ಬಿಗ್ ಬಾಸ್ ಸೀಸನ್ 9 ರ ಕೆಲ ಸ್ಪರ್ಧಿಗಳು ಒಟ್ಟಿಗೆ ಸೇರಿದ್ದಾರೆ. ಅದು ಬರೀ ಮಾತುಕತೆಗಲ್ಲ ಸಂಕ್ರಾಂತಿ ಸಂಭ್ರಮಕ್ಕೆ. ರೂಪೇಶ್ ಶೆಟ್ಟಿ, ಕಾವ್ಯಶ್ರೀ ಗೌಡ, ದೀಪಿಕಾ ದಾಸ್, ರೂಪೇಶ್ ರಾಜಣ್ಣ, ರಾಕೇಶ್ ಅಡಿಗ ಸಂಭ್ರಮದಲ್ಲಿದ್ದಾರೆ.
2/ 8
ದೀಪಿಕಾ ದಾಸ್ ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆದಷ್ಟು ಬೇಗ ನಿಮ್ಮ ಮುಂದೆ ಬರುತ್ತೇವೆ ಎಂದು ಬರೆದುಕೊಂಡಿದ್ದಾರೆ. ರಾಕೇಶ್ ಅಡಿಗ ಜೊತೆ ದೀಪಿಕಾ ಪೋಸ್ ಪೋಸ್ ಕೊಟ್ಟಿದ್ದಾರೆ.
3/ 8
ಬಿಗ್ ಬಾಸ್ ಸೀಸನ್ 09 ವಿನ್ನರ್ ರೂಪೇಶ್ ಶೆಟ್ಟಿ ಸಹ ಸಂಕ್ರಾಂತಿ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಈ ಕಾರ್ಯಕ್ರಮವನ್ನು ದೀಪಿಕಾ ದಾಸ್ ನಡೆಸಿಕೊಟ್ಟಂತೆ ಕಾಣ್ತಿದೆ.
4/ 8
ಇನ್ನೂ ಟಾಪ್ 5 ನಲ್ಲಿ ಇದ್ದ ರೂಪೇಶ್ ರಾಜಣ್ಣ ಸಹ ದೀಪಿಕಾ ದಾಸ್ ಜೊತೆ ಫೋಟೋಗೆ ಪೋಸ್ ನೀಡಿದ್ದಾರೆ. ಮನೆಯಲ್ಲಿ ಎಷ್ಟೇ ಜಗಳವಾಗಿದ್ರೂ, ಎಲ್ಲವನ್ನೂ ಮರೆತು ಹೊರಗೆ ಸ್ನೇಹಿತರಾಗಿದ್ದಾರೆ.
5/ 8
ಇದು ಸಂಕ್ರಾಂತಿ ಹಬ್ಬಕ್ಕೆ 5 ಜನ ಸೇರಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಈ ಕಾರ್ಯಕ್ರಮ ಎಷ್ಟೋತ್ತಿಗೆ ಪ್ರಸಾರ ಆಗುತ್ತೆ ಅಂತ ಇನ್ನು ಸಮಯ ತಿಳಿಸಿಲ್ಲ.
6/ 8
ದೀಪಿಕಾ ದಾಸ್ ಸೀಸನ್ 07 ಮತ್ತು 09 ರ ಸ್ಪರ್ಧಿ. ತುಂಬಾ ಸ್ಟ್ರಾಂಗ್ ಅಭ್ಯರ್ಥಿ. ಈ ಬಾರಿ ಪ್ರವೀಣರಾಗಿ ಎಂಟ್ರಿ ಆಗಿದ್ದರು. ಇವರು ಮಾತನಾಡುವುದು, ಆತ್ಮೀಯರಾಗುವುದು ಕಮ್ಮಿ. ಸೀಸನ್ 7 ರ ಸ್ಪರ್ಧಿಗಳ ಜೊತೆ ಉತ್ತಮ ಬಾಂದವ್ಯ ಹೊಂದಿದ್ದಾರೆ.
7/ 8
ದೀಪಿಕಾ ದಾಸ್ ಬಿಗ್ ಬಾಸ್ ಮನೆಯಲ್ಲಿ ನನ್ನ ಹಳೆ ಸೀಸನ್ ಸ್ನೇಹಿತರು ಯಾರಾದ್ರೂ ಬರಬೇಕು ಎಂದು ತಮ್ಮ ಆಸೆ ಹೇಳಿಕೊಂಡಿದ್ರು. ಅಂತೆಯೇ ವಾಸುಕಿ ವೈಭವ್ ಮನೆಗೆ ಬಂದಿದ್ದರು.
8/ 8
ದೀಪಿಕಾ ದಾಸ್ ಈ ಬಾರಿ ಟಾಪ್ 3 ಯಲ್ಲಿ ಇದ್ದು, ಕೊನೆಯಲ್ಲಿ ಔಟ್ ಆಗಿದ್ದರು. ಈ ಸಲ ಇವರೇ ಗೆಲ್ತಾರೆ ಅಂತ ಎಲ್ಲರೂ ಅಂದುಕೊಂಡಿದ್ರೂ, ಯಾಕೋ ಜಸ್ಟ್ ಮಿಸ್ ಆಯ್ತು.