Bigg Boss Kannada: ಬಿಗ್ ಬಾಸ್ ಮನೆಯಲ್ಲಿ ಹೆಂಡ್ತಿಯಾದ್ರಂತೆ ಆರ್ಯವರ್ಧನ್! ಇವರ ಗಂಡ ಯಾರು ಗೊತ್ತಾ?
ಆರ್ಯವರ್ಧನ್ ಗುರೂಜಿ ಬಿಗ್ ಬಾಸ್ ಮನೆಯಲ್ಲಿ ಹೆಂಡ್ತಿ ತರ ಆಗಿ ಬಿಟ್ಟಿದ್ದಾರಂತೆ. ಗಂಡ ಕಾಟ ಕೊಡ್ತಿದ್ದಾನೆ ಎಂದಿದ್ದಾರೆ. ಹಾಗಿದ್ರೆ ಆರ್ಯವರ್ಧನ್ ಹೆಂಡತಿಯಾದ್ರೆ, ಬಿಗ್ ಬಾಸ್ನಲ್ಲಿ ಅವರ ಗಂಡ ಯಾರಪ್ಪ!?
ಆರ್ಯವರ್ಧನ್ ಗುರೂಜಿ, ರೂಪೇಶ್ ರಾಜಣ್ಣ, ರೂಪೇಶ್ ಶೆಟ್ಟಿ ಒಟ್ಟಿಗೆ ಇರುತ್ತಾರೆ. ಒಬ್ಬರಿಗೊಬ್ಬರು ಮಾತನಾಡಿಕೊಂಡು, ತಮಾಷೆ ಮಾಡಿಕೊಂಡು ಖುಷಿ ಆಗಿ ಇರ್ತಾರೆ.
2/ 8
ಗೊತ್ತೋ ಗೊತ್ತಿಲ್ಲದೇನೋ ಬಿಗ್ ಬಾಸ್ ನನಗೆ ರಾಜಣ್ಣನನ್ನು ತಂದು ಕಟ್ಟಿ ಬಿಟ್ಟಿದ್ದಾರೆ. ನಾನೇ ಹೆಂಡ್ತಿಯಾಗಿ, ಅವರೇ ಗಂಡನಾಗಿ ಈ ಮನೆಯಲ್ಲಿ ಇದ್ದೀವಿ ಎಂದು ಆರ್ಯವರ್ಧನ್ ಗುರೂಜಿ ಹೇಳ್ತಾರೆ.
3/ 8
ರೂಪೇಶ್ ಶೆಟ್ಟಿ ಗುರೂಜಿಯನ್ನು ಅಪ್ಪಾಜಿ ಅಪ್ಪಾಜಿ ಎನ್ನುತ್ತಾರೆ. ಅದಕ್ಕೆ ನೀವಿಬ್ಬರು ಗಂಡ-ಹೆಂಡ್ತಿ ಕಿತ್ತಾಡಿಕೊಂಡ್ರೆ, ಮಗು ಗತಿ ಏನು ಎಂದು ರೂಪೇಶ್ ಶೆಟ್ಟಿ ಬಗ್ಗೆ ಅನುಪಮಾ ಗೌಡ ಕೇಳಿದ್ದಾರೆ.
4/ 8
ನನಗೂ ಏನೂ ಗೊತ್ತಾಗ್ತಾ ಇಲ್ಲ, ಈ ಮನೆಯಲ್ಲಿ ಹೆಂಡ್ತಿ ಕಾಟ ತಡಕೊಂಡು ಇರೋದು. ಯಾವಾಗಲೂ ಇದೇ ಕಾಟ ಕೊಡ್ತಾರೆ. ಏನ್ ಮಾಡೋದು ಎಂದು ಮನೆಯವರ ಮುಂದೆ ಗುರೂಜಿ ಹೇಳಿದ್ದಾರೆ.
5/ 8
ಇವರು ನನಗೆ ಕಾಟ ಕೊಟ್ಟು ಇರೋ 4 ಕೂದಲು ಉದುರಿ ಹೋದ್ವು ಎಂದು ಆರ್ಯವರ್ಧನ್ ಗುರೂಜಿ ಹೇಳ್ತಾರೆ. ಅದಕ್ಕೆ ರಾಜಣ್ಣ ಮೊದಲು ಕೂದಲು ಎಲ್ಲಿ ಇದ್ವು ಗುರೂಜಿ ಎಂದು ಕೇಳ್ತಾರೆ.
6/ 8
ಗಂಡನ ಕಾಟದಿಂದ ನರಳಿ ನರಳಿ ಸಣ್ಣ ಆಗಿದ್ದೀನಿ ಎಂದು ಆರ್ಯವರ್ಧನ್ ಗುರೂಜಿ ಅಂತಾರೆ. ಆಗ ಎಲ್ಲರ ಏನ್ ಹೇಳ್ತಾ ಇದೀರಿ ಎನ್ನುತ್ತಾರೆ. ಅದಕ್ಕೆ ನಾನಲ್ಲ. ನನ್ನ ಹೃದಯ ಸಣ್ಣ ಆಗಿದೆ ಎಂದು ಹೇಳ್ತಾ ಇದ್ದಾರೆ.
7/ 8
ಜೀವ ತೆಗೆದಿದ್ದಾರೆ ಇವರು. ಆದ್ರೆ ಜೀವ ಕೊಟ್ಟಿದ್ದೀವಿ ಎಂದು ಎಲ್ಲಾ ಕಡೆ ಹೇಳ್ತಾರೆ. ಇಂಥವರ ಜೊತೆ ನಾನು ಹೇಗೆ ಬದುಕಲಿ ಎಂದು ಮನೆಯವರನ್ನು ಗುರೂಜಿ ಕೇಳ್ತಾ ಇದ್ದಾರೆ.
8/ 8
ಆರ್ಯವರ್ಧನ್ ಗುರೂಜಿ ಮತ್ತು ರೂಪೇಶ್ ರಾಜಣ್ಣನ ನಡುವಿನ ಸಂಭಾಷಣೆ ಕೇಳಿ ಮನೆಯವರೆಲ್ಲಾ ನಕ್ಕಿದ್ದಾರೆ. ಎಂಜಾಯ್ ಮಾಡಿದ್ದಾರೆ. ಖುಷಿ ಪಟ್ಟಿದ್ದಾರೆ.