ವಾರದ ಕಥೆ ಕಿಚ್ಚನ ಜೊತೆಯಲಿ ಕಾರ್ಯಕ್ರಮದಲ್ಲಿ, ಸುದೀಪ್ ಅಮೂಲ್ಯ ಅವರಿಗೆ ಪ್ರಶ್ನೆ ಮಾಡಿದ್ದಾರೆ. ಅಮೂಲ್ಯ ಅವರೇ, ಗಂಡಸರ ಬಾತ್ ರೂಮ್ ಅಂತ ಬರೆದವರು ನೀವು. ಈಗ ಗಟ್ಟಿ ಹಾಲು ಬೇಕು ಅಂತಿದ್ದೀರಿ. ನಿಮಗೆ ಈ ಮನೆಗೆ ಹೊಂದಿಕೊಳ್ಳುವುದು ಕಷ್ಟನಾ ಎಂದು ಕೇಳಿದ್ದಾರೆ.
2/ 8
ಹೊಂದಿಕೊಳ್ಳೋದು ಕಷ್ಟ ಆಗ್ತಿಲ್ಲ ಸರ್. ಮೊದಲೆಲ್ಲಾ ನಾನು ಹಾಲು ಕುಡಿದಿಲ್ಲ. ಸಿಗ್ತಿದ್ದಿದ್ದು ಒಂದು ಟೀ. ಅದು ನನಗೆ ಗಟ್ಟಿ ಹಾಲಲ್ಲಿ ಬೇಕಿತ್ತು ಅದಕ್ಕೆ ಕೇಳಿದೆ ಎಂದು ಅಮೂಲ್ಯ ಗೌಡ ಹೇಳಿದ್ದಾರೆ.
3/ 8
ಅಮೂಲ್ಯ ಅವರು ಅವರ ಹೇಳಿಕೆಯಿಂದ ಮನೆಯನ್ನು ಒಡೆಯುತ್ತಿದ್ದಾರೆ. ಯಾರೋ ಒಬ್ಬರಿಗೆ ಆಗುತ್ತಿಲ್ಲ ಅಂದ್ರೆ ಅವರನ್ನ ಆಚೆ ಇಡಿ ಅಂತ ಹೇಳಿದೆ. ನಾವೆಲ್ಲಾ ಒಟ್ಟಿಗೆ ಇರೋಣ, ಅದು ಜೀವನ. ಅದು ಬದುಕು ಅಂತ ಹೇಳಿದೆ. ಗಟ್ಟಿ ಹಾಲು ಬೇಕು ಅನ್ನೋದು ಸುಪೀರಿಯಾರಿಟಿ ಕಾಂಪ್ಲೆಕ್ಸ್ ನ ಪರಮಾವಧಿ ಅಂತ ನನಗೆ ಅನಿಸುತ್ತಿದೆ ಎಂದು ಪ್ರಶಾಂತ್ ಸಂಬರ್ಗಿ ಹೇಳಿದ್ದಾರೆ.
4/ 8
ನನ್ನ ಕ್ಯಾಪ್ಟೆನ್ಸಿಯಲ್ಲಿ ಬಂದ ಹಾಲಿನ ಪ್ರಮಾಣ ಕಮ್ಮಿ ಇತ್ತು. ಕೆಲವರು ಒಟ್ಟಿಗೆ ಮಾಡೋಣ ಅಂತ ಹೇಳಿದರು. ಇನ್ನೂ ಕೆಲವರು ಬೇರೆ ರೀತಿ ಹೇಳಿದರು. ಎಲ್ಲರೂ ಕಾಮನ್ ಗ್ರೌಂಡ್ಸ್ ನಲ್ಲಿ ಒಪ್ಪಲಿಲ್ಲ ಎಂದು ರಾಕೇಶ್ ಅಡಿಗ ಹೇಳಿದ್ರು.
5/ 8
ಅಮೂಲ್ಯ ಅವರಿಂದ ಮಾತ್ರ ಈ ಸಮಸ್ಯೆ ಆಗಲಿಲ್ಲ ಸರ್. ಎಲ್ಲರೂ ನಮಗೆ ಆ ಟೈಂಗೆ ಬೇಕು. ಈ ಟೈಮ್ಗೆ ಟೀ ಬೇಕು ಅಂದಿದ್ದಕ್ಕೆ ಈ ರೀತಿ ಆಯ್ತು ಎಂದು ದಿವ್ಯಾ ಉರುಡುಗ ಹೇಳಿದ್ದಾರೆ.
6/ 8
ನಾವೆಲ್ಲಾ ಅಗ್ರಿ ಆದ್ವಿ ಸರ್. ಮನೆಯವರೆಲ್ಲಾ ಒಟ್ಟಿಗೆ ಟೀ ಮಾಡಿಕೊಂಡು ಕುಡಿಯೋಣ ಅಂತ. ಆದ್ರೆ ಅಮೂಲ್ಯ ಮಾತ್ರ ಬೇರೆ ಬೇಕು ಅಂದ್ರು ಅಂತ ರೂಪೇಶ್ ರಾಜಣ್ಣ ಹೇಳಿದ್ದಾರೆ.
7/ 8
9 ಜನರ ಜೊತೆ ಒಬ್ಬರು ಹೊಂದಿಕೊಳ್ಳುವುದು ಸುಲಭ ಸರ್. 9 ಜನರು ಒಬ್ಬರಿಗೆ ಹೊಂದಿಕೊಳ್ಳೋದು ಕಷ್ಟ. ಅಮೂಲ್ಯಗೆ ಕಷ್ಟ ಆಗ್ತಿರಬಹುದು ಎಂದು ರೂಪೇಶ್ ರಾಜಣ್ಣ ಅಮೂಲ್ಯಗೆ ಹೇಳಿದ್ದಾರೆ.
8/ 8
ಮನೆಯಲ್ಲಿ ಯಾವ ಮಟ್ಟಿಗೆ ಒಟ್ಟಿಗೆ ಕೂತುಕೊಂಡು ಕುಡಿಯುತ್ತಾರೆ ಎಂದು ಅವರಿಗೆ ಗೊತ್ತಿದೆ. ನಾನು ಹೇಳಬೇಕಿಲ್ಲ. ಈ ಬಾರಿ ಕಡಿಮೆ ಜನ ಇದ್ರು. ಅದಕ್ಕೆ ಒಬ್ಬಬ್ಬರಿಗೆ ಬರುತ್ತೆ ಅಂತ ಬೇರೆ ಕೇಳಿದೆ ಅಷ್ಟೆ ಎಂದು ಅಮೂಲ್ಯ ಗೌಡ ಹೇಳಿದ್ದಾರೆ.