ಸೋಮವಾರದ ನಾಮಿನೇಷನ್ ಪ್ರಕ್ರಿಯಲ್ಲಿ ಮನೆಯವರೆಲ್ಲಾ ನಾಮಿನೇಟ್ ಆದ್ರು. ರೂಪೇಶ್ ಶೆಟ್ಟಿ ಮತ್ತು ರಾಕೇಶ್ ಅಡಿಗ ಮಾತ್ರ ಆಗಿರಲಿಲ್ಲ. ಕ್ಯಾಪ್ಟನ್ ರಾಜಣ್ಣ ರಾಕೇಶ್ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ದಾರೆ.
2/ 8
ಮನೆಯವರು ಸೇವ್ ಮಾಡಿದ್ರೂ ಕ್ಯಾಪ್ಟನ್ ನಾಮಿನೇಟ್ ಮಾಡಿದ್ರು ಅಂತ ರಾಕೇಶ್ ಅಡಿಗ ಸ್ಪಲ್ಪ ಬೇಸರ ಮಾಡಿಕೊಂಡ್ರು. 11 ನೇ ವಾರದಲ್ಲಿ ಸೇವ್ ಆಗಿದ್ದು ರೂಪೇಶ್ ಶೆಟ್ಟಿ ಮತ್ತು ಕ್ಯಾಪ್ಟನ್ ರಾಜಣ್ಣ ಮಾತ್ರ.
3/ 8
ರಾಕೇಶ್ ಅಡಿಗ ನಾಮಿನೇಟ್ ಆಗಿದ್ದಕ್ಕೆ ಆರ್ಯವರ್ಧನ್ ಗುರೂಜಿ ಖುಷಿಯಾಗಿ ಇದು ಬೇಕಿತ್ತು. ನನ್ನ ತಲೆ ಮೇಲೆ ಯಾರು ಕೈ ಇಡಬಾರದು ಎಂದು ನಾನೇ ಬೋಳಿಸಿಕೊಂಡಿದ್ದೇನೆ ಎಂದು ಹೇಳ್ತಾರೆ.
4/ 8
ಅದಕ್ಕೆ ಕೋಪಕೊಂಡ ರಾಕೇಶ್ ಏನು ಕಿತ್ತುಕೊಳ್ಳೋಕೆ ಆಗಲ್ಲ ಎಂದು ಆರ್ಯವರ್ಧನ್ ಗುರೂಜಿಗೆ ಸವಾಲ್ ಹಾಕಿದ್ದಾರೆ. ಮನೆ ಒಳಗೆ ಬಂದ ಮೇಲೆ ನೋಡೋಣ ಯಾರು ಕಿತ್ತುಕೊಳ್ತಾರೆ ಅಂತ ಎಂದು ಗುರೂಜಿ ಹೇಳಿದ್ದಾರೆ.
5/ 8
ಆರ್ಯವರ್ಧನ್ ಗುರೂಜಿ ಮತ್ತು ರಾಕೇಶ್ ಅಡಿಗ ಓಟಿಟಿಯಿಂದ ಜೊತೆಗೆ ಇದ್ದಾರೆ. ಇಷ್ಟು ದಿನ ಇಬ್ಬರು ಚೆನ್ನಾಗಿ ಇದ್ದರು ಈಗ ಜಗಳ ಮಾಡಿಕೊಂಡಿದ್ದಾರೆ.
6/ 8
ರಾಕೇಶ್ ಅಡಿಗ ಗುರೂಜಿಯನ್ನು ನಾಮಿನೇಟ್ ಮಾಡಿದ್ದರು. ಅದಕ್ಕ ಆರ್ಯವರ್ಧನ್ ಅವರ ಮಾತು ನನಗೆ ಇಷ್ಟ ಆಗಲ್ಲ. ಒಬ್ಬರ ಬಳಿ ಒಂದು ಹೇಳ್ತಾರೆ. ಇನ್ನೊಬ್ಬರ ಬಳಿ ಒಂದು ಹೇಳ್ತಾರೆ ಎಂದು ರಾಕಿ ಹೇಳಿದ್ದಾರೆ.
7/ 8
ಅದಕ್ಕೆ ಗುರೂಜಿಗೆ ಕೋಪ ಬಂದಿರುತ್ತೆ. ಇಬ್ಬರ ನಡುವೆ ಮಾತಿನ ಜಗಳ ಆಗುತ್ತೆ. ಕೊಚ್ಚೆ ಮೇಲೆ ಕಲ್ಲು ಹಾಕೋಕೆ ನಾನು ರೆಡಿ ಎಂದು ರಾಕೇಶ್ ಹೇಳ್ತಾರೆ.
8/ 8
ಓಟಿಟಿಯಿಂದ ಸ್ಟ್ರಾಂಗ್ ಅಭ್ಯರ್ಥಿಗಳಾಗಿರುವ ಇಬ್ಬರು ಚೆನ್ನಾಗಿ ಆಡ್ತಾ ಇದ್ದಾರೆ. ಇಬ್ಬರು ಟಾಪ್ 5 ನಲ್ಲಿ ಇರ್ತಾರೆ ಎಂದು ಅಭಿಮಾನಿಗಳು ಹೇಳ್ತಾ ಇದ್ದಾರೆ.