ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿದೆ. ಅದಕ್ಕೆ ಸ್ಪರ್ಧಿಗಳಿಎಗೆ ವೈಯಕ್ತಿವಾಗಿ ಆಡುವ ಆಟಗಳನ್ನು ನೀಡಿದ್ದಾರೆ. ತಮ್ಮ ಆಟ ತಾವೇ ಆಟ ಅಂಕ ಗಳಿಸಬೇಕು. ಒಂದು ಕಡೆ ಅರುಣ್ ಸಾಗರ್, ದಿವ್ಯಾ ಉರುಡುಗ, ರಾಕೇಶ್, ಅಮೂಲ್ಯ ಗೌಡ ಬ್ಯಾಲೆನ್ಸ್ ಆಟಕ್ಕೆ ನಿಂತಿದ್ದಾರೆ. ಸ್ಪಲ್ಪ ಮಿಸ್ ಆದ್ರೂ ಕೆಳಗೆ ಕಾಲಿಡಬೇಕಾಗುತ್ತೆ. ಇನ್ನೊಂದು ಕಡೆ ರೂಪೇಶ್ ಶೆಟ್ಟಿ, ರೂಪೇಶ್ ರಾಜಣ್ಣ, ಆರ್ಯವರ್ಧನ್, ದೀಪಿಕಾ ದಾಸ್ ನಿಂತಿದ್ದಾರೆ. ನೋಡಿದಷ್ಟು ಸುಲಭವಾಗಿಲ್ಲ ಈ ಗೇಮ್. ಅದರ ಮೇಲೆ ನಿಂತು ಬ್ಯಾಲೆನ್ಸ್ ಮಾಡುವಾಗ ಅರುಣ್ ಸಾಗರ್ ಅವರಿಗೆ ಕಾಲು ನೋವು ಬಂದಿದೆ. ಅವರು ಗೇಮ್ ನ್ನು ಬೇಗ ಬಿಟ್ಟರು. ತುಂಬಾ ಹೊತ್ತು ನಿಲ್ಲಲಾಗಲಿಲ್ಲ. ಬಿಗ್ ಬಾಸ್ 4 ಗಂಟೆ ನಿಲ್ಲಲು ಆಗಲ್ಲ. 2 ಗಂಟೆ ಕೊಡಿ ಬಿಗ್ ಬಾಸ್ ಎಂದು ರೂಪೇಶ್ ಶೆಟ್ಟಿ ಕೇಳ್ತಾ ಇದ್ದಾರೆ. ಶೆಟ್ಟಿ ಮಾತು ಕೇಳಿ ಎಲ್ಲರೂ ನಗ್ತಾ ಇದ್ರು. ದೀಪಿಕಾ ಅಂದ ತಕ್ಷಣ ಕಾಗೆಗಳೆಲ್ಲಾ ಖುಷಿ ಆಗ್ತಾವೆ. ನಿನ್ನ ನೋಡೋಕೆ ಕೆಳಗೆ ನೋಡ್ತಾವೆ ಎಂದು ಅರುಣ್ ಸಾಗರ್ ಮತ್ತು ರೂಪೇಶ್ ರಾಜಣ್ಣ ರೇಗಿಸಿದ್ದಾರೆ. ಕಾಗಯ್ಯ ಕಾಗಯ್ಯ ಕಾ ಕಾ ಎಂದು ದೀಪಿಕಾ ದಾಸ್ ಮೇಲೆ ಹಾಡು ಹೇಳಿದ್ದಾರೆ. ದೀಪಿಕಾ ಕಾ ಕಾ ಎಂದಿದ್ದಾರೆ. ಅದಕ್ಕೆ ದೀಪಿಕಾ ದಾಸ್ ನಕ್ಕಿದ್ದಾರೆ. ಕೊನೆಯಲ್ಲಿ ಅಮೂಲ್ಯ ಗೌಡ, ರಾಕೇಶ್ ಅಡಿಗ, ದಿವ್ಯಾ ಉರುಡುಗ ನಿಂತಿದ್ದಾರೆ. ಯಾರು 4 ತಾಸು ನಿಲ್ತಾರೆ ಅಂತ ಗೇಮ್ ಕುತೂಹಲ ಮೂಡಿಸಿದೆ.