ಮನೆಯವರ ಜೊತೆ ಮಾತನಾಡಬೇಕು ಎಂಬ ಸ್ಪರ್ಧಿಗಳ ಬಹುದಿನದ ಹಂಬಲವನ್ನು ಬಿಗ್ ಬಾಸ್ ನೆರವೇರಿಸಿದ್ದಾರೆ. ಸ್ಪರ್ಧಿಗಳ ಮನೆಯವರು ಬಿಗ್ ಬಾಸ್ ಮನೆಗೆ ಬಂದಿದ್ದಾರೆ.
2/ 8
ಮೊದಲು ದಿವ್ಯಾ ಉರುಡುಗ ಅವರ ತಾಯಿ ಬರ್ತಾರೆ. ದಿವ್ಯಾ ತನ್ನ ಅಮ್ಮನನ್ನು ನೋಡಿ ಖುಷಿಯಾಗ್ತಾಳೆ. ಓಡಿ ಹೋಗಿ ಅಮ್ಮ ಎಂದು ತಬ್ಬಿಕೊಳ್ತಾಳೆ.
3/ 8
ಮಗಳನ್ನು ನೋಡಿದ ದಿವ್ಯಾ ಅಮ್ಮ ಆಕೆಯನ್ನು ತಬ್ಬಿಕೊಂಡು ಮುದ್ದಾಡಿದ್ದಾರೆ. ಅಮ್ಮನನ್ನು ನೋಡಿ ದಿವ್ಯಾ ಉರುಡುಗ ಕಣ್ಣೀರು ಇಟ್ಟಿದ್ದಾರೆ. ತುಂಬಾ ಖುಷಿಯಾಯ್ತು ಎಂದು ಹೇಳಿದ್ದಾರೆ.
4/ 8
ಇನ್ನು ದಿವ್ಯಾ ಉರುಡುಗ ತಾಯಿ ನಂತರ, ರಾಕೇಶ್ ಅಡಿಗ ಅಮ್ಮ ಬಂದಿದ್ದಾರೆ. ರಾಕಿ ಅಮ್ಮನನ್ನು ನೋಡಿ ತುಂಬಾ ಖುಷಿಯಾಗಿದ್ದಾರೆ. ಓಟಿಟಿ ಯಿಂದ 100 ದಿನಕ್ಕೂ ಹೆಚ್ಚು ಕಾಲ ರಾಕೇಶ್ ಮನೆಯವರನ್ನು ನೋಡಿರಲಿಲ್ಲ.
5/ 8
ನೀನು ಯಾವಾಗ ಕ್ಯಾಪ್ಟನ್ ಆಗ್ತೀಯೋ ಅಂತ ಕಾದು, ಕಾದು ಬೇಜಾರಾಗಿ ಹೋಗಿತ್ತು. ಈಗ ಕ್ಯಾಪ್ಟನ್ ಆಗಿದ್ದಿಯಾ, ತುಂಬಾ ಖುಷಿ ಆಯ್ತು ಎಂದು ರಾಕೇಶ್ ಅಮ್ಮ ಹೇಳಿದ್ದಾರೆ.
6/ 8
ದಿವ್ಯಾ ಉರುಡುಗ ಅವರ ತಾಯಿ ಬಳಿ ಬಲವಂತ ಮಾಡಿ ಹಾಡನ್ನು ಹಾಡಿಸಿದ್ದಾರೆ. ಅವರಮ್ಮ ಬೇಡ ಅಂದರೂ ಕೇಳಲಿಲ್ಲ. ಕೊನೆಗೆ ಶಿಲೆಗಳು ಸಂಗೀತವಾ ಹಾಡಿವೆ ಎಂಬ ಹಾಡನ್ನು ಹಾಡಿದ್ರು.
7/ 8
ನಮ್ಮ ಅಮ್ಮ ಎಷ್ಟು ಚೆಂದ ಹಾಡು ಹೇಳ್ತಾರೆ. ಅವರಿಗೆ ಒಂದು ವೇದಿಕೆ ಸಿಕ್ಕಿಲ್ಲ. ಅವರು ಹಾಡಬೇಕಿತ್ತು ಎಂದು ಹೇಳಿ ದಿವ್ಯಾ ಉರುಡುಗ ಅತ್ತಿದ್ದಾರೆ.
8/ 8
ಮನೆಯವರನ್ನು ಕಂಡು ಎಲ್ಲರೂ ಭಾವುಕರಾದ್ರು. ಪ್ರಶಾಂತ್ ಸಂಬರ್ಗಿ ಸಹ ತಮ್ಮ ಮನೆಯವರಿಗಾಗಿ ಕಾಯ್ತಾ ಇದ್ದಾರೆ. ಮನೆಯವರನ್ನು ನೆನೆದು ಕಣ್ಣಿರು ಹಾಕಿದ್ರು.