ಮನೆಯವರ ಜೊತೆ ಮಾತನಾಡಬೇಕು ಎಂಬ ಸ್ಪರ್ಧಿಗಳ ಬಹುದಿನದ ಹಂಬಲವನ್ನು ಬಿಗ್ ಬಾಸ್ ನೆರವೇರಸಿದ್ದಾರೆ. ಸ್ಪರ್ಧಿಗಳ ಮನೆಯವರು ಬಿಗ್ ಬಾಸ್ ಮನೆಗೆ ಬರುತ್ತಿದ್ದಾರೆ.
2/ 8
ಅನುಪಮಾ ಗೌಡ ಅವರ ತಾಯಿ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಅಮ್ಮನನ್ನು ನೋಡಿ ಅನುಪಮಾ ಖುಷಿಯಾಗಿದ್ದಾರೆ. ತಾಯಿಯನ್ನು ತಬ್ಬಿಕೊಂಡು ಭಾವುಕರಾಗಿದ್ದಾರೆ.
3/ 8
ಪ್ರಶಾಂತ್ ಸಂಬರ್ಗಿ ಅವರ ತಾಯಿ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಬಿಗ್ ಬಾಸ್ ಮನೆ ತುಂಬಾ ಚೆನ್ನಾಗಿ ಇದೆ. ನನಗೂ ಇಲ್ಲೇ ಇರೋಣ ಎನ್ನಿಸುತ್ತಿದೆ ಎಂದು ಹೇಳಿದ್ದಾರೆ.
4/ 8
ಪ್ರಶಾಂತ್ ಅವರ ಅಮ್ಮನಿಗೆ ರಾಜಣ್ಣ ಎಂದ್ರೆ ಇಷ್ಟ ಅಂತೆ. ವೋಟ್ ಮಾತ್ರ ಮಗನಿಗೆ ಹಾಕ್ತೀರಾ ಅಲ್ವಾ ಎಂದು ರಾಜಣ್ಣ ರೇಗಿಸಿದ್ದಾರೆ. ಎಲ್ಲರೂ ಖುಷಿಯಿಂದ ನಕ್ಕಿದ್ದಾರೆ.
5/ 8
ನಿಮ್ಮ ಮಾತು ಇಷ್ಟ. ನಿಮ್ಮ ಡೈಲಾಗ್ ಇಷ್ಟ. ನೀವು ದಡ್ಡರ ರೀತಿ ಮಾತನಾಡುತ್ತೀರಾ ಅಥವಾ ಇಲ್ವೋ ಅದು ಗೊತ್ತಾಗಲ್ಲ ಎಂದು ಅನುಪಮಾ ಅವರ ತಾಯಿ ಆರ್ಯವರ್ಧನ್ ಗುರೂಜಿಗೆ ಹೇಳಿದ್ದಾರೆ.
6/ 8
ಅನುಪಮಾ ಅವರದ್ದೇ ವಾಯ್ಸ್ ಮನೆಯಲ್ಲಿ ಎಂದು ಪ್ರಶಾಂತ್ ಸಂಬರ್ಗಿ ಹೇಳ್ತಾರೆ. ಅದಕ್ಕೆ ಅವರ ತಾಯಿ, ಅದನ್ನು ಯಾರಾದ್ರೂ ನಂಬ್ತಾರಾ? ಎಲ್ಲರೂ ವಾಯ್ಸ್ ಮಾಡ್ತೀರಿ ಈ ಮನೆಯಲ್ಲಿ ಎಂದು ಹೇಳಿದ್ದಾರೆ.
7/ 8
ರೂಪೇಶ್ ರಾಜಣ್ಣ ಅವರು ತಮ್ಮ ಮನೆಯವರು ಬರುತ್ತಾರೆ ಎಂದು ತುಂಬಾ ಕಾಯ್ತಾ ಇದ್ರು. ಮನೆಯ ಲೈಟ್ ಆಫ್ ಆದ್ರೂ ಬರಲಿಲ್ಲ. ಬೇಸರ ಮಾಡಿಕೊಂಡು ಮಲಗಿ ಬಿಟ್ರು.
8/ 8
ಎಲ್ಲರೂ ಮಲಗಿದ ಮೇಲೆ ರೂಪೇಶ್ ರಾಜಣ್ಣ ಪತ್ನಿ ಬರುತ್ತಾರೆ. ರಾಜಣ್ಣ ಖುಷಿಯಿಂದ ಕುಣಿದಾಡ್ತಾರೆ. ಅಲ್ಲದೇ ದೀಪಿಕಾ ಜೊತೆ ಓಡಾಡಿದ್ರೆ ನಾನ್ ಯಾಕ್ ಬೈಯ್ತೀನಿ ಎಂದು ಕೇಳ್ತಾರೆ.