ಬಿಗ್ ಬಾಸ್ ಸೀಸನ್ 09 ತುಂಬಾ ವಿಶೇಷತೆಯಿಂದ ಕೂಡಿತ್ತು. ಪ್ರವೀಣರು, ನವೀನರು ಅಂತ 2 ವರ್ಗದವರು ಎಂಟ್ರಿ ಆಗಿ, ಜನರಿಗೆ ಮನರಂಜನೆ ನೀಡಿದ್ರು.
2/ 8
ಈ ಬಾರಿಯ ಬಿಗ್ ಬಾಸ್ನಲ್ಲಿ ರಾಕೇಶ್ ಅಡಿಗ, ಅಮೂಲ್ಯ ಗೌಡ, ಅನುಪಮಾ ಗೌಡ, ದಿವ್ಯಾ ಉರುಡುಗ, ನೇಹಾ ಗೌಡ ತುಂಬಾ ಆತ್ಮೀಯ ಸ್ನೇಹಿತರಾಗಿದ್ದರು.
3/ 8
ಬೇರೆ ಸ್ಪರ್ಧಿಗಳು ಇವರ ಮೇಲೆ ಹಲವು ಬಾರಿ ದೂರು ಹೇಳಿದ್ರು. ಇವರು ಗ್ಯಾಂಗ್ ಕಟ್ಟಿಕೊಂಡು ಆಡ್ತಾರೆ ಎಂದು ಹೇಳಿದ್ದರು. ಆದ್ರೂ ಇವರು ತಲೆ ಕೆಡಿಸಿಕೊಳ್ಳದೇ ಇವರ ಸ್ನೇಹ ಮುಂದುವರೆಸಿದ್ದರು.
4/ 8
ಈಗ ಇವರು ಮತ್ತೆ ಒಂದೆಡೆ ಸೇರಿದ್ದಾರೆ. ಎಂಜಾಯ್ ಮಾಡಿದ್ದಾರೆ. ನಮ್ಮದು ಸಪ್ಪೆ ಹೋಟೆಲ್ ಗ್ಯಾಂಗ್ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ.
5/ 8
ಐವರು ಒಟ್ಟಿಗೆ ಸೇರಿ ಬಿಗ್ ಬಾಸ್ ಮನೆಯಲ್ಲಿ ನಡೆದ ಘಟನೆಗಳ ಬಗ್ಗೆ ಮೆಲುಕು ಹಾಕಿದ್ದಾರೆ. ಕೇಕ್ ಕಟ್ ಮಾಡಿ ತಿಂದು ಖುಷಿ ಪಟ್ಟಿದ್ದಾರೆ.
6/ 8
ಬಿಗ್ ಬಾಸ್ ನಿಂದ ಆಚೆ ಬಂದ ಮೇಲೆ ಎಲ್ಲರೂ ಬ್ಯುಸಿ ಆಗಿದ್ದಾರೆ. ನೇಹಾ ಗೌಡ ಸ್ಟಾರ್ ಸುವರ್ಣದಲ್ಲಿ ಶುರುವಾಗಲಿರುವ ಹೊಸ ಧಾರಾವಾಹಿಯಲ್ಲಿ ನಟಿಸಲಿದ್ದಾರೆ.
7/ 8
ಅಮೂಲ್ಯ ಗೌಡ ಸಹ ವಿದೇಶಗಳ ಟ್ರಿಪ್ ಮಾಡಿದ್ದಾರೆ. ಈಗ ಎಲ್ಲರೂ ಬಿಡುವ ಮಾಡಿಕೊಂಡು ಒಂದೆಡೆ ಸೇರಿದ್ದಾರೆ. ನಕ್ಕಿದ್ದಾರೆ. ಸಂತೋಷವಾಗಿ ಕಾಲ ಕಳೆದಿದ್ದಾರೆ.
8/ 8
ಅನುಪಮಾ ಗೌಡ ಅವರು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹಲವರು ಈ ಫೋಟೋಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿಮ್ಮ ಸ್ನೇಹ ಮುಂದುವರೆಯಲಿ ಎಂದು ಹೇಳಿದ್ದಾರೆ