ನಂಬರ್ ಅಂದ್ರೆ ನಾನು, ನಾನು ಅಂದ್ರೆ ನಂಬರ್ ಎಂದು ಹೇಳುವ ಆರ್ಯವರ್ಧನ್ ಗುರೂಜಿ ಬಿಗ್ ಬಾಸ್ ಸೀಸನ್ ಫಿನಾಲೆ ವಾರ ತಲುಪಿದ್ದಾರೆ.
2/ 8
ಓಟಿಟಿಯಿಂದ ಬಿಗ್ ಬಾಸ್ ಟಿವಿ ಸೀಸನ್ ಗೆ ಸೆಲೆಕ್ಟ್ ಆಗಿದ್ದ ಗುರೂಜಿ, ಅಷ್ಟೇ ಚೆನ್ನಾಗಿ ಆಟಗಳನ್ನು ಆಡಿಕೊಂಡು ಬಂದಿದ್ದಾರೆ. ತಮಗೆ ಎಷ್ಟು ಆಗುತ್ತೋ ಅಷ್ಟು ಚೆನ್ನಾಗಿ ಸ್ಪರ್ಧೆ ನೀಡಿದ್ದಾರೆ.
3/ 8
ಕಳೆದ ವಾರ ವೈಯಕ್ತಿಕವಾಗಿ ಟಾಸ್ಕ್ ಗಳನ್ನು ಆಡಬೇಕಿತ್ತು. ಆರ್ಯವರ್ಧನ್ ಗುರೂಜಿ ಎಲ್ಲಾ ಟಾಸ್ಕ್ ಗಳನ್ನು ಚೆನ್ನಾಗಿ ಆಡಿದ್ದರು ಎಲ್ಲರಿಗಿಂತ ಮೊದಲ ಸ್ಥಾನ ಪಡೆದಿದ್ದರು. ಕೊನೆ ಗೇಮ್ ಒಂದು ಮುಗ್ಗರಿಸಿದ್ರು.
4/ 8
ಎಲ್ಲಾ ಆಟಗಳನ್ನು ಚೆನ್ನಾಗಿ ಆಡಿ, ಯಾವುದೇ ಮಾತುಗಳನ್ನು ತಿರುವಿ ಹಾಕಿಲ್ಲ. ಅದಕ್ಕೆ ಈ ವಾರ ಕಿಚ್ಚನ ಮೆಚ್ಚುಗೆಯ ಚಪ್ಪಾಳೆ ಪಡೆದಿದ್ದಾರೆ. ಕೊನೆಯ ಕಿಚ್ಚನ ಚಪ್ಪಾಳೆ ಪಡೆದ ಸ್ಪರ್ಧಿ ಆಗಿದ್ದಾರೆ.
5/ 8
ಆರ್ಯವರ್ಧನ್ ಗುರೂಜಿಗೆ ಕಿಚ್ಚನ ಚಪ್ಪಾಳೆ ಪಡೆಯಬೇಕು ಎಂಬ ಆಸೆ ಇತ್ತು. ಅದು ಕೂಡ ಕೊನೆ ವಾರದಲ್ಲಿ ಸಿಕ್ಕಿದೆ. ಅದಕ್ಕೆ ಗರೂಜಿ ತುಂಬಾ ಖುಷಿಯಾಗಿದ್ದರು.
6/ 8
ಗುರೂಜಿ ಹುಡುಗ ಆಗಿದ್ದಾಗ ಹೇಗಿದ್ರಿ ಎಂದು ಸುದೀಪ್ ಕೇಳಿದ್ದಾರೆ. ಅದಕ್ಕೆ ಗುರೂಜಿ ನಾನು ತುಂಬಾ ಚೆನ್ನಾಗಿ ಇದ್ದೆ. ಹಿಂದಿ ಕಲರ್, ಇಂಗ್ಲಿಷ್ ಪ್ಯಾಂಟ್ ಹಾಕ್ತಿದ್ದೆ. ತಮಿಳ್ ಹೀರೋ ಹೇರ್ ಸ್ಟೈಲ್ ಮಾಡ್ತಾ ಇದ್ದೆ ಎಂದು ಹೇಳಿದ್ದಾರೆ.
7/ 8
ನಿಜ ಹೇಳ್ತಾ ಇದೀರಾ ಗುರೂಜಿ ಎಂದು ಸುದೀಪ್ ಅವರು ಕೇಳಿದಾಗ. ಹೌದು ಸರ್ ನನ್ನ ಫೋಟೋಗಳು ಇವೆ. ನಿಮಗೆ ಬೇಕಾದ್ರೆ ವಾಟ್ಸಾಪ್ ಮಾಡ್ತೀನಿ ಅಂತಾರೆ.
8/ 8
ಗುರೂಜಿಗೆ ಫಿನಾಗೆ ಹೋಗಬೇಕು, ಕಿಚ್ಚನ ಚಪ್ಪಾಳೆ ಪಡೆಯಬೇಕು ಎಂಬ ಆಸೆ ಇತ್ತು. ಈ 2 ಆಸೆ ಕೊನೆ ವಾರದಲ್ಲಿ ನೆರವೇರಿದೆ. ತುಂಬಾ ಖುಷಿ ಆಗಿದ್ದಾರೆ.