ನಾಗಿಣಿ ಸೀರಿಯಲ್ ಮೂಲಕ ಫೇಮಸ್ ಆಗಿದ್ದ ದೀಪಿಕಾ ದಾಸ್, ಬಿಗ್ ಬಾಸ್ ಸೀಸನ್ 7 ರಲ್ಲಿ ಟಾಪ್ 5 ನಲ್ಲಿ ಇದ್ರು. ಈಗ ಬಿಗ್ ಬಾಸ್ 9ಕ್ಕೆ ಪ್ರವೀಣರಾಗಿ ಬಂದಿದ್ದಾರೆ. ಸ್ಟ್ರಾಂಗ್ ಅಭ್ಯರ್ಥಿ ಆಗಿದ್ದಾರೆ.
2/ 8
ದೀಪಿಕಾ ದಾಸ್ ಅವರು ತಮ್ಮ ಆಟಗಳ ಮೂಲಕ ಜನರ ಮನಸ್ಸು ಗೆದ್ದಿದ್ದಾರೆ. ಯಾವುದೇ ಆಟ ಆಗಲಿ ಅದನ್ನು ಅವರು ಬಿಟ್ಟು ಕೊಡುವುದಿಲ್ಲ. ಕಿಚ್ಚ ಸುದೀಪ್ ಅವರಿಂದ ಬ್ಯಾಕ್ ಟು ಬ್ಯಾಕ್ ಕಿಚ್ಚನ ಚಪ್ಪಾಳೆ ಪಡೆದಿದ್ದಾರೆ.
3/ 8
ಈ ವಾರ ಸೋಡಾ ಗ್ಲಾಸ್ ಹಾಕಿಕೊಂಡು, ಹಲ್ಲುಬ್ಬು ಮಾಡಿಕೊಂಡ ಮಿಣ ಮಿಣ ಮೀನಾಕ್ಷಿ ಆಗಿದ್ದ ದೀಪಿಕಾ ದಾಸ್ ಎಲ್ಲರ ಮನಸ್ಸು ಗೆದ್ದಿದ್ದಾರೆ. ಸುದೀಪ್ ಅವರ ಮನಸ್ಸು ಗೆದ್ದಿದ್ದಾರೆ.
4/ 8
ದೀಪಿಕಾ ದಾಸ್ ಮೊದಲು ಬಿಗ್ ಬಾಸ್ ಮನೆಯಲ್ಲಿ ಅಷ್ಟೊಂದು ಮಾತನಾಡುತ್ತಿರಲಿಲ್ಲ. ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬಂದ ಮೇಲೆ ಈಗ ತುಂಬಾ ಬದಲಾಗಿದ್ದಾರೆ. ಎಲ್ಲರ ಜೊತೆ ಚೆನ್ನಾಗಿ ಮಾತನಾಡುತ್ತಾರೆ.
5/ 8
ಕಳೆದ ವಾರವೂ ದೀಪಿಕಾ ದಾಸ್ ಕಿಚ್ಚನ ಚಪ್ಪಾಳೆ ಪಡೆದಿದ್ರು. ಈ ವಾರವೂ ಕಿಚ್ಚನ ಚಪ್ಪಾಳೆ ಗಿಟ್ಟಿಸಿಕೊಂಡರು. ದೀಪಿಕಾ ದಾಸ್ ತುಂಬಾ ಖುಷಿ ಆಗಿದ್ದರು.
6/ 8
ದೀಪಿಕಾ ದಾಸ್ ಅವರು ಆಟದಿಂದ ಮಾತ್ರ ಅಲ್ಲ. ತಮ್ಮ ನೋಟದಿಂದಲೂ ಹಲವರ ಮನಸ್ಸು ಗೆದ್ದಿದ್ದಾರೆ. ಸೂಪರ್ ಸ್ಟೈಲ್ ಐಕಾನ್ ತರ ಕಾಣ್ತಾರೆ.
7/ 8
ದೀಪಿಕಾ ಅವರು ಕಳೆದ ಬಾರಿ ಮಿಸ್ ಮಾಡಿಕೊಂಡಿದ್ದ ಟ್ರೋಪಿಯನ್ನು ಈ ಬಾರಿ ಗೆಲ್ಲಲೇ ಬೇಕು ಎಂದು ಬಂದಿದ್ದಾರೆ. ಜನ, ನೀವೇ ಗೆದ್ದು ಬನ್ನಿ ದೀಪಿಕಾ ದಾಸ್ ಎನ್ನುತ್ತಿದ್ದಾರೆ.
8/ 8
ದೀಪಿಕಾ ದಾಸ್ ಈ ಬಾರಿ ಟಾಪ್ 2 ನಲ್ಲಿ ಇರ್ತಾರಂತೆ. ಇದನ್ನು ಮನೆಯ ಹಲವು ಅಭ್ಯರ್ಥಿಗಳೇ ಹೇಳಿದ್ದಾರೆ. ದೀಪಿಕಾ ಅವರು ಅಷ್ಟೇ ಚೆನ್ನಾಗಿ ಆಟ ಆಡ್ತಾ ಇದ್ದಾರೆ.