Bigg Boss Kannada: ಬಿಗ್ ಬಾಸ್ ಮನೆಯಲ್ಲಿ ಕಾವ್ಯಶ್ರೀ ಕಣ್ಣೀರು, ದೀಪಿಕಾಗೂ ಬೇಸರ: ಆಗಿದ್ದೇನು?
ಬಿಗ್ ಶೋ ಶುರುವಾಗಿ 9 ವಾರ ಕಳೆದಿದೆ. 10ನೇ ವಾರ ನಡೆಯುತ್ತಿದೆ. ಎಲ್ಲರೂ ತಮ್ಮ ಮನೆಯವರನ್ನು ಮಿಸ್ ಮಾಡಿಕೊಂಡಿದ್ದಾರೆ. ಅದಕ್ಕೆ ಬಿಗ್ ಬಾಸ್ ಮನೆಯವರನ್ನು ಕರೆಸಿದ್ದಾರೆ. ಆದ್ರೆ ಮನೆಯವರನ್ನು ನೋಡೋ ಅವಕಾಶ ಕಾವ್ಯ, ದೀಪಿಕಾಗೆ ಸಿಕ್ಕಿಲ್ಲ.
ಬಿಗ್ ಮನೆಯವರನ್ನು ನೋಡಲು ಟೈಂ ಲಿಮಿಟ್ ಹೇಳಿರುತ್ತಾರೆ. ಅದಕ್ಕೆ ತಕ್ಕಂತೆ ಬ್ಯಾಟರಿ ಚಾರ್ಜ್ ಬದಲಾಗುತ್ತೆ. ದೀಪಿಕಾ, ಕಾವ್ಯ, ರೂಪೇಶ್ ಶೆಟ್ಟಿ ಮನೆಯವರು ಬರಬೇಕಿದೆ. ಆದ್ರೆ ಬ್ಯಾಟರಿ 40% ಅಷ್ಟೇ ಇದೆ.
2/ 8
ಬ್ಯಾಟರಿ ಚಾರ್ಜ್ ಮಾಡಲು ಟಾಸ್ಕ್ ಗಳನ್ನು ಆಡಬೇಕು. ದೀಪಿಕಾ ದಾಸ್, ಪ್ರಶಾಂತ್ ಸಂಬರ್ಗಿ, ರೂಪೇಶ್ ಶೆಟ್ಟಿ ಆಟ ಆಡಿದ್ದಾರೆ. ಆದ್ರೆ ಗೇಮ್ ಸೋತ ಕಾರಣ ಬ್ಯಾಟರಿ ಚಾರ್ಜ್ ಆಗಲ್ಲ.
3/ 8
ಬ್ಯಾಟರಿಯಲ್ಲಿ ಚಾರ್ಜ್ ಇಲ್ಲ ಎಂದ್ರೆ ಮನೆಯವರನ್ನು ನೋಡಲು ಆಗಲ್ಲ. ಆದ ಕಾರಣ ಕಾವ್ಯಶ್ರೀ ಅಳುತ್ತಾ ಕೂತಿರುತ್ತಾರೆ. ಮನೆಯವರೆಲ್ಲಾ ಸಮಾಧಾನ ಮಾಡ್ತಾರೆ. ಆದ್ರೂ ಬೇಸರದಲ್ಲಿದ್ರು.
4/ 8
ರೂಪೇಶ್ ಶೆಟ್ಟಿ, ದೀಪಿಕಾ ದಾಸ್, ಕಾವ್ಯಶ್ರೀ ಮನೆಯವರು ಬರಬೇಕು. ಅದಕ್ಕೆ ರೂಪೇಶ್ ಶೆಟ್ಟಿ ಇನ್ನೊಂದು ಗೇಮ್ ಕೊಡಿ ಬಿಗ್ ಬಾಸ್ ಎಂದು ಕೇಳಿಕೊಳ್ತಾ ಇದ್ದಾರೆ.
5/ 8
ದೀಪಿಕಾ ದಾಸ್ ಸಹ ದಯವಿಟ್ಟು ಇನ್ನೊಂದು ಅವಕಾಶ ಕೊಡಿ ಬಿಗ್ ಬಾಸ್. ಎಲ್ಲರ ಮನೆಯವರು ಬಂದಿದ್ದಾರೆ. ನಮ್ಮ ಮೂರು ಜನರ ಮನೆಯವರು ಬರಲಿಲ್ಲ ಎಂದ್ರೆ ಬೇಜಾರಾಗುತ್ತೆ ಎಂದು ದೀಪಿಕಾ ದಾಸ್ ಕೇಳಿಕೊಂಡಿದ್ದಾರೆ.
6/ 8
ಯಾರದ್ರೂ ತ್ಯಾಗ ಮಾಡಿದ್ರೆ ಒಬ್ಬರಿಗೆ ಮನೆಯವರನ್ನು ನೋಡುವ ಅವಕಾಶ ಸಿಗುತ್ತೆ. ಮೂವರಲ್ಲಿ ನೀವೇ ನಿರ್ಧಾರ ಮಾಡಿಕೊಳ್ಳಿ ಎಂದು ಅರುಣ್ ಸಾಗರ್ ಸಲಹೆ ನೀಡ್ತಾರೆ.
7/ 8
ದೀಪಿಕಾ ದಾಸ್ ಮತ್ತು ಕಾವ್ಯಶ್ರೀ ಮಾತನಾಡಿಕೊಂಡು ರೂಪೇಶ್ ಶೆಟ್ಟಿಗೆ ಗೇಮ್ ಬಿಟ್ಟು ಕೊಟ್ಟಿದ್ದಾರೆ. ಯಾಕಂದ್ರೆ ಅವರು ಓಟಿಟಿ ಸೇರಿ 100 ದಿನಗಳ ಮೇಲೆ ಮನೆಯವರನ್ನು ನೋಡಿಲ್ಲ ಅದಕ್ಕೆ ಎಂದು.
8/ 8
ಕೊನೆಗೂ ಮನೆಯವರನ್ನು ನೋಡಲು ಆಗಲಿಲ್ಲ ಎಂದು ದೀಪಿಕಾ ದಾಸ್ ಬೇಸರ ಮಾಡಿಕೊಂಡು ಕೂತಿದ್ದಾರೆ. ಕಾವ್ಯಗೂ ಸಹ ಮನೆಯವರನ್ನು ನೋಡಲು ಆಗಿಲ್ಲ.