ಬಿಗ್ ಬಾಸ್ ಸೀಸನ್ 09ಕ್ಕೆ ಪ್ರವೀಣರಾಗಿ ಬಂದಿರುವ ದೀಪಿಕಾ ದಾಸ್, ಆಟಗಳನ್ನ ಸಖತ್ ಆಗಿ ಆಡ್ತಾರೆ. ಆಟ ಮಾತ್ರವಲ್ಲ, ತಮ್ಮ ಬೋಲ್ಡ್ ಲುಕ್ ನಿಂದಲೂ ಸಹ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ.
2/ 8
ಇದೀಗ ದೀಪಿಕಾ ದಾಸ್ ಮಿಣ ಮಿಣ ಮೀನಾಕ್ಷಿ ಆಗಿದ್ದಾರೆ. ಅರುಣ್ ಸಾಗರ್ ಅವರ ಅಣ್ಣ ಆಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಗಂಡು ಹುಡುಕುತ್ತಿದ್ದಾರೆ. ಯಾವ ಹುಡುಗ ಸಿಗ್ತಾನಾ ನೋಡಬೇಕು!
3/ 8
ದೀಪಿಕಾ ದಾಸ್ ಮೀನಾಕ್ಷಿ ಆಗಿರುವುದನ್ನು ನೋಡಿ ರಾಕೇಶ್, ಅನುಪಮಾ ಗೌಡ, ಅಮೂಲ್ಯ ಗೌಡ ಶಾಕ್ ಆಗಿದ್ದಾರೆ. ಇವರು ದೀಪಿಕಾನೇನಾ ಅಂತ ಮಾತಾಡಿಕೊಳ್ತಿದ್ದಾರೆ!
4/ 8
"ನಮಸ್ಕಾರ ರೀ ನಾನು ಧಾರಾವಾಡದಿಂದ ಬಂದಿದ್ದೇನೆ. ನನ್ನ ತಂಗಿ ಮೀನಾಕ್ಷಿಗೆ ಗಂಡು ಬೇಕು" ಎಂದು ಅರುಣ್ ಸಾಗರ್ ಹೇಳುತ್ತಾರೆ. "ರಾಕೇಶ್ ಚೆನ್ನಾಗಿದ್ದಾನೆ" ಎಂದು ದೀಪಿಕಾ ಹೇಳ್ತಾರೆ.
5/ 8
ಇಲ್ನೋಡಿ, ದೀಪಿಕಾ ದಾಸ್ಗೆ ವರನಾಗಲು ರೂಪೇಶ್ ಶೆಟ್ಟಿ ಈ ರೀತಿ ರೆಡಿಯಾಗಿದ್ದಾರೆ. "ನನಗೆ ನಿಮ್ಮ ಮಿಣ ಮಿಣ ಮೀನಾಕ್ಷಿ ಓಕೆ" ಎಂದಿದ್ದಾರೆ. "ಮದುವೆ ಆಗ್ತೀನಿ" ಎಂದಿದ್ದಾರೆ.
6/ 8
ಮನೆಯ ಎಲ್ಲಾ ಹುಡುಗರನ್ನು ನೋಡಿದ ಮೇಲೆ, ದೀಪಿಕಾ ದಾಸ್ ಅಂದ್ರೆ 'ಮೀನಾಕ್ಷಿ' "ನನಗೆ ಆರ್ಯವರ್ಧನ್ ಗುರೂಜಿ ಓಕೆ" ಎಂದು ಹೇಳಿದ್ದಾರೆ. ಅದಕ್ಕೆ ಗುರೂಜಿ ಖುಷಿ ಆಗಿದ್ದಾರೆ!
7/ 8
ಮೀನಾಕ್ಷಿ ಅವರು ಆರ್ಯವರ್ಧನ ಗುರೂಜಿ ಕೊರಳಲ್ಲಿರುವ ಚೈನ್ ಬೇಕು ಎನ್ನುತ್ತಾರೆ. ಅದಕ್ಕೆ ಗುರೂಜಿ ಕತ್ತಿನಲ್ಲಿ ಇರುವ "ಚೈನ್ ಕೊಡ್ತೀ. ಬಾಡಿಯಲ್ಲಿರುವ ಮನಸ್ಸು ಕೊಡುತ್ತೇನೆ" ಎನ್ನುತ್ತಾರೆ.
8/ 8
ಆರ್ಯವರ್ಧನ್ ಗುರೂಜಿ ನನಗೆ ಮದುವೆ ಮಾಡಿ ಎನ್ನುತ್ತಾರೆ. ರೂಪೇಶ್ ಶೆಟ್ಟಿ ನನಗೆ ಮದುವೆ ಮಾಡಿ ಎನ್ನುತ್ತಾರೆ. ಆಗ ಮಿನಾಕ್ಷಿ ನನಗೆ ಯಾವ ಗಂಡು ಬೇಡ ಎಂದು ಹೋಗುತ್ತಾಳೆ.