ಬಿಗ್ ಬಾಸ್ ಸೀಸನ್ ಇನ್ನು 2 ವಾರಗಳು ಮಾತ್ರ ಇರಲಿದೆ. ಸ್ಪರ್ಧಿಗಳಿಗೆ ಟೆನ್ಷನ್ ಹೆಚ್ಚಾಗುತ್ತಾ ಇದೆ. ಸೂಪರ್ ಸಂಡೇ ವಿತ್ ಸುದೀಪ ಕಾರ್ಯಕ್ರಮದಲ್ಲಿ ಸುದೀಪ್ ಎಲ್ಲರನ್ನು ನಗಿಸಿದ್ದಾರೆ.
2/ 8
ಸುದೀಪ್ ಮನೆ ಮಂದಿಗೆಲ್ಲಾ ಪ್ರಶ್ನೆಯೊಂದನ್ನು ಕೇಳಿದ್ದಾರೆ. ಸಿನಿಮಾ ಹೆಸರು ಹೇಳ್ತೀನಿ ಆ ಟೈಟಲ್ ನಿಮ್ಮ ಪ್ರಕಾರ ಯಾರಿಗೆ ಹೊಂದುತ್ತೆ ಹೇಳಿ ಎಂದಿದ್ದಾರೆ.
3/ 8
ರಾಯರು ಬಂದರು ಮಾವನ ಮನೆಗೆ, ಈ ಸಿನಿಮಾ ಹೆಸರು ಯಾರಿಗೆ ಹೊಂದುತ್ತೆ ಎಂದು ಸುದೀಪ್ ಕೇಳ್ತಾರೆ. ಅದಕ್ಕೆ ರೂಪೇಶ್ ರಾಜಣ್ಣ ದೀಪಿಕಾ ಅವರಿಗೆ ಈ ಸಿನಿಮಾ ಹೊಂದುತ್ತೆ ಎಂದು ಹೇಳ್ತಾರೆ.
4/ 8
ನಮ್ಮ ಪಾಡಿಗೆ ನಾವು ಹೋಟೆಲ್ ನಡೆಸಿಕೊಂಡು ಇದ್ದೆವು. ದೀಪಿಕಾ ಬಂದು ಹೋದ್ರು ಸರ್, ಹೋಟೆಲ್ ಬಂದ್ ಆಯ್ತು ಎಂದು ರಾಜಣ್ಣ ಹೇಳಿದ್ದಾರೆ. ಅದಕ್ಕೆ ದೀಪಿಕಾ, ರೂಪೇಶ್ ಶೆಟ್ಟಿ ನಕ್ಕಿದ್ದಾರೆ.
5/ 8
ರಾಜಣ್ಣನ ಉತ್ತರ ಕೇಳಿ ಸುದೀಪ್ ಅವರು ಸಹ ನಕ್ಕರು. ಹಾಗೇ ಮುಂದಿನ ಸಿನಿಮಾ ಹೆಸರು ಕೇಳಿದ್ರು. ಮುಸ್ಸಂಜೆ ಮಾತು ಈ ಸಿನಿಮಾ ಯಾರಿಗೆ ಹೋಲುತ್ತೆ ಎಂದಿದ್ದಾರೆ.
6/ 8
ನಾನು ಮತ್ತು ರಾಕಿಗೆ ಮುಸ್ಸಂಜೆ ಮಾತು ಸಿನಿಮಾ ಹೋಲಿಕೆ ಆಗುತ್ತೆ ಎಂದು ಅಮೂಲ್ಯ ಗೌಡ ಹೇಳಿದ್ದಾರೆ. ಇಬ್ಬರು ತುಂಬಾ ಮಾತನಾಡುತ್ತಾರೆ. ನಾನು ಎಷ್ಟೊಂದು ಸಲ ಏನ್ ಮಾತನಾಡುತ್ತಾರೆ ಎಂದು ಕೇಳಿದ್ದೇನೆ ಎಂದು ಅನುಪಮಾ ಗೌಡ ಹೇಳ್ತಾರೆ.
7/ 8
ಅನುಪಮಾ ಮಾತು ಕೇಳಿದ ಸುದೀಪ್ ಇದೇ ಕುತೂಹಲ ತಾನೇ ಆರ್ಯವರ್ಧನ್ ಗೆ ಹುಟ್ಟಿದ್ದು. ರಾಕಿ, ಅಮೂಲ್ಯ ಏನ್ ಮಾತಾಡ್ತಾರೆ ಅಂತ. ಅದನ್ನು ಕೇಳಿ ಅವರು ತಗ್ಲಾಕೊಂಡ್ರು ಎಂದು ಹೇಳ್ತಾರೆ. ಅದಕ್ಕೆ ರಾಜಣ್ಣ, ಗುರೂಜಿ ನಕ್ಕ ಪರಿ ಇದು.
8/ 8
ಮಿಸ್ಟರ್ ಗರಗಸ ಯಾರು ಎಂದು ಸುದೀಪ್ ಕೇಳುತ್ತಾರೆ. ಅದಕ್ಕೆ ಗುರೂಜಿ ರಾಜಣ್ಣ ಸರ್. ಗರಗಸ ಮರ ಕಡಿದ್ರೆ, ಇವರು ಮನುಷ್ಯರನ್ನೇ ಕಡೀತಾರೆ ಎಂದು ಹೇಳಿದ್ದಾರೆ. ಅದಕ್ಕೆ ಮನೆಯರೆಲ್ಲಾ ನಕ್ಕಿದ್ದಾರೆ.