ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಆಡಲು 2 ತಂಡಗಳಾಗಿವೆ. ಕೂಲ್ ಕಿಲಾಡಿಗಳು ತಂಡದಲ್ಲಿ ದಿವ್ಯಾ ಉರುಡುಗ, ದೀಪಿಕಾ ದಾಸ್, ರಾಕೇಶ್ ಅಡಿಗ, ಆರ್ಯವರ್ಧನ್ ಗುರೂಜಿ, ಅರುಣ್ ಸಾಗರ್ ಇದ್ದಾರೆ.
2/ 8
ಮಿನುಗುತಾರೆ ತಂಡದಲ್ಲಿ ಪ್ರಶಾಂತ್ ಸಂಬರ್ಗಿ, ರೂಪೇಶ್ ರಾಜಣ್ಣ, ರೂಪೇಶ್ ಶೆಟ್ಟಿ, ಅಮೂಲ್ಯ ಗೌಡ, ಅನುಪಮಾ ಗೌಡ ಇದ್ದಾರೆ.
3/ 8
ಬಿಗ್ ಬಾಸ್ ಒಂದು ಟಾಸ್ಕ್ ನೀಡಿದ್ದಾರೆ. ಒಬ್ಬಬ್ಬ ಅಭ್ಯರ್ಥಿ ಒಮ್ಮೆ ಸ್ವಿಚ್ ಹಾಕಬೇಕು. ಯಾವ ಬಣ್ಣದ ಲೈಟ್ ಹೆಚ್ಚು ಬರುತ್ತೋ, ಆ ತಂಡ ಒಂದು ಸ್ಟಾರ್ ಪಡೆಯುತ್ತೆ.
4/ 8
ಕೂಲ್ ಕಿಲಾಡಿಗಳು ತಂಡದಿಂದ ದೀಪಿಕಾ ಅವರು ಬಂದು ಸ್ವಿಚ್ ಆನ್ ಮಾಡ್ತಾರೆ. ನೀವು 2 ಬಾರಿ ಸ್ವಿಚ್ ಹಾಕಿದ್ರಿ ಎಂದು ಎದುರಾಳಿ ತಂಡದ ರೂಪೇಶ್ ರಾಜಣ್ಣ ಆರೋಪ ಮಾಡ್ತಾರೆ.
5/ 8
ದೀಪಿಕಾ ದಾಸ್ ತಂಡ ಇಲ್ಲ, ಅವರು ಒಂದೇ ಬಾರಿ ಸ್ವಿಚ್ ಆನ್ ಮಾಡಿದ್ದು ಎನ್ನುತ್ತಾರೆ. ದಿವ್ಯಾ, ನಿಮ್ಮ ತಂಡದವರು ಅದೇ ರೀತಿ ಎಷ್ಟೋ ಬಾರಿ ಮಾಡಿದ್ದಾರೆ ಎಂದು ಹೇಳ್ತಾರೆ.
6/ 8
ಮಿನುಗುತಾರೆ ತಂಡದಿಂದ ಪ್ರಶಾಂತ್ ಸಂಬರ್ಗಿ ಸ್ವಿಚ್ ನ್ನು 2 ಬಾರಿ ಆನ್ ಮಾಡುತ್ತಾರೆ. ಆಗ ಕೂಲ್ ಕಿಲಾಡಿ ತಂಡ ಗಲಾಟೆ ಮಾಡ್ತಾರೆ. ಪ್ರಶಾಂತ್ ಸಂಬರ್ಗಿ ಪ್ರತಿ ಬಾರಿ ಇದೇ ರೀತಿ ಮಾಡ್ತಾರೆ ಎಂದು ಹೇಳಿದ್ದಾರೆ.
7/ 8
ಅದಕ್ಕೆ ಅಮೂಲ್ಯ ಗೌಡ ಆಗಿನಿಂದ ನಿಮ್ಮ ತಂಡದವರು ತಪ್ಪು ಮಾಡ್ತಾ ಇದ್ದಾರೆ. ನಮ್ಮ ತಂಡದವರೂ ಮಾಡ್ತಾ ಇದ್ದಾರೆ ಎಂದು ಏರು ಧ್ವನಿಯಿಂದ ಹೇಳ್ತಾರೆ.
8/ 8
ಅದಕ್ಕೆ ಬೇಸರಗೊಂಡ ದಿವ್ಯಾ, ಹೌದು ಅಮ್ಮು 2 ತಂಡದವರು ರೂಲ್ಸ್ ಬ್ರೇಕ್ ಮಾಡಿದ್ದಾರೆ. ಆದ್ರೆ ನಾವು ಇಷ್ಟು ವಾದ ಮಾಡಿಲ್ಲ ಎಂದು ಹೇಳಿ ಬೇಸರ ಮಾಡಿಕೊಂಡು ಕೂರ್ತಾರೆ.