ಶುಕ್ರವಾರ, ಶನಿವಾರ ಸಂಜೆ 7.3ಂರಿಂದ ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ನಟಿ ಶುಭ ಪುಂಜಾ ಡ್ಯಾನ್ಸ್ ಮಾಡಿದ್ದಾರೆ. ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಯ ವೇದಿಕೆ ರಂಗೇರಿದೆ. ಹಲವು ಕಲಾವಿದರು ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಜನರಿಗೆ ಮನರಂಜನೆ ನೀಡಿದ್ದಾರೆ. ರೂಪೇಶ್ ಶೆಟ್ಟಿ, ದಿವ್ಯಾ ಉರುಡುಗ, ರಾಕೇಶ್ ಅಡಿಗ, ದೀಪಿಕಾ ದಾಸ್, ರೂಪೇಶ್ ರಾಜಣ್ಣ ಟಾಪ್ 5 ಸ್ಪರ್ಧಿಗಳಾಗಿದ್ದರು. ಬಂದಿರುವ ಮಾಹಿತಿ ಪ್ರಕಾರ ದಿವ್ಯ ಉರುಡುಗ ಔಟ್ ಆಗಿದ್ದಾರೆ. ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಯ ವೇದಿಕೆಯಲ್ಲಿ ಹಳೆಯ ಸ್ಪರ್ಧಿಗಳು. ಈ ಸೀಸನ್ ಸ್ಪರ್ಧಿಗಳು ಡ್ಯಾನ್ಸ್ ಮಾಡಿದ್ದಾರೆ. ಶುಭ ಪುಂಜಾ ಸಹ ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಪಿಂಕ್ ಅಂಡ್ ಬ್ಲ್ಯೂ ಡ್ರೆಸ್ ನಲ್ಲಿ ನಟಿ ಶುಭ ಪುಂಜಾ ಸುಂದರವಾಘಿ ಕಾಣ್ತಾ ಇದ್ದಾರೆ. ಅದೇ ರೀತಿ ಸೂಪರ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ನಾನು ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಯ ವೇದಿಕೆಯಲ್ಲಿ ಡ್ಯಾನ್ಸ್ ಮಾಡಿದ್ದೇನೆ ಎಂದು ಶುಭ ಪುಂಜಾ ಇನ್ಸ್ಟಾಗ್ರಾಂನಲ್ಲಿ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ನಟಿ ಶುಭ ಪುಂಜಾ ಅವರ ಫೋಟೋಗಳು ಎಲ್ಲೆಡೆ ವೈರಲ್ ಆಗಿವೆ. ವಾವ್ ಬ್ಯೂಟಿ, ಬೇಬಿ ಡಾಲ್ ಎಂದು ಅಭಿಮಾನಿಗಳು ಮೆಚ್ಚಿಕೊಂಡು ಕಾಮೆಂಟ್ ಆಗಿದ್ದಾರೆ. ಶುಭ ಪೂಂಜಾ ಬಿಗ್ ಬಾಸ್ ಸೀಸನ್ 08ರಲ್ಲಿ ಇದ್ದರು. ಈ ಬಾರಿ ಟಾಪ್ ನಲ್ಲಿದ್ದ 5 ಜನಕ್ಕೆ ಒಳ್ಳೆಯದಾಗಲಿ ಅಂತ ವಿಶ್ ಮಾಡಿದ್ದರು.