BBK Grand Finale: ಹೊಸ ವರ್ಷಕ್ಕೆ 'ಬಿಗ್ ಬಾಸ್' ಗ್ರ್ಯಾಂಡ್ ಫಿನಾಲೆ! ಯಾರಾಗ್ತಾರೆ ಸೀಸನ್ 9ರ ವಿನ್ನರ್?
ಕಲರ್ಸ್ ಕನ್ನಡದಲ್ಲಿ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಶುರುವಾಗಿ 12 ವಾರ ಕಳೆದಿದೆ. ಇನ್ನೆರೆಡು ವಾರದಲ್ಲಿ ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಹೀಗಾಗಿ ಬಿಗ್ ಗ್ರ್ಯಾಂಡ್ ಫಿನಾಲೆಗೆ 14 ದಿನ ಬಾಕಿ ಇದೆ. ಇನ್ನೆರಡು ವಾರದಲ್ಲಿ 'ಬಿಗ್ ಬಾಸ್' ಪಟ್ಟ ಯಾರಿಗೆ ಅನ್ನೋದು ತಿಳಿಯಲಿದೆ.
ಕಲರ್ಸ್ ಕನ್ನಡದಲ್ಲಿ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಶುರುವಾಗಿ 12 ವಾರ ಕಳೆದಿದೆ. ಇನ್ನೆರೆಡು ವಾರದಲ್ಲಿ ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ನಡೆಯಲಿದೆ.
2/ 8
'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರೇ ಈ ವಿಷಯ ಹೇಳಿದ್ದಾರೆ. ಬಿಗ್ ಬಾಸ್ ಸ್ಪರ್ಧಿಗಳಿಗೆ ಏನು ಅನ್ನಿಸುತ್ತಿದೆ ಎಂದು ಕೇಳಿದ್ದಾರೆ.
3/ 8
ಈ ವಾರ ಅನುಪಮಾ ಗೌಡ ಔಟ್ ಆದ ಕಾರಣ, 8 ಜನ ಉಳಿದಿದ್ದಾರೆ. ಕನ್ನಡ ಹೋರಾಟಗಾರ ರೂಪೇಶ್ ರಾಜಣ್ಣ, ಆರ್ಯವರ್ಧನ್ ಗುರೂಜಿ ಸಹ ಟಾಪ್ 5 ನಲ್ಲಿ ಇರ್ತಾರೆ ಎಂದು ಹೇಳಲಾಗ್ತಿದೆ.
4/ 8
ರೂಪೇಶ್ ಶೆಟ್ಟಿ, ದೀಪಿಕಾ ದಾಸ್ ಸಹ ಚೆನ್ನಾಗಿ ಆಡ್ತಾ ಇದ್ದಾರೆ. ಟಾಪ್ 2 ನಲ್ಲಿ ಇರ್ತಾರೆ ಎಂದು ಅಭಿಮಾನಿಗಳು ಹೇಳ್ತಾ ಇದ್ದಾರೆ. ಇನ್ನೆರೆಡು ವಾರದಲ್ಲಿ ರಿಸಲ್ಟ್ ಗೊತ್ತಾಗಲಿದೆ.
5/ 8
ಬಿಗ್ ಬಾಸ್ ಸೀಸನ್ 1 ರ ರನ್ನರ್ ಅಪ್ ಆಗಿದ್ದ ಅರುಣ್ ಸಾಗರ್, ಬಿಗ್ ಬಾಸ್ ಸೀಸನ್ 8 ರ ಟಾಪ್ 5 ಸ್ಪರ್ಧಿ ದಿವ್ಯಾ ಉರುಡುಗ ಇದ್ದಾರೆ. ಇಬ್ಬರಲ್ಲಿ ಯಾರಾದ್ರೂ ಗೆಲ್ಲಬಹುದು ಎಂದು ಹೇಳಲಾಗ್ತಿದೆ.
6/ 8
ಓಟಿಟಿಯಿಂದ ಬಂದ ರಾಕೇಶ್ ಅಡಿಗ ಮತ್ತು ಅಮೂಲ್ಯ ಸಹ ಇದ್ದಾರೆ. ಇಬ್ಬರು ಚೆನ್ನಾಗಿ ಆಟ ಆಡ್ತಾ ಇದ್ದಾರೆ. ಅಮೂಲ್ಯ ತಮ್ಮ ನೇರವಾದ ಮಾತುಗಳ ಮೂಲಕ ಅಭಿಮಾನಿಗಳನ್ನು ಗೆದ್ರೆ, ರಾಕೇಶ್ ಸೈಲೆಂಟ್ ನಿಂದ ಜನರ ಮನಸ್ಸು ಕದ್ದಿದ್ದಾರೆ.
7/ 8
ಅಲ್ಲದೇ ಈ ವಾರ ಯಾರೂ ಮನೆಯ ಕ್ಯಾಪ್ಟನ್ ಆಗಿಲ್ಲ. ಎಲ್ಲರೂ ನಾಮಿನೇಟ್ ಆಗಲಿದ್ದಾರೆ. ಇನ್ನೆರಡು ವಾರದಲ್ಲಿ 3 ಜನ ಎಲಿಮಿನೇಟ್ ಆಗಬೇಕಿದೆ.
8/ 8
ರಾಕೇಶ್ ಅಡಿಗ, ಅಮೂಲ್ಯ ಗೌಡ, ರೂಪೇಶ್ ಶೆಟ್ಟಿ, ದೀಪಿಕಾ ದಾಸ್, ರೂಪೇಶ್ ರಾಜಣ್ಣ, ಆರ್ಯವರ್ಧನ್ ಗುರೂಜಿ, ಅರುಣ್ ಸಾಗರ್, ದಿವ್ಯಾ ಉರುಡುಗ ರಲ್ಲಿ ಟಾಪ್ 5ಗೆ ಯಾರು ಹೋಗ್ತಾರೆ ಅಂತ ಅಭಿಮಾನಿಗಳು ಲೆಕ್ಕ ಹಾಕುತ್ತಿದ್ದಾರೆ.