ಈ ವಾರದ ನಾಮಿನೇಷನ್ ಪ್ರಕ್ರಿಯೆ ವಿಭಿನ್ನವಾಗಿ ನಡೆಯಿತು. ಇಬ್ಬಿಬ್ಬರನ್ನು ಜೋಡಿ ಮಾಡಲಾಗಿತ್ತು. ಅವರು ಹೋಗಿ ಫೋಟೋ ತೆಗೆದು, ಯಾರನ್ನು ಸೇವ್ ಮಾಡ್ತೇವೆ ಎಂದು ಹೇಳಬೇಕಿತ್ತು. ಇಬ್ಬರು ಒಬ್ಬರ ಫೋಟೋ ತೆಗೆದ್ರೆ ಅವರು ಸೇವ್ ಆಗ್ತಿದ್ದರು. ಈ ವಾರ ಅಮೂಲ್ಯ ನಾಮಿನೇಟ್ ಆಗಿದ್ದಾರೆ.
2/ 9
ಅನುಪಮಾ ಅವರನ್ನು ಗುರೂಜಿ ತಮ್ಮ ಜೋಡಿಯಾಗಿ ಆಯ್ಕೆ ಮಾಡಿಕೊಂಡಿದ್ದರು. ನಾಮಿನೇಷನ್ ಪ್ರಕ್ರಿಯೆಯಲ್ಲಿ ಇಬ್ಬರು ಒಂದೇ ಫೋಟೋ ತೋರಿಸಬೇಕಾಕಿತ್ತು. ಆದ್ರೆ ಇಬ್ಬರು ಬೇರೆ ಬೇರೆ ಪೋಟೋ ತೋರಿಸಿದ ಕಾರಣ ಅನುಪಮಾ ನಾಮಿನೇಟ್ ಆಗಿದ್ದಾರೆ.
3/ 9
ಅರುಣ್ ಸಾಗರ್ ಅವರು ಸಹ ಮನೆಯಿಂದ ಹೋಗಲು ನಾಮಿನೇಟ್ ಆಗಿದ್ದಾರೆ. ಸದಾ ಮನೆಯವರನ್ನು ಖುಷಿ ಪಡಿಸಲು ಏನಾದ್ರೂ ತಮಾಷೆ ಮಾಡ್ತಾನೇ ಇರ್ತಾರೆ.
4/ 9
ಆರ್ಯವರ್ಧನ್ ಗುರೂಜಿ ಡಬಲ್ ಗೇಮ್ ಆಡ್ತಾರೆ ಎಂದು ಸುದೀಪ್ ಮುಂದೆಯೇ ಮನೆಯವರೆಲ್ಲಾ ಹೆಚ್ಚು ವೋಟ್ ಹಾಕಿದ್ದರು. ಇವರು ನಾಮಿನೇಟ್ ಆಗಿದ್ದು, ಸೇವ್ ಆಗ್ತಾರಾ ನೋಡಬೇಕು.
5/ 9
ವೈಲ್ಡ್ ಕಾರ್ಡ್ ನಿಂದ ಮತ್ತೆ ಎಂಟ್ರಿ ಆಗಿರುವ ದೀಪಿಕಾ ದಾಸ್ ಸಹ ನಾಮಿನೇಟ್ ಆಗಿದ್ದಾರೆ. ಈ ವಾರ ದೀಪಿಕಾ ಅವರು ಎಲ್ಲರ ಜೊತೆ ಮಾತನಾಡುತ್ತಿದ್ದಾರೆ. ಆಟಗಳನ್ನು ಚೆನ್ನಾಗಿ ಆಡ್ತಾ ಇದ್ದಾರೆ.
6/ 9
ದಿವ್ಯಾ ಉರುಡುಗ ಸಹ ನಾಮಿನೇಟ್ ಆಗಿದ್ದಾರೆ. ಕಳೆದ ಬಾರಿಯ ರೀತಿ ಟಾಸ್ಕ್ ಗಳನ್ನು ಅಷ್ಟು ಚೆನ್ನಾಗಿ ಆಡ್ತಾ ಇಲ್ಲ ಎಂಬ ಆರೋಪಗಳು ಇವೆ. ಇವರು ಮತ್ತು ಅಮೂಲ್ಯ ನಾಮಿನೇಷನ್ ಪ್ರಕ್ರಿಯೆಗೆ ಹೋಗಿದ್ದರು. ಆಗ ಇಬ್ಬರ ಬೇರೆ ಬೇರೆ ಫೋಟೋ ಹಿಡಿದಿದ್ದರು.
7/ 9
ಮನೆಯಲ್ಲಿ ಕಾವ್ಯಶ್ರೀ ಮಾತನಾಡುತ್ತಲೇ ಕಾಲ ಕಳೆಯುತ್ತಾರೆ. ಯಾವುದೇ ಗೇಮ್ ಆಡಲ್ಲ. ಈಗ ಅನುಪಮಾ, ರಾಕೇಶ್ ಗುಂಪಿನ ಜೊತೆ ಓಡಾಡ್ತಾಳೆ ಎಂದು ಆರೋಪ ಕೇಳಿ ಬಂದಿದೆ. ನಾಮಿನೇಟ್ ಆಕೆಗೆ ಪರೀಕ್ಷೆ ಎಂದು ಅರುಣ್ ಸಾಗರ್ ಹೇಳಿದ್ದಾರೆ.
8/ 9
ಪ್ರಶಾಂತ್ ಸಂಬರ್ಗಿ ದೀಪಿಕಾ ಜೋಡಿ ಒಳ ಹೋಗಿತ್ತು. ಇಬ್ಬರೂ ಪ್ರಶಾಂತ್ ಫೋಟೋ ಹಿಡಿದಿದ್ದರು. ಆದ ಕಾರಣ ಪ್ರಶಾಂತ್ ನಾಮಿನೇಟ್ ಆಗಿರಲಿಲ್ಲ. ಆದ್ರೆ ಕ್ಯಾಪ್ಟನ್ ರಾಕೇಶ್ ನೇರವಾಗಿ ಅವರನ್ನು ನಾಮಿನೇಟ್ ಮಾಡಿದ್ರು.
9/ 9
ರೂಪೇಶ್ ಶೆಟ್ಟಿ ಸಹ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದಾರೆ. 9 ಜನ ಘಟಾನುಘಟಿ ನಾಯಕರಲ್ಲಿ ಯಾರು ಸೇವ್ ಆಗ್ತಾರೆ. ಯಾರು ಮನೆಗೆ ಹೋಗ್ತಾರೆ ನೋಡಬೇಕು.