ಬಿಗ್ ಬಾಸ್ ಸೀಸನ್ 9 ರಲ್ಲಿ ಪ್ರಶಾಂತ್ ಸಂಬರ್ಗಿ ಮತ್ತು ರೂಪೇಶ್ ರಾಜಣ್ಣ ಇದ್ದರು. ಸದಾ ಜಗಳ ಆಡುತ್ತಲೇ ಇದ್ದರು. ಅದಕ್ಕೆ ಖ್ಯಾತಿ ಹೊಂದಿದ್ದರು.
2/ 8
ಬಿಗ್ ಬಾಸ್ ಮನೆಯಲ್ಲಿದ್ದಷ್ಟು ದಿನ ಜಗಳಗಳನ್ನೇ ಮಾಡಿದ್ದಾರೆ. ಕನ್ನಡ ಹೋರಾಟದ ಬಗ್ಗೆಯೂ ಒಮ್ಮೆ ಪ್ರಶಾಂತ್ ಸಂಬರ್ಗಿ ಮಾತನಾಡಿದ್ದರು. ರೋಲ್ ಕಾಲ್ ಗಿರಾಕಿ ಎಂದಿದ್ದರು.
3/ 8
ಬಿಗ್ ಬಾಸ್ ಮನೆ ಆಚೆ ಅದು ದೊಡ್ಡ ಗಲಾಟೆ ಆಗಿ, ನಂತರ ಪ್ರಶಾಂತ್ ಸಂಬರ್ಗಿ ಕರುನಾಡ ಜನರ ಕ್ಷಮೆ ಕೇಳಿದ್ದರು. ಅಲ್ಲಿಂದ ರಾಜಣ್ಣ ಜೊತೆ ಗಲಾಟೆಗಳು ಕಡಿಮೆ ಆಗಿದ್ದವು.
4/ 8
ಈಗ ಪ್ರಶಾಂತ್ ಸಂಬರ್ಗಿ ರಾಜಣ್ಣನನ್ನು ನೆನೆಸಿಕೊಂಡಿದ್ದಾರೆ. ಗೆದ್ದವರಷ್ಟೇ ಬದುಕಿನ ಪಾಠ ಮಾಡಬೇಕೆಂದಿಲ್ಲ, ಸೋತವರು ಅವರಿಗಿಂತ ಚಂದದ ಪಾಠ ಕಲಿಸುತ್ತಾರೆ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ.
5/ 8
ಬಿಗ್ ಬಾಸ್ ಸೀಸನ್ 9 ರಿಂದ ಪ್ರಶಾಂತ್ ಸಂಬರ್ಗಿ ಬೇಗ ಔಟ್ ಆದರು. ರೂಪೇಶ್ ರಾಜಣ್ಣ ಟಾಪ್ 5 ತನಕ ಬಂದಿದ್ದರು. ಅದರಲ್ಲಿ ಟಾಪ್ 4 ಆಗಿದ್ದರು.
6/ 8
ಪ್ರಶಾಂತ್ ಸಂಬರ್ಗಿ ಮತ್ತು ರೂಪೇಶ್ ರಾಜಣ್ಣ ಬಿಗ್ ಬಾಸ್ ಮನೆಯಲ್ಲಿ ಒಪ್ಪಂದಕ್ಕೆ ಬಂದಿದ್ದರು. ಇನ್ನು ಮುಂದೆ ಜಗಳ ಮಾಡಬಾರದು ಅಂತ. ಆದ್ರೆ ಆ ರೀತಿ ಹೇಳಿ ಕೆಲವೇ ನಿಮಿಷಗಳಲ್ಲಿ ಜಗಳ ಮಾಡಿಕೊಂಡಿದ್ರು.
7/ 8
ಕಿಚ್ಚ ಸುದೀಪ್ ಮುಂದೆಯೂ ರೂಪೇಶ್ ರಾಜಣ್ಣ, ಬಿಗ್ ಬಾಸ್ ಮನೆಯ ಒಳಗೆ ಜಗಳವನ್ನು ಇಲ್ಲಿಗೆ ಬಿಡುತ್ತೇವೆ. ಹೊರಗಿನದ್ದು ಬೇರೆ ಎಂದು ಹೇಳಿದ್ರು.
8/ 8
ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಇಬ್ಬರು ಹಳೆಯದನ್ನು ಮರೆತು ಸ್ನೇಹಿತರಾಗಿದ್ದಾರೆ ಎನಿಸುತ್ತಿದೆ. ಅದಕ್ಕೆ ಈ ಪೋಸ್ಟ್ ಸಾಕ್ಷಿ ಎನ್ನುವಂತಿದೆ.