ಬಿಗ್ ಬಾಸ್ ಈ ವಾರದ ಟಾಸ್ಕ್ ಆಗಿ ಪಡೆದಿರುವ ಅಂಕಗಳನ್ನು ಉಳಿಸಿಕೊಳ್ಳಬೇಕು ಎಂದಿದ್ದಾರೆ. ಅದನ್ನು ಬಿಗ್ ಬಾಸ್ ಸ್ಪರ್ಧಿಗಳು ಎಚ್ಚರಿಕೆಯಿಂದ ಆಡಿ ಅಂಕಗಳನ್ನು ಉಳಿಸಿಕೊಳ್ಳಬೇಕಿದೆ. ಆಟಗಳನ್ನು ಸೋತ್ರೆ, ನಿಗದಿ ಪಡಿಸಿರುವ ಅಂಕಗಳು ಕಟ್ ಆಗುತ್ತೆ. ಬ್ಯಾಲೆನ್ಸ್ ಮಾಡೋ ಆಟವಿದ್ದು, ಅದನ್ನು ಅನುಪಮಾ ಗೌಡ, ದೀಪಿಕಾ ದಾಸ್, ಅಮೂಲ್ಯ ಗೌಡ ಆಡಿದ್ದಾರೆ. ಮತ್ತೊಂದು ಗೇಮ್, ಸ್ವಿಮ್ಮಿಂಗ್ ಪೂಲ್ ನಲ್ಲಿರುವ ಪೆಟ್ಟಿಗೆಗೆ ಬಾಲ್ ಗಳನ್ನು ಹಾಕಬೇಕು. ಈ ಆಟವನ್ನು ಮನೆಯ ಎಲ್ಲ ಅಭ್ಯರ್ಥಿಗಳು ಆಡುತ್ತಿದ್ದಾರೆ. ಮನೆಯವರು ಯಾವುದು ಒಂದು ಎಡವಟ್ಟು ಮಾಡಿದ ಕಾರಣ 14750 ಇದ್ದ ಅಂಕ 14000ಕ್ಕೆ ಇಳಿದೆ. ಮನೆಯವರೆಲ್ಲಾ ಯಾವ ವಿಷಯಕ್ಕೆ ಅಂಕಗಳು ಕಟ್ ಆಯ್ತು ಎಂದು ತಲೆ ಕಡೆಸಿಕೊಂಡಿದ್ದಾರೆ. 750 ಅಂಕಗಳು ಕಟ್ ಆಗಿರುತ್ತವೆ. ಅದಕ್ಕೆ ದೀಪಿಕಾ ದಾಸ್ ಬಿಗ್ ಯಾಕೆ ಕಿತ್ತುಕೊಂಡ್ರಿ ಬಿಗ್ ಬಾಸ್? ನೀವು ಕೊಟ್ಟಿದ್ದೇ ಹೆಚ್ಚು ಎಂದು ಬೇಸರ ಮಾಡಿಕೊಂಡಿದ್ದಾರೆ. ಯಾವುದಕ್ಕೆ ಅಂತ ಗೊತ್ತಿಲ್ಲ. ಬಟ್ 750 ಪಾಯಿಂಟ್ ಕಟ್ ಆಗಿದೆ ಎಂದು ರೂಪೇಶ್ ಶೆಟ್ಟಿ ಹೇಳ್ತಾರೆ. ನಮ್ಮಿಂದ ಏನಾದ್ರೂ ತಪ್ಪಾಯ್ತಾ? ಗೊತ್ತಾಗುತ್ತಿಲ್ಲ ಎಂದು ಅನುಪಮಾ ಗೌಡ ಹೇಳಿದ್ದಾರೆ. ಯಾರು ಸ್ಪರ್ಧಿಗಳು ಮೈಕ್ ಹಾಕದೇ ಮಾತನಾಡಿದ್ದಾರೆ. ಅದಕ್ಕೆ ಈ ಅಂಕಗಳು ಕಡಿತಗೊಂಡಿರಬಹುದು ಎಂದು ರಾಕೇಶ್ ಅಡಿಗ ಹೇಳ್ತಾರೆ. ಅನುಪಮಾ ಗೌಡ ಯಾರು ಮೈಕ್ ಬಿಟ್ಟಿದ್ದೀರಿ ಎಂದು ಕೇಳ್ತಾರೆ. ದಿವ್ಯಾ ಉರುಡುಗ ಮತ್ತು ಅಮೂಲ್ಯ ಗೌಡ ಮೈಕ್ ಇಲ್ಲದೇ ಮಾತನಾಡಿದ್ದಾರೆ. ಅದಕ್ಕೆ ಅಂಕಗಳು ಕಡಿತಗೊಂಡಿವೆ.