Bigg Boss Kannada: ಹೀರೋ, ವಿಲನ್ ಎರಡೂ ಸುದೀಪ್! 300 ಕೋಟಿ ಬಜೆಟ್ನಲ್ಲಿ ಗುರೂಜಿ ಸಿನಿಮಾ!
"ನಾನು ಹಾಗೂ ನಿರ್ಮಾಪಕ ಕೆಪಿ ಶ್ರೀಕಾಂತ್ ಆತ್ಮೀಯ ಗೆಳೆಯರು. ಅವರ ಜೊತೆ ಬಂದು ನಿಮಗೆ ಸಿನಿಮಾ ಕಥೆ ಹೇಳ್ತೀನಿ. 300 ಕೋಟಿ ರೂಪಾಯಿ ಬಜೆಟ್ನ ಸಿನಿಮಾ. ನನಗೆ ಗುರು ದೆಸೆಯಿರೋದರಿಂದ 300 ಕೋಟಿ ರೂಪಾಯಿ ಸಿನಿಮಾ ನಿರ್ಮಾಣ ಮಾಡಬೇಕು ಎಂದುಕೊಂಡಿದ್ದೇನೆ" ಅಂತಾರೆ ಆರ್ಯವರ್ಧನ್ ಗುರೂಜಿ! ಅದಕ್ಕೆ ಕಿಚ್ಚ ಸುದೀಪ್ ಹೇಳಿದ್ದೇನು?
'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯಲ್ಲಿ ಸುದೀಪ್ ಎಲ್ಲರನ್ನು ನಗಿಸುತ್ತಾರೆ. ಎಲ್ಲರ ತಪ್ಪುಗಳನ್ನು ತಿದ್ದುತ್ತಾರೆ, ಪಂಚಾಯಿತಿ ನಡೆಸುತ್ತಾರೆ.
2/ 8
ಆದ್ರೆ ಈ ಬಾರಿ ಕಿಚ್ಚ ಸುದೀಪ್ ಅವರಿಗೆ ಆರ್ಯವರ್ಧನ್ ಗುರೂಜಿ ಸಿನಿಮಾ ಮಾಡ್ತಾರಂತೆ! ಆ ಬೇಡಿಕೆಯನ್ನು ಸುದೀಪ್ ಮುಂದೆ ಇಟ್ಟಿದ್ದಾರೆ.
3/ 8
ನಾನು, ಹಾಗೂ ನಿರ್ಮಾಪಕ ಕೆಪಿ ಶ್ರೀಕಾಂತ್ ಆತ್ಮೀಯ ಗೆಳೆಯರು. ಅವರ ಜೊತೆ ಬಂದು ನಿಮಗೆ ಸಿನಿಮಾ ಕಥೆ ಹೇಳ್ತೀನಿ. 300 ಕೋಟಿ ರೂಪಾಯಿ ಬಜೆಟ್ನ ಸಿನಿಮಾ. ನನಗೆ ಗುರು ದೆಸೆಯಿರೋದರಿಂದ 300 ಕೋಟಿ ರೂಪಾಯಿ ಸಿನಿಮಾ ನಿರ್ಮಾಣ ಮಾಡಬೇಕು ಎಂದುಕೊಂಡಿದ್ದೇನೆ ಎಂದು ಸುದೀಪ್ ಮುಂದೆ ಹೇಳಿದ್ದಾರೆ.
4/ 8
ನೀವು ಕಥೆ ಬರೆದಿದ್ದೀರಾ. ಅದಕ್ಕೆ ಕೆಪಿ ಶ್ರೀಕಾಂತ್ 300 ಕೋಟಿ ರೂಪಾಯಿ ಬಜೆಟ್ ಹಾಕ್ತಾರಾ? ನಾನು ನಟಿಸಬೇಕಾ? ಅಂತ ಹೇಳಿ ಸುದೀಪ್ ಅವರು ನಕ್ಕರು.
5/ 8
ನಿಮ್ಮ ಸಿನಿಮಾ ಯಾವುದರ ಬಗ್ಗೆ ಎಂದು ಕಿಚ್ಚ ಸುದೀಪ್ ಕೇಳ್ತಾರೆ. ಅದಕ್ಕೆ ಆರ್ಯವರ್ಧನ್ ಗುರೂಜಿ ದೆವ್ವದ ಚಿತ್ರ ಎನ್ನುತ್ತಾರೆ. ಹಾಗಾದ್ರೆ ನಾನು ದೆವ್ವಾನಾ ನಿಮ್ಮ ಕಥೆಯಲ್ಲಿ ಎನ್ನುತ್ತಾರೆ ಸುದೀಪ್!
6/ 8
ಆರ್ಯವರ್ಧನ್ ಗುರೂಜಿ, ಸುದೀಪ್ ಸರ್, ನೀವೇ ದೆವ್ವ, ನೀವೇ ಹೀರೋ ಎನ್ನುತ್ತಾರೆ. ಆಗ ಸುದೀಪ್ ಹಾಗಾದ್ರೆ ನಿಮ್ಮ ಸಿನಿಮಾ ಹಿಟ್ ಆಗುತ್ತೆ ಬಿಡಿ ಎನ್ನುತ್ತಾರೆ.
7/ 8
ಆರ್ಯವರ್ಧನ್ ಗುರೂಜಿ ಹೇಳಿದ ಮಾತನ್ನು ಸುದೀಪ್ ಅವರು ತಮಾಷೆಗೆ ತೆಗೆದುಕೊಂಡಿದ್ದಾರೆ. ಆದ್ರೆ ಆರ್ಯವರ್ಧನ್ ಮಾತ್ರ ನಾನು ಸಿನಿಮಾ ಮಾಡ್ತೇನೆ ಅಂತಿದ್ದಾರೆ.
8/ 8
ಆರ್ಯವರ್ಧನ್ ಗುರೂಜಿ ಬಿಗ್ಬಾಸ್ ಮನೆಯವರ ಮುಂದೆ ಸಹ ಒಂದು ಸಿನಿಮಾ ನಿರ್ದೇಶನ ಮಾಡ್ತಾರಂತೆ. ಅದರಲ್ಲಿ ರೂಪೇಶ್ ಶೆಟ್ಟಿ ಹೀರೋ, ಅನುಪಮಾ ಗೌಡ ನಾಯಕಿ ಆಗಿ ನಟಿಸಲಿದ್ದಾರಂತೆ.