ಸ್ಪರ್ಧಿಗಳಿಗೆ ಬಿಗ್ ಬಾಸ್, ಮನೆಯ ಒಳಗೆ ಇಷ್ಟು ದಿನ ನಿಮ್ಮ ನೆರವೇರದ ಆಸೆ ಇದ್ರೆ, ಅದನ್ನು ಹೇಳಿ ಆಸೆ ಬಾವಿಯೊಳಗೆ ನಾಣ್ಯ ಹಾಕಬೇಕು ಎಂದು ಹೇಳುತ್ತಾರೆ. ರೂಪೇಶ್ ಹುಲಿ ಡ್ಯಾನ್ಸ್ ನಡೆಯಬೇಕು ಎಂದು ಹೇಳಿರುತ್ತಾರೆ.
2/ 8
ರೂಪೇಶ್ ಶೆಟ್ಟಿ ಆಸೆಯಂತೆ ಮನೆಯೊಳಗೆ ಹುಲಿ ಡ್ಯಾನ್ಸ್ ಮಾಡಲು ಕಲಾವಿದರು ಬಂದಿದ್ದಾರೆ, ಅದನ್ನು ನೋಡಿ ರೂಪೇಶ್ ಶೆಟ್ಟಿ ತುಂಬಾ ಖುಷಿಯಾಗಿದ್ದಾರೆ.
3/ 8
ಬಿಗ್ ಬಾಸ್ ನಿಮಗೆ ಎಷ್ಟು ಧನ್ಯವಾದ ಹೇಳಿದ್ರೂ ಸಾಲದು ಎಂದು ರೂಪೇಶ್ ಶೆಟ್ಟಿ ಹೇಳಿದ್ದಾರೆ. ಅಲ್ಲದೇ ಮನೆಯವರೆಲ್ಲಾ ಹುಲಿ ಡ್ಯಾನ್ಸ್ ಗೆ ಹೆಜ್ಜೆ ಹಾಕಿದ್ದಾರೆ.
4/ 8
ಕಾಡು, ಹಬ್ಬ ಎಲ್ಲಾ ನೋಡಿದ್ದೇವೆ ಈ ಮನೆಯಲ್ಲಿ ಒಂದು ಜಾತ್ರೆ ನೋಡಬೇಕು. ಸುದೀಪ್ ಸರ್ ಬರಬೇಕು. ಅರವಿಂದ್ ಮನೆಯೊಳಗೆ ಬರಬೇಕು ಎಂದು ದಿವ್ಯಾ ಉರುಡುಗ ಕೇಳಿಕೊಂಡಿರುತ್ತಾರೆ.
5/ 8
ದಿವ್ಯಾ ಆಸೆಯಂತೆ ಹಳೆ ಸೀಸನ್ ಅಭ್ಯರ್ಥಿ ಅರವಿಂದ್ ಕೆ.ಪಿ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ, ಅವಿಯನ್ನು ನೋಡಿ ದಿವ್ಯಾ ಖುಷಿಯಿಂದ ಕುಣಿದಾಡಿದ್ದಾರೆ.
6/ 8
ದಿವ್ಯಾ ಉಡುಡುಗ ಅರವಿಂದ್ ಗಾಗಿ ಒಂದು ಹಾಡನ್ನು ಬರೆದಿಟ್ಟುಕೊಂಡಿದ್ದರು. ಅದನ್ನು ಹೇಳುತ್ತೇನೆ ಎಂದು ನಿಂತಿದ್ದಾರೆ. ನಿಮಗೆ ಹಾಡೋಕೆ ಬರುತ್ತಾ ಎಂದು ಅವಿ ರೇಗಿಸಿದ್ದಾರೆ.
7/ 8
ಹಾಡಿನ ಕ್ರೆಡಿಟ್ಸ್ ಯಾರಿಗಾದ್ರೂ ಕೊಡಬೇಕಾದ್ರೆ ಮೊದಲೇ ಕೊಡು ಎಂದು ಅರವಿಂದ್ ಹೇಳಿದ್ದಾರೆ. ಎಲ್ಲರೂ ರೂಪೇಶ್ ರಾಜಣ್ಣನನ್ನು ನೋಡಿ ನಕ್ಕಿದ್ದಾರೆ.
8/ 8
ಎಲ್ಲಾ ಕ್ರೆಡಿಟ್ಸ್ ನನ್ನ ಒಬ್ಬಳಿಗೆ. ಒಂದೊಂದು ಪದವನ್ನೂ ನಾನೇ ಬರೆದಿದ್ದೇನೆ ಎಂದು ದಿವ್ಯಾ ಉರುಡುಗ ನಗುತ್ತಾರೆ. ನಂತರ ನನಗೆ ನಾಚಿಕೆ ಆಗ್ತಾ ಇದೆ ಎಂದು ಅರವಿಂದ್ ಅವರನ್ನು ಹಗ್ ಮಾಡಿಕೊಳ್ತಾರೆ.