Arun Sagar-Arya Vardhan: ಆರ್ಯವರ್ಧನ್ ಗುರೂಜಿ ಮನೆಗೆ ಅರುಣ್ ಸಾಗರ್ ಭೇಟಿ
ಬಿಗ್ ಬಾಸ್ ಸೀಸನ್ 09 ರ ಸ್ಪರ್ಧಿಯಾಗಿದ್ದ ಅರುಣ್ ಸಾಗರ್ ಅವರು ಆರ್ಯವರ್ಧನ್ ಗುರೂಜಿ ಮನೆಗೆ ಭೇಟಿ ನೀಡಿದ್ದಾರೆ. ಅರುಣ್ ಸಾಗರ್ ಗೆ ಗುರೂಜಿ ಸನ್ಮಾನ ಮಾಡಿದ್ದಾರೆ.
1/ 8
ಬಿಗ್ ಬಾಸ್ ಕನ್ನಡ ಸೀಸನ್ 09 ಈ ಬಾರಿ ವಿಶೇಷತೆಯಿಂದ ಕೂಡಿತ್ತು. ಪ್ರವೀಣರು ಮತ್ತು ನವೀನರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು.
2/ 8
ಪ್ರವೀಣರಾಗಿ ಬಿಗ್ ಬಾಸ್ ಸೀಸನ್ 01 ರನ್ನರ್ ಅಪ್ ಅರುಣ್ ಸಾಗರ್ ಸಹ ಈ ಬಾರಿ ಬಿಗ್ ಬಾಸ್ ಮನೆಗೆ ಹೋಗಿದ್ದರು. ಕಲಾವಿದ ಅರುಣ್ ಸಾಗರ್ ಈ ಬಾರಿ ಗೆಲ್ಲಬಹುದು ಎಂದು ಹೇಳಲಾಗ್ತಿತ್ತು.
3/ 8
ಅರುಣ್ ಸಾಗರ್ ಹೋದ ದಿನದಿಂದಲೂ ಜನರಿಗೆ ಮನರಂಜನೆ ನೀಡಿದ್ರು. ತಮ್ಮದೇ ಆದ ರೀತಿಯಲ್ಲಿ ವಿಭಿನ್ನ ವೇಷಗಳಲ್ಲಿ ಜನರನ್ನು ನಗಿಸಿದ್ದರು.
4/ 8
ಅರುಣ್ ಸಾಗರ್ ಅವರು ಆರ್ಯವರ್ಧನ್ ಗುರೂಜಿ ಮನೆಗೆ ಭೇಟಿ ನೀಡಿದ್ದಾರೆ. ಬಿಗ್ ಬಾಸ್ ನಿಂದ ಇಬ್ಬರು ಪರಿಚಯವಾಗಿದ್ದು, ಆತ್ಮೀಯರಾಗಿದ್ದರು.
5/ 8
ಮನೆಗೆ ಬಂದು ಅರುಣ್ ಸಾಗರ್ ಜೊತೆ ಆರ್ಯವರ್ಧನ್ ಗುರೂಜಿ ತುಂಬಾ ಹೊತ್ತು ಮಾತನಾಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿನ ಕೆಲ ವಿಚಾರಗಳನ್ನು ನೆನೆಸಿಕೊಂಡಿದ್ದಾರೆ.
6/ 8
ಆರ್ಯವರ್ಧನ್ ಗುರೂಜಿ ಅರುಣ್ ಸಾಗರ್ ಅವರಿಗೆ ಪೇಟ ತೋಡಿಸಿ, ಶಾಲು ಹಾಕಿ ಸನ್ಮಾನ ಮಾಡಿದ್ದಾರೆ. ಅರುಣ್ ಸಾಗರ್ ಸಹ ಖುಷಿ ಆಗಿದ್ದಾರೆ.
7/ 8
ಇನ್ನು ಅರುಣ್ ಸಾಗರ್ ಅವರು ಆರ್ಯವರ್ಧನ್ ಅವರ ಮಗಳ ಜೊತೆಯೂ ಮಾತನಾಡಿ ಖುಷಿ ಪಟ್ಟರು. ಇಬ್ಬರ ಭೇಟಿ ನೋಡುಗರಿಗೂ ಖುಷಿ ನೀಡಿದೆ.
8/ 8
ಬಿಗ್ ಬಾಸ್ ನಿಂದ ಬಂದ ಮೇಲೆ ಕೆಲ ಸಂಬಂಧಗಳು ಉಳಿಯುವುದಿಲ್ಲ. ಇವರು ಆಚೆ ಬಂದ ಮೇಲೂ ಭೇಟಿಯಾಗಿ ಕುಶಲೋಪರಿ ವಿಚಾರಿಸಿದ್ದಾರೆ.
First published: