Bigg Boss Kannada: ಬಿಗ್ಬಾಸ್ ಈ ಸೀಸನ್ನ ಕೊನೆಯ ಕಳಪೆ ಪಟ್ಟ ಯಾರಿಗೆ? ಜೈಲು ಸೇರೋದು ಯಾರು?
ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಮುಗಿದ ಮೇಲೆ ಒಬ್ಬರಿಗೆ ಕಳಪೆ, ಒಬ್ಬರಿಗೆ ಉತ್ತಮ ನೀಡಲಾಗುತ್ತೆ. ಈ ವಾರ ನೀಡೋ ಕಳಪೆ ಮತ್ತು ಉತ್ತಮ ಕೊನೆಯದ್ದಾಗಿದೆ. ಯಾಕಂದ್ರೆ ಡಿಸೆಂಬರ್ 31, ಜನವರಿ 01 ರಂದು ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಹಾಗಾದರೆ ಬಿಗ್ ಸೀಸನ್ 09ರ ಕೊನೆಯ ಕಳಪೆ, ಉತ್ತಮ ಪಟ್ಟ ಯಾರಿಗೆ? ರಾಜಣ್ಣನಾ? ರಾಕೇಶಾ? ನೀವೇ ನೋಡಿ....
ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಮುಗಿದ ಮೇಲೆ ಒಬ್ಬರಿಗೆ ಕಳಪೆ, ಒಬ್ಬರಿಗೆ ಉತ್ತಮ ನೀಡಲಾಗುತ್ತೆ. ಈ ವಾರ ನೀಡೋ ಕಳಪೆ ಮತ್ತು ಉತ್ತಮ ಕೊನೆಯದ್ದಾಗಿದೆ. ಯಾಕಂದ್ರೆ ಡಿಸೆಂಬರ್ 31, ಜನವರಿ 01 ರಂದು ಗ್ರ್ಯಾಂಡ್ ಫಿನಾಲೆ ನಡೆಯಲಿದೆ.
2/ 8
ರೂಪೇಶ್ ಶೆಟ್ಟಿ ತಮ್ಮ ಕಳಪೆಯನ್ನು ಅರುಣ್ ಸಾಗರ್ ಅವರಿಗೆ ಕೊಟ್ಟಿದ್ದಾರೆ. ಈ ವಾರ ಕಡಿಮೆ ಅಂಕವನ್ನು ಗಳಿಸಿಕೊಂಡಿದ್ದಾರೆ ಎಂಬ ಕಾರಣ ಕೊಟ್ಟರು.
3/ 8
ಅಮೂಲ್ಯ ಗೌಡ ಅವರು ಕಳಪೆಯನ್ನು ಅರುಣ್ ಸಾಗರ್ಗೆ ಕೊಟ್ಟಿದ್ದಾರೆ. ಅವರು ಅದೇ ಕಾರಣ ಹೇಳಿದ್ದಾರೆ. ಕಡಿಮೆ ಪಾಯಿಂಟ್ಸ್ ಕಾರಣ ಕಳಪೆ ಕೊಟ್ಟಿದ್ದೇನೆ ಎಂದು ಹೇಳಿದ್ದಾರೆ.
4/ 8
ರೂಪೇಶ್ ರಾಜಣ್ಣ ತಮ್ಮ ಕಳಪೆಯನ್ನು ರಾಕೇಶ್ ಅಡಿಗಾಗೆ ಕೊಟ್ಟಿದ್ದಾರೆ. ಗೇಮ್ ನಲ್ಲಿ ನನಗೆ ಆಗಲ್ಲ ಎಂದು ಗಿವ್ ಅಪ್ ಮಾಡಿದ್ರು ಅದಕ್ಕೆ ಕೊಟ್ಟಿದ್ದೇನೆ ಎಂದು ಹೇಳಿದ್ರು.
5/ 8
ದೀಪಿಕಾ ಅವರು ಸಹ ಕಳಪೆಯನ್ನು ರಾಕೇಶ್ ಗೆ ಕೊಟ್ಟಿದ್ದಾರೆ. ಆಟವನ್ನು ಇನ್ನೂ ಬೇರೆ ರೀತಿ ಟ್ರೈ ಮಾಡಬಹುದಿತ್ತು. ಆದ್ರೆ ಅವರು ಗೇಮ್ ಬಿಟ್ಟು ಕೊಟ್ರು ಎಂಬ ಕಾರಣ ನೀಡಿದ್ದಾರೆ.
6/ 8
ರಾಕೇಶ್ ಅಡಿಗ ಕಳಪೆಯನ್ನು ರೂಪೇಶ್ ರಾಜಣ್ಣ ಅವರಿಗೆ ಕೊಟ್ಟಿದ್ದಾರೆ. ಪ್ರಾಪರ್ಟಿಗಳನ್ನು ಹಾಳು ಮಾಡಿ, ಬಿಗ್ ಬಾಸ್ ನಿಂದ ಎಚ್ಚರಿಕೆ ತೆಗೆದುಕೊಂಡ್ರು ಎಂದು ಹೇಳಿದ್ದಾರೆ.
7/ 8
ಅರುಣ್ ಸಾಗರ್ ಸಹ ಕಳಪೆಯನ್ನು ರೂಪೇಶ್ ರಾಜಣ್ಣಗೆ ಕೊಟ್ಟಿದ್ದಾರೆ. ಗೆಲ್ಲುವ ಭರದಲ್ಲಿ ಗೇಮ್ ಪ್ರಾಪರ್ಟಿ ಬಗ್ಗೆ ಯೋಚನೆ ಮಾಡುವುದು ಸರಿ ಅಲ್ಲ ಎಂದು ಹೇಳಿದ್ದಾರೆ.
8/ 8
ಆರ್ಯವರ್ಧನ್ ಗುರೂಜಿ ಕಳಪೆಯನ್ನು ರೂಪೇಶ್ ರಾಜಣ್ಣಗೆ ನೀಡಿದ್ದಾರೆ. ರಾಜಣ್ಣನ ಮಾತು ನನಗೆ ನೋವು ಉಂಟು ಮಾಡಿದೆ ಎಂದು ಕಾರಣ ಕೊಟ್ಟಿದ್ದಾರೆ.