ರೂಪೇಶ್ ಶೆಟ್ಟಿ, ದಿವ್ಯಾ ಉರುಡುಗ, ರಾಕೇಶ್ ಅಡಿಗ, ದೀಪಿಕಾ ದಾಸ್, ರೂಪೇಶ್ ರಾಜಣ್ಣ ಬಿಗ್ ಬಾಸ್ ಸೀಸನ್ 09 ಟಾಪ್ 5 ಗೆ ಬಂದಿದ್ದರು. ಆದ್ರೆ ಶುಕ್ರವಾರದ ಸಂಚಿಕೆಯಲ್ಲಿ ದಿವ್ಯಾ ಉರುಡುಗ ಔಟ್ ಆಗಿದ್ದಾರೆ.
2/ 8
ಬಿಗ್ ಬಾಸ್ ಸೀಸನ್ 8 ರಲ್ಲಿ ಟಾಪ್ ಮೂರರ 3 ತನಕ ಬಂದಿದ್ದ ದಿವ್ಯಾ ಉರುಡುಗ ಈಗ ಟಾಪ್ 5 ನಲ್ಲಿ ಬಂದು ಔಟ್ ಆಗಿದ್ದಾರೆ. ಈ ಬಾರಿಯೂ ಅವರ ಗೆಲ್ಲುವ ಕನಸು ನನಸಾಗಿಲ್ಲ.
3/ 8
ದಿವ್ಯಾ ಉರುಡುಗ ಔಟ್ ಆಗುವ ಮೊದಲು ಕಿಚ್ಚು ಸುದೀಪ್ ಐವರಲ್ಲಿ ಯಾರು ಔಟ್ ಆಗಬಹುದು ಎಂದು ಎಲ್ಲರಿಗೂ ಕೇಳ್ತಾರೆ. ಒಬ್ಬಬ್ಬರು ಒಂದೊಂದು ಉತ್ತರ ಹೇಳ್ತಾರೆ.
4/ 8
ಪ್ರಶಾಂತ್ ಸಂಬರ್ಗಿ ದಿವ್ಯಾ ಉರುಡುಗ ಔಟ್ ಆಗ ಬೇಕು ಸರ್. ಅವರು ಇಲ್ಲಿಯ ತನಕ ಬಂದಿರೋದು ಅವರ ಪರಿಶ್ರಮದಿಂದ ಅಲ್ಲ. ಅದೃಷ್ಟದಿಂದ, ಲಕ್ ನಿಂದ. ಅವರ ಮನಸಾಕ್ಷಿಯನ್ನು ಅವರೇ ಕೇಳಿಕೊಳ್ಳಲಿ ಎಂದು ಹೇಳಿದ್ದಾರೆ.
5/ 8
ಆರ್ಯವರ್ಧನ್ ಗುರೂಜಿ ಸಹ ಪ್ರಶಾಂತ್ ಹೇಳಿದ್ದೇ ಸರಿ. ದಿವ್ಯಾ ಒಮ್ಮೆಯೂ ಉತ್ತಮ ಪಡೆದಿಲ್ಲ, ಕ್ಯಾಪ್ಟನ್ ಆಗಿಲ್ಲ. ಕಿಚ್ಚನ ಚಪ್ಪಾಳೆ ಪಡೆದಿಲ್ಲ. ಕಳಪೆ ಪಡೆದಿಲ್ಲ. ಟಾಪ್ 5 ತನಕ ಬಂದಿದ್ದಾರೆ ಎಂದು ಹೇಳಿದ್ದಾರೆ.
6/ 8
ಮನೆಯಿಂದ ಹೊರಗೆ ಬಂದ ದಿವ್ಯಾ ಕಿಚ್ಚ ಸುದೀಪ್ ಮುಂದೆಯೇ ಪ್ರಶಾಂತ್ ಮತ್ತು ಆರ್ಯವರ್ಧನ್ ಗುರೂಜಿಗೆ ಕ್ಲಾಸ್ ತೆಗೆದುಕೊಂಡ್ರು. ದಿವ್ಯಾ ಆವಾಜ್ ಗೆ ಇಬ್ಬರು ಸುಮ್ಮನೆ ಆದ್ರು.
7/ 8
ಪ್ರಶಾಂತ್ ಬ್ರೋಗೆ ನನ್ನ ಬಗ್ಗೆ ಮಾತನಾಡೋಕೆ ಸಿಕ್ರೆ ಎಷ್ಟೊಂದು ಹೇಳ್ತಾರೆ. ನಾನು ಅದೃಷ್ಟದಿಂದ ಮಾತ್ರ ಬಂದಿಲ್ಲ. ಆಟಗಳನ್ನು ಆಡಿ ಬಂದಿದ್ದೇನೆ. ಅದಕ್ಕೆ ನೀವು ನನಗಿಂದ ಮುಂಚೆ ಔಟ್ ಆಗಿದ್ರಿ ಎಂದು ದಿವ್ಯಾ ಪ್ರಶಾಂತ್ ಬೆವರಿಳಿಸಿದ್ರು.
8/ 8
ಆರ್ಯವರ್ಧನ್ ಗುರೂಜಿ ನಾನು ಅಭಿಮಾನಿಗಳ ಪ್ರೀತಿಯಿಂದ ಇಲ್ಲಿಯ ತನಕ ಬಂದೆ. ನಿಮ್ಮ ರೀತಿ ದೋಸೆ ತಿರುವಿ ಹಾಕಿಲ್ಲ ಎಂದು ದಿವ್ಯಾ ಉರುಡುಗ ಹೇಳಿದ್ದಾರೆ.