಹದಿಂದ ಆಡಲು ಸಾಧ್ಯ ಆಯ್ತು. ಅದಕ್ಕೆ ಅವರಿಗೆ ಧನ್ಯವಾದ ಹೇಳುವೆ ಎಂದು ರೂಪೇಶ್ ಶೆಟ್ಟಿ ಹೇಳಿದ್ದಾರೆ.
6/ 8
ಸುದೀಪ್ ಸರ್ ಹೆಮ್ಮೆ ಪಡುವಂತೆ ಮಾಡ್ತೀನಿ ಅಂತ ಹೇಳಿದ್ದೆ, ಅದರಲ್ಲಿ ಈಗ ನಾನು ಫೈನಲಿಸ್ಟ್ ಆಗಿರೋದು ಕೂಡ ಸೇರಿಕೊಳ್ಳುವುದು. ಇನ್ನು ಹೊರಗಡೆ ಕೂಡ ಸುದೀಪ್ ಸರ್ ಹೆಮ್ಮೆ ಪಡುವಂತೆ ಮಾಡ್ತೀನಿ ಎಂದು ರೂಪೇಶ್ ಶೆಟ್ಟಿ ಹೇಳಿದ್ದಾರೆ.
7/ 8
ನಾನು ಫೈನಲ್ ಹೋಗಿದ್ದು ತುಂಬಾ ಖುಷಿ ಆಗ್ತಿದೆ. ನನಗೆ ಮತ ನೀಡಿದ ಎಲ್ಲರಿಗೂ ಧನ್ಯವಾದ. ಮತ್ತು ಸುದೀಪ್ ಅಣ್ಣನಿಗೂ ಧನ್ಯವಾದ ಎಂದು ರಾಕೇಶ್ ಅಡಿಗ ಹೇಳಿದ್ದಾರೆ.
8/ 8
ಇಬ್ಬರು ಫೈನಲ್ ಹಂತಕ್ಕೆ ಹೋಗಿದ್ದಾರೆ. ಇನ್ನುಳಿದ ಮೂವರು ಯಾರು ಅನ್ನೋ ಕುತೂಹಲ ಹೆಚ್ಚಾಗಿದೆ. ಇವತ್ತಿನ ಸಂಚಿಕೆಯಲ್ಲಿ ಅದು ತಿಳಿಯಲಿದೆ.