[caption id="attachment_924458" align="alignnone" width="924"]L ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ ಶುರುವಾಗಿದೆ. ಶುಕ್ರವಾರ, ಶನಿವಾರ ಸಂಜೆ 7.30ಕ್ಕೆ ಕಾರ್ಯಕ್ರಮ ಶುರುವಾಗಲಿದೆ. ಎಲ್ಲರೂ ಕಾತುರದಿಂದ ಕಾಯ್ತಾ ಇದ್ದಾರೆ.[/caption] ಗ್ರ್ಯಾಂಡ್ ಕಾರ್ಯಕ್ರಮಕ್ಕೆ ಸಕಲ ತಯಾರಿ ನಡೆದಿದೆ. ಬಿಗ್ ಬಾಸ್ ಈ ಸೀಸನ್ ಸ್ಪರ್ಧಿಗಳು ಸೇರಿ, ಹಳೇ ಸ್ಪರ್ಧಿಗಳು ಡ್ಯಾನ್ಸ್ ಮಾಡಿ ಮನರಂಜನೆ ನೀಡಲು ಸಜ್ಜಾಗಿದ್ದಾರೆ. ದೀಪಿಕಾ ದಾಸ್, ರೂಪೇಶ್ ರಾಜಣ್ಣ, ರಾಕೇಶ್ ಅಡಿಗ, ದಿವ್ಯಾ ಉರುಡುಗ, ರೂಪೇಶ್ ಶೆಟ್ಟಿ ಟಾಪ್ 5 ಸ್ಪರ್ಧಿಗಳಾಗಿದ್ದಾರೆ. ಎಲ್ಲರಿಗೂ ಗೆಲ್ಲಬೇಕು ಎಂಬ ಆಸೆ ಇದೆ. ಇವತ್ತಿನ ಸಂಚಿಕೆಯಲ್ಲಿ ಇಬ್ಬರು ಎಲಿಮಿನೇಷನ್ ಆಗೋ ಸಾಧ್ಯತೆ ಇದೆ. ಶನಿವಾರದ ಸಂಚಿಕೆಯಲ್ಲಿ ಮೂವರು ಮಾತ್ರ ಇರಲಿದ್ದಾರೆ. ಯಾರು ಗೆಲ್ತಾರೆ ಅನ್ನೋ ಕುತೂಹಲ ಹೆಚ್ಚಾಗಿದೆ. ಈ ಸೀಸನ್ ನಲ್ಲಿ ನೇರ ನುಡಿಗಳಿಂದ ಹೆಸರು ವಾಸಿಯಾಗಿದ್ದ ಕಮಲಿ ಖ್ಯಾತಿಯ ಅಮೂಲ್ಯ ಗೌಡ ಸಖತ್ ಆಗಿ ಡ್ಯಾನ್ಸ್ ಮಾಡಲಿದ್ದಾರೆ. ಮಿಸ್ ಮಾಡಿಕೊಳ್ಳಬೇಡಿ. ಬಿಗ್ ಸೀಸನ್ 09 ರಲ್ಲಿ ಇದ್ದ ಲಕ್ಷ್ಮಿ ಬಾರಮ್ಮ ಖ್ಯಾತಿಯ ನೇಹಾ ಗೌಡ ಸಹ ತಮ್ಮ ಅದ್ಭುತ ಡ್ಯಾನ್ಸ್ ಮೂಲಕ ಎಲ್ಲರನ್ನು ರಂಜಿಸಲಿದ್ದಾರೆ. ಬಿಗ್ ಬಾಸ್ ಸೀಸನ್ 09, 09 ಎರಡಲ್ಲೂ ಇದ್ದ ಪ್ರಶಾಂತ್ ಸಂಬರ್ಗಿ ಅವರು ಸಹ ಡ್ಯಾನ್ಸ್ ಮಾಡೋಕೆ ಸಜ್ಜಾಗಿದ್ದಾರೆ. ಗ್ರ್ಯಾಂಡ್ ಫಿನಾಲೆ ತುಂಬಾ ಗ್ರ್ಯಾಂಡ್ ಆಗಿ ನಡೆಯಲಿದೆ. ಬಿಗ್ ಬಾಸ್ ಸೀಸನ್ 08ರ ವಿನ್ನರ್ ಶೈನ್ ಶೆಟ್ಟಿ ಸಹ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮದಲ್ಲಿ ಹೆಜ್ಜೆ ಹಾಕಿದ್ದಾರೆ. ಸುದೀಪ್ ಅವರ ಇವತ್ತಿನ ಲುಕ್ ನೋಡಲು ಅಭಿಮಾನಿಗಳು ಕಾಯ್ತಾ ಇದ್ದಾರೆ.