ರೂಪೇಶ್ ರಾಜಣ್ಣ ಔಟ್ ಆದ ಬಳಿಕ ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ದೀಪಿಕಾ ದಾಸ್ ಉಳಿದುಕೊಂಡಿದ್ದರು. ಈಗ ಬಿಗ್ ಬಾಸ್ ಮನೆಯಿಂದ ದೀಪಿಕಾ ದಾಸ್ ಔಟ್ ಆಗಿದ್ದಾರೆ.
2/ 8
ಪ್ರವೀಣರಾಗಿ ಎಂಟ್ರಿ ಕೊಟ್ಟಿದ್ದ ದೀಪಿಕಾ ದಾಸ್ ಮೊದ ಮೊದಲು ಅಷ್ಟು ಚೆನ್ನಾಗಿ ಆಟಗಳನ್ನು ಆಡುತ್ತಿರಲಿಲ್ಲ. ನಂತರ ಚೆನ್ನಾಗಿ ಆಡಿದ್ರು, ಆದ್ರೂ ಅದೃಷ್ಟ ಕೈ ಕೊಟ್ಟಿದೆ.
3/ 8
ಬಿಗ್ ಬಾಸ್ ಸೀಸನ್ 09 ರ ಮೊದಲ ಮಹಿಳಾ ಕ್ಯಾಪ್ಟನ್ ಆಗಿದ್ದರು ದೀಪಿಕಾ ದಾಸ್. ಆಗ ಮನೆಯಿಂದ ಕಾಲ್ ಬಂದಾಗ ಅವರಮ್ಮ ಎಲ್ಲರೊಡನೆ ಬೆರೆತು ಖುಷಿಯಾಗಿರು ಮಗಳೇ ಎಂದು ಕಿವಿ ಮಾತು ಹೇಳಿದ್ರು.
4/ 8
ಬಿಗ್ ಬಾಸ್ ಸೀಸನ್ ಒಂಬತ್ತು 50 ದಿನ ಪೂರೈಸುವ ಸಮಯದಲ್ಲಿ ದೀಪಿಕಾ ದಾಸ್ ಮನೆಯಿಂದ ಔಟ್ ಆಗಿದ್ದರು. ಎಲ್ಲರೂ ಶಾಕ್ ಆಗಿದ್ದರು. ಸ್ಟ್ರಾಂಗ್ ಅಭ್ಯರ್ಥಿ ಮನೆಯಿಂದ ಹೋದರು ಅಂತ.
5/ 8
ದೀಪಿಕಾ ದಾಸ್ ಮತ್ತೆ ಬಿಗ್ ಬಾಸ್ 09ಕ್ಕೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಪ್ರವೇಶ ಪಡೆದಿದ್ದರು. ಮತ್ತೆ ಮನೆಗೆ ಬಂದ ದೀಪಿಕಾ ತುಂಬಾ ಬದಲಾಗಿದ್ದರು. ಎಲ್ಲರೊಡನೆ ತುಂಬಾ ಚೆನ್ನಾಗಿ ಮಾತನಾಡುತ್ತಾ ಇದ್ರು.
6/ 8
2ನೇ ಇನ್ನಿಂಗ್ಸ್ ನಲ್ಲಿ ದೀಪಿಕಾ ಎಲ್ಲಾ ಟಾಸ್ಕ್ ಗಳನ್ನು ಅದ್ಭುತವಾಗಿ ಆಡಿದ್ದಾರೆ. ಯಾವುದರಲ್ಲೂ ಸೋಲಲಿಲ್ಲ. ಅಲ್ಲದೇ ಅರುಣ್ ಸಾಗರ್ ಜೊತೆ ಸೇರಿ ವಿವಿಧ ವೇಷಗಳನ್ನು ಹಾಕಿಕೊಂಡು ಜನರನ್ನು ರಂಜಿಸಿದ್ರು.
7/ 8
ಪ್ರವೀಣರಾಗಿ, ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಎರಡೆರೆಡು ಬಾರಿ ಚಾನ್ಸ್ ಸಿಕ್ಕರೂ ದೀಪಿಕಾ ದಾಸ್ ಗೆ ಅದೃಷ್ಟ ಕೈ ಕೊಟ್ಟಿದೆ. ಈ ಬಾರಿಯೂ ಗೆಲ್ಲುವ ಕನಸು ನನಸಾಗಿಲ್ಲ.
8/ 8
ಈ ಸಲ ಆದ್ರೂ ಹೆಣ್ಣು ಮಕ್ಕಳು ಬಿಗ್ ಬಾಸ್ ಕಪ್ ಗೆಲ್ಲಬೇಕು ಎನ್ನುತ್ತಿದ್ರು. ಆದ್ರೆ ಅದು ಆಗಿಲ್ಲ. ದೀಪಿಕಾ ದಾಸ್ 2ನೇ ರನ್ನರ್ ಅಪ್ ಗೆ ಖುಷಿ ಪಟ್ಟಿದ್ದಾರೆ.