ಬಿಗ್ ಬಾಸ್ ಮನೆಯಲ್ಲಿ ಅಮೂಲ್ಯ ಗೌಡ ಮತ್ತು ರಾಕೇಶ್ ಯಾವಾಗಲು ಜೊತೆಗಿರುತ್ತಾರೆ. ತಮ್ಮ ವಿಷಯಗಳನ್ನು ಇಬ್ಬರು ಶೇರ್ ಮಾಡಿಕೊಳ್ತಾ ಇರ್ತಾರೆ. ಇದು ಎಲ್ಲರಿಗೂ ಗೊತ್ತು.
2/ 8
77 ದಿನವಾಗಿದೆ. ನೀವಿಬ್ಬರು ಸಿಕ್ಕಾಪಟ್ಟೆ ಮಾತನಾಡುತ್ತಾ ಇರುತ್ತೀರಾ. ಏನು ಅಂಥದ್ದು ಬಿಟ್ಟಿದ್ದೀರಾ ಅಂತ ಮಾತನಾಡುತ್ತೀರಾ ಎಂದು ಆರ್ಯವರ್ಧನ್ ಗುರೂಜಿ ಅಮೂಲ್ಯ-ರಾಕಿಯನ್ನು ಪ್ರಶ್ನಿಸಿದ್ದಾರೆ.
3/ 8
ಯಾರಾದ್ರೂ ಏನಾದರೂ ಅಂದರೆ ತಲೆಕೆಡಿಸಿಕೊಳ್ಳದದೇ ಹೇಗೆ ಬದುಕುವುದು ಎಂದು ಮಾತನಾಡಿಕೊಳ್ಳುತ್ತೇವೆ ಎಂದು ರಾಕೇಶ್ ಅಡಿಗ ಗುರೂಜಿಗೆ ಟಾಂಗ್ ಕೊಟ್ಟಿದ್ದಾರೆ.
4/ 8
ಗುರೂಜಿ ಬಳಿ ರೂಪೇಶ್ ಶೆಟ್ಟಿ ಹೋಗಿ, ನಾವು ಮಾತನಾಡುವಾಗ ಅವರು ಅದೇ ರೀತಿ ಕೇಳ್ತಾರಾ ಎಂದು ಹೇಳಿದ್ದಾರೆ. ಅದಕ್ಕೆ ಗುರೂಜಿ ನಿನ್ನ ಮಧ್ಯೆ ಬಾ ಅಂದಿದ್ದು ಯಾರು ಎಂದು ಅವಾಜ್ ಹಾಕ್ತಾರೆ.
5/ 8
ನೀವೂ ನಾಳೆಯಿಂದ ಯಾಕೆ ನಮ್ಮ ಜೊತೆಗೆ ಬಂದು ಕುಳಿತುಕೊಳ್ಳಬಾರದು ಎಂದು ಅಮೂಲ್ಯ ಕೇಳ್ತಾರೆ. ನಿಮಗೂ ಗೊತ್ತಾಗುತ್ತೆ ನಾವು ಮಾತನಾಡುವುದು ಎಂದು ಅಮೂಲ್ಯ ಹೇಳಿದ್ದಾರೆ.
6/ 8
ಒಂದು ಪಿಕ್ಚರ್ ಬಗ್ಗೆ ಯಾರಾದರೂ ಸಖತ್ತಾಗಿದೆ, ಸೂಪರ್ ಆಗಿದೆ ಎಂದರೆ ಹೋಗಬಹುದು. ಅದೇ ಆ ಸಿನಿಮಾಗೆ ಯಾರಾದರೂ ಟಿಕೆಟ್ ತೆಗೆದುಕೊಂಡು ಕೂರುತ್ತಾರಾ? ಇರುವ ವಿಚಾರವನ್ನು ನೇರವಾಗಿ ಕೇಳಿದೆ. ಇದು ನಿಮ್ಮ ಹುಟ್ಟುಗುಣ ಎಂದು ಗುರೂಜಿ ಅಮೂಲ್ಯಗೆ ಹೇಳಿದ್ದಾರೆ.
7/ 8
ಈ ಥರದ್ದೆಲ್ಲಾ ಬೇಕಾದರೆ ರಾಕಿ ಹತ್ರ ಕೇಳಿ. ನನ್ನ ಮುಂದೆ ಮಾತ್ರ ಕೇಳಬೇಡಿ ಗುರುಗಳೇ. ಈ ಥರ ಆಲೋಚನೆ ಇರುವವರ ಬಳಿ ನಂಗೆ ಮಾತನಾಡೋದಕ್ಕೂ ಇಷ್ಟವಿಲ್ಲ. ಇದು ನಿಮ್ಮ ಹುಟ್ಟುಗುಣ ಎಂದು ಅಮೂಲ್ಯ ಗೌಡ ಹೇಳಿದ್ದಾರೆ.
8/ 8
ಆರ್ಯವರ್ಧನ್ ಗುರೂಜಿ ಮಾತನ್ನು ಮನೆಯ ಇತರೆ ಸದಸ್ಯರು ತಡೆಯಲು ಹೋದ್ರು. ಆದ್ರೂ ಆಗಲಿಲ್ಲ. ಎಲ್ಲರೂ ಅಯ್ಯೋ ಗುರೂಜಿ ಏಕಪ್ಪಾ ಈ ರೀತಿ ಮಾತನಾಡಿ ಪೇಚಿಗೆ ಸಿಲುಕಿ ಕೊಳ್ತಾರೆ ಎಂದುಕೊಂಡಿದ್ದಾರೆ.