ಬರುವ ಶುಕ್ರವಾರ-ಶನಿವಾರ ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಮನೆಯಲ್ಲಿ 6 ಜನ ಉಳಿದಿದ್ದಾರೆ. ಕ್ರಿಸ್ಮಸ್ ಹಿನ್ನೆಲೆ ರೂಪೇಶ್ ಶೆಟ್ಟಿ ಸಾಂತಾ ಆಗಿ ಮನೆಯ ಇತರೆ ಸ್ಪರ್ಧಿಗಳಿಗೆ ಸಂದೇಶ ತಂದಿದ್ದಾರೆ.
2/ 8
ಸಾಂತಾ ಯಾಕೋ ನಿಲ್ಲುತ್ತಲೇ ಇಲ್ಲ, ಕುಣಿದಾಡ್ತಾ ಇದಾರೆ ಎಂದು ಮನೆಯವರು ಕೇಳ್ತಾರೆ. ಅದಕ್ಕೆ ರೂಪೇಶ್ ಶೆಟ್ಟಿ ಪ್ರಾಪರ್ಟಿ ಬಿದ್ದು ಹೋಗುತ್ತೆ ಒಂದೇ ಕಡೆ ನಿಂತ್ರೆ ಎಂದು ಹೇಳ್ತಾರೆ.
3/ 8
ರೂಪೇಶ್ ಶೆಟ್ಟಿ ಅವರನ್ನು ಸಾಂತಾ ರೀತಿ ದೀಪಿಕಾ ದಾಸ್ ರೆಡಿ ಮಾಡಿದ್ದಾರೆ. ಮನೆಯಲ್ಲಿ ಇರುವ ವಸ್ತುಗಳನ್ನು ಬಳಸಿಕೊಂಡು ಈ ರೀತಿ ಮಾಡಿದ್ದಾರೆ.
4/ 8
ಮನೆಯವರಿಗೆ ಉಡುಗೊರೆ ನೀಡಿದ್ದಾರೆ. ರಾಕೇಶ್ ಗೆ ಲೆಟರ್ ನ್ನು ಕೊಟ್ಟಿದ್ದಾರೆ. ಅದರಲ್ಲಿ ನಿನ್ನ ಭೇಟಿಗಾಗಿ ಕಾಯುತ್ತಿರುವೆ ಅಮ್ಮು ಎಂದು ಬರೆದಿದೆ. ಅದನ್ನು ನೋಡಿ ರಾಕಿ ಖುಷಿ ಆಗಿದ್ದಾರೆ.
5/ 8
ಶೀಘ್ರದಲ್ಲೇ ಕನ್ನಡದ ಲೇಡಿ ಸೂಪರ್ ಸ್ಟಾರ್ ಆಗುತ್ತೀರಿ ಎಂದು ದೀಪಿಕಾ ದಾಸ್ ಗೆ ಬರೆಯಲಾಗಿದೆ. ಅದನ್ನು ಓದಿ ದೀಪಿಕಾ ಖುಷಿಯಿಂದ ಸಾಂತಾ ರೂಪೇಶ್ ಜೊತೆ ಡ್ಯಾನ್ಸ್ ಮಾಡಿದ್ರು.
6/ 8
ಆಲಿಯಾ ಹಾಗೂ ರಚಿತಾ ನಿಮ್ಮ ಭೇಟಿಗಾಗಿ ಕಾಯುತ್ತಾ ಇದ್ದಾರೆ. ಪ್ರೀತಿ ಇನ್ನೂ ಹೆಚ್ಚಾಗಿದೆ ಎಂದು ಆರ್ಯವರ್ಧನ್ ಗುರೂಜಿ ಪತ್ರದಲ್ಲಿ ಇದೆ. ಅದನ್ನು ನೋಡಿ ಗುರೂಜಿ ಸಂತೋಷಗೊಂಡಿದ್ದಾರೆ.
7/ 8
ದಿವ್ಯಾ ಉರುಡುಗ ಮತ್ತು ರೂಪೇಶ್ ರಾಜಣ್ಣ ಅವರಿಗೂ ರೂಪೇಶ್ ಸಾಂತಾ ಉಡುಗೊರೆ ನೀಡಿದ್ದಾರೆ. ಅದನ್ನು ನೋಡಿ ಅವರು ಖುಷಿ ಆಗಿದ್ದಾರೆ.
8/ 8
ಮನೆಯವರೆಲ್ಲಾ ಸೇರಿಕೊಂಡು ರೂಪೇಶ್ ಶೆಟ್ಟಿ ಸಾಂತಾ ಜೊತೆ ಎಂಜಾಯ್ ಮಾಡಿದ್ದಾರೆ. ಒಂದು ವಾರ ಮಾತ್ರ ಈ ಮನೆಯಲ್ಲಿ ಇರೋದು ಎಂದು ಎಲ್ಲ ಸಂತೋಷವಾಗಿದ್ದಾರೆ.