ಬಿಗ್ ಬಾಸ್ ಸೀಸನ್ 09 ಪ್ರವೀಣರು ಮತ್ತು ನವೀನರನ್ನು ಒಳಗೊಂಡಿದೆ. ನವೀನರಾಗಿ ಮಂಗಳಗೌರಿ ಖ್ಯಾತಿಯ ನಟಿ ಕಾವ್ಯಶ್ರೀ ಗೌಡ ಈ ಬಾರಿ ಇದ್ದರು. 10ನೇ ವಾರದಲ್ಲಿ ತಮ್ಮ ಪ್ರಯಾಣವನ್ನು ಮುಗಿಸಿದ್ದಾರೆ.
2/ 8
ಪ್ರತಿ ವಾರದಂತೆ ಈ ವಾರ ಬಿಗ್ ಬಾಸ್ ಮನೆಯಿಂದ ಮಂಗಳಗೌರಿ ಖ್ಯಾತಿಯ ಕಾವ್ಯಶ್ರೀ ಗೌಡ ಔಟ್ ಆಗಿದ್ದಾರೆ. ಜನರ ವೋಟ್ ಕಡಿಮೆ ಬಂದ ಕಾರಣ ಕಾವ್ಯಶ್ರೀ ಆಟ ಅಂತ್ಯವಾಗಿದೆ.
3/ 8
ಮನೆಯಲ್ಲಿ ಎಲ್ಲರ ಜೊತೆ ಕಾವ್ಯಶ್ರೀ ಹೊಂದಿಕೊಂಡಿದ್ದರು. ಎಲ್ಲರನ್ನೂ ನಗಿಸುತ್ತಾ, ತಮಗೆ ಅನ್ನಿಸಿದ್ದನ್ನು ನೇರವಾಗಿ ಹೇಳ್ತಾ ಇದ್ರು. ಅದಕ್ಕೆ ಮನೆಯವರಿಗೆ ಈಕೆ ಅಂದ್ರೆ ಇಷ್ಟ ಇತ್ತು.
4/ 8
ಮಂಗಳಗೌರಿ ಧಾರಾವಾಹಿಯಿಂದ ಕಾವ್ಯಶ್ರೀ ಕನ್ನಡಿಗರ ಮನಸ್ಸು ಗೆದ್ದಿದ್ದಾರೆ. ಈಗ ಬಿಗ್ ಬಾಸ್ ನಿಂದಲೂ ಜನಕ್ಕೆ ಹತ್ತಿರವಾಗಿದ್ದಾರೆ. ತಮ್ಮ ಕ್ಯೂಟ್ ನಗುವಿನಿಂದ ಎಲ್ಲರಿಗೂ ಇಷ್ಟ ಆಗಿದ್ದರು.
5/ 8
ಕಾವ್ಯ ಔಟ್ ಆಗಲು ಅವರು ಆಟಗಳನ್ನು ಆಡದೇ ಇರುವುದೇ ಕಾರಣ ಎಂದು ಹೇಳಲಾಗ್ತಿದೆ. ಕಾವ್ಯಶ್ರೀ ಬಿಗ್ ಬಾಸ್ ಮನೆಗೆ ಬಂದಾಗಿನಿಂದ ಯಾವುದೇ ಆಟಗಳನ್ನು ಅಷ್ಟಾಗಿ ಆಡಿಲ್ಲ.
6/ 8
ಮೊದಲನೇ ವಾರದಿಂದ ಕಾವ್ಯಶ್ರೀ ಹೆಚ್ಚಾಗಿ ನಾಮಿನೇಟ್ ಆಗಿರಲಿಲ್ಲ. ಈ ಬಾರಿ ಅರುಣ್ ಸಾಗರ್ ಮತ್ತು ಕಾವ್ಯಶ್ರೀ ನಾಮಿನೇಟ್ಗೆ ಹೋದಾಗ, ಇಬ್ಬರು ತಮ್ಮ ತಮ್ಮ ಫೋಟೋ ತೋರಿಸಿ ಇಬ್ಬರು ನಾಮಿನೇಟ್ ಆಗಿದ್ದರು.
7/ 8
ಯಾರು ಹೆಚ್ಚು ಕೇರ್, ಯಾರು ಸ್ವಾರ್ಥಿಗಳು ಈ ಮನೆಯಲ್ಲಿ ಎಂದು ಸುದೀಪ್ ಪ್ರಶ್ನೆ ಕೇಳಿದ್ದರು. ಆಗ ಎಲ್ಲರೂ ಕಾವ್ಯಶ್ರೀ ಹೆಚ್ಚು ಕೇರ್ ಎಂದು ಹೇಳಿದ್ದರು. ಎಲ್ಲರನ್ನೂ ಪ್ರೀತಿಯಿಂದ ನೋಡಿಕೊಳ್ತಾ ಇದ್ದರು.
8/ 8
ಕಾವ್ಯಶ್ರೀ ಅವರು ಬಿಗ್ ಬಾಸ್ ಗೆಲ್ಲಬೇಕು ಎಂದು ಬಂದಿದ್ದರು. ಆದ್ರೆ ಈ ವಾರ ತಮ್ಮ ಆಟವನ್ನು ಮುಗಿಸಿದ್ದಾರೆ. ಮುಂದಿನ ಪಯಣಕ್ಕೆ ಆಲ್ ದಿ ಬೆಸ್ಟ್ ಎಂದು ಅಭಿಮಾನಿಗಳು ಹೇಳಿದ್ದಾರೆ.