ಫಿನಾಲೆಯಲ್ಲಿ 5 ಜನರಿಗೆ ಮಾತ್ರ ಅವಕಾಶ ಇರುವುದರಿಂದ, ಇಂದು ಒಬ್ಬರ ಆಟ ಕೊನೆಗೊಳ್ಳಲೇ ಬೇಕಿದೆ. ಇಂದು ಒಬ್ಬ ಅಭ್ಯರ್ಥಿ ಮನೆಗೆ ಹೋಗಲಿದ್ದಾರೆ ಎಂದು ಬಿಗ್ ಬಾಸ್ ಮನೆಯವರಿಗೆ ತಿಳಿಸಿದ್ದಾರೆ.
2/ 8
ಯಾವುದೇ ಹಂತದಲ್ಲಿ ವೇದಿಕೆ ಮೇಲೆ ಬಂದಾಗ ಸದಸ್ಯ ಕಾಣಿಸದೇ ಇದ್ದಾಗ, ಎಲಿಮಿನೇಷನ್ ಪ್ರಕ್ರಿಯೆ ಮುಗಿಯುತ್ತೆ ಎಂದು ಬಿಗ್ ಬಾಸ್ ತಿಳಿಸಿದ್ದಾರೆ. ಮನೆಯವರೆಲ್ಲಾ ಶಾಕ್ ನಲ್ಲಿ ಇದ್ದಾರೆ.
3/ 8
ಹೇಗೆ ಬದುಕಬೇಕು ಎನ್ನುವುದನ್ನು ಬಿಗ್ ಬಾಸ್ ಮನೆ ನನಗೆ ಕಲಿಸಿದೆ ಎಂದು ಆರ್ಯವರ್ಧನ್ ಗುರೂಜಿ, ಕೆಳಗೆ ಹೋಗಿ ಮೇಲೆ ಬಂದಿದ್ದಾರೆ. ಅವರು ತಮ್ಮ ಆಟ ಮುಂದುವರಿಸಿದ್ದಾರೆ.
4/ 8
ಮಾತುಗಳು ಕಡಿಮೆ ಬರುತ್ತಿವೆ ಎಂದು ದಿವ್ಯಾ ಉರುಡುಗ ಹೇಳಿದ್ದಾರೆ. ಅವರು 9 ಎಂಬ ವೇದಿಕೆಯಿಂದ ಕೆಳಗೆ ಹೋಗುತ್ತಿದ್ದಾರೆ. ಎಲ್ಲರೂ ಬೇಸರ ಮಾಡಿಕೊಂಡಿದ್ದಾರೆ.
5/ 8
ಪ್ರವೀಣರಾಗಿ ಬಂದ ದೀಪಿಕಾ ದಾಸ್, ಔಟ್ ಆಗಿ, ಮತ್ತೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಅವರು ಸಹ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
6/ 8
ನಾನು ಹೋದ್ರೆ ನನ್ನ ಮಿಸ್ ಮಾಡಿಕೊಳ್ಳಿ ಎಂದು ರೂಪೇಶ್ ಶೆಟ್ಟಿ ಕೆಳಗೆ ಹೋಗುತ್ತಾರೆ. ಆದ್ರೆ ಮೇಲೆ ಬರಲಿಲ್ಲ. ಇದೊಂದು ಟ್ವಿಸ್ಟ್, ಓ ಮೈ ಗಾಡ್ ಎಂದು ಕಿರುಚುತ್ತಾರೆ. ಅವರೇ ಔಟ್ ಆಗಿರುವ ಸಾಧ್ಯತೆ ಇದೆ.
7/ 8
ಪ್ರೋಮೋದ ಪ್ರಕಾರ ಮನೆಯಲ್ಲಿ ಗುರೂಜಿ, ರಾಜಣ್ಣ, ರಾಕೇಶ್ ಇದ್ದಾರೆ. ಇನ್ನಿಬ್ಬರು ಸದಸ್ಯರು ಯಾರು ಎಂದು ಗೊತ್ತಿಲ್ಲ. ಆದ್ರೆ ಗುರೂಜಿ ಕಣ್ಣೀರು ಹಾಕಿದ್ದಾರೆ.
8/ 8
ರೂಪೇಶ್ ಶೆಟ್ಟಿಯೇ ಔಟ್ ಆಗಿರಬಹುದು ಎಂದು ಹೇಳಲಾಗ್ತಿದೆ. ಆದ್ರೆ ಸರಿಯಾದ ಮಾಹಿತಿ ಸಿಕ್ಕಿಲ್ಲ. ಇವತ್ತಿನ ಸಂಚಿಕೆಯಲ್ಲಿ ತಿಳಿಯಲಿದೆ.