ಆರ್ಯವರ್ಧನ್ ಗುರೂಜಿ, ರೂಪೇಶ್ ರಾಜಣ್ಣ, ರೂಪೇಶ್ ಶೆಟ್ಟಿ ಯಾವಾಗಲು ಒಟ್ಟಿಗೆ ಇರುತ್ತಾರೆ. ಎಂದಿನಂತೆ ಮಾತನಾಡುತ್ತಾ ಚೆನ್ನಾಗಿಯೇ ಇದ್ದರು. ಗುರೂಜಿ ಸಹ ಕಾಮಿಡಿ ಮಾಡ್ತಾ ಇದ್ದರು.
2/ 8
ರೂಪೇಶ್ ರಾಜಣ್ಣ ತಮಾಷೆಗೆ ರೇಗಿಸಿದ್ದಾರೆ, ಅದೇ ಸಲುಗೆಯಿಂದ ಗುರೂಜಿ ಸುಮ್ಮನೇ ಒಂದು ಏಟು ನೀಡಿದ್ದಾರೆ. ಅದಕ್ಕೆ ರೂಪೇಶ್ ರಾಜಣ್ಣನಿಗೆ ತುಂಬಾ ಕೋಪ ಬರುತ್ತೆ.
3/ 8
ಏನ್ ಆಟ ಆಡ್ತಾ ಇದೀರಾ ಕಪಿ ತರ ಆಡ್ತೀರಾ ಎಂದು ರಾಜಣ್ಣ ಗುರೂಜಿಗೆ ಹೇಳಿದ್ದಾರೆ. ನಾನಲ್ಲ, ನೀನು ಕಪಿ ತರ ಆಡ್ತೀಯಾ ಎಂದು ಗುರೂಜಿ ರಾಜಣ್ಣನಿಗೆ ಹೇಳಿದ್ದಾರೆ.
4/ 8
ನನಗೆ ಯಾಕೆ ಹೊಡೆದ್ರಿ ಎಂದು ರೂಪೇಶ್ ರಾಜಣ್ಣ ಕೇಳ್ತಾರೆ. ತಮಾಷೆಗೆ ಹೊಡೆದೆ ಎಂದು ಗುರೂಜಿ ಹೇಳ್ತಾರೆ. ಇಬ್ಬರ ನಡುವೆ ಮಾತಿನ ಚಕಮಕಿ ನಡೆಯುತ್ತೆ.
5/ 8
ನಾನು ಸಲುಗೆ ಕೊಟ್ರೆ ಈ ರೀತಿ ಮಾಡ್ತೀರಾ ನೀವು, ನನ್ನನ್ನು ಏನು ಅಂದುಕೊಂಡಿದ್ದೀರಿ ಎಂದು ಆರ್ಯವರ್ಧನ್ ಗುರೂಜಿ ಮೇಲೆ ರಾಜಣ್ಣ ಜಗಳಕ್ಕೆ ಹೋಗ್ತಾರೆ.
6/ 8
ದೊಡ್ಡ ಲಾರ್ಡ್ ರೀತಿ ಆಡಬೇಡಿ ನೀವು ಎಂದು ರಾಜಣ್ಣ ಗುರೂಜಿಗೆ ಹೇಳ್ತಾರೆ. ನೀವು ಲಾರ್ಡ್ ಅಪ್ಪನ ರೀತಿ ಆಡಬೇಡಿ, ನೀವ್ ಏನ್ ಕೈ ತೋರಿಸೋದು, ಹೊಡೆದು ಬಿಡುತ್ತೀರಾ ಎಂದು ಗುರೂಜಿ ಕೇಳಿದ್ದಾರೆ.
7/ 8
ಕೋಪಗೊಂಡಿದ್ದ ರಾಜಣ್ಣ, ಹೊಡೆದ್ರೆ ಮುಖಕ್ಕೆ ಅಷ್ಟೇ ಆಮೇಲೆ ಎನ್ನುತ್ತಾ ಹೋಗುತ್ತಾರೆ. ಮನೆಯವರು ಬಿಡಿಸುತ್ತಾರೆ. ಆಯ್ತು ಬಿಡಪ್ಪ ಸಲುಗೆಯಿಂದ ನಡೆದುಕೊಂಡಿದ್ದು ತಪ್ಪು ಎಂದು ಗುರೂಜಿ ಕೈ ಮುಗಿಯುತ್ತಾರೆ.
8/ 8
ನಿಮಗೆ ಕೋಡೋ ಮರ್ಯಾದೆ, ಗೌರವ ಉಳಿಸಿಕೊಳ್ಳಿ ಎಂದು ರಾಜಣ್ಣ ಹೇಳುತ್ತಾರೆ, ಅದಕ್ಕೆ ಗುರೂಜಿ ನಿನ್ನ ಸುದ್ದಿಗೆ ಬಂದಿದ್ದು ತಪ್ಪಾಯ್ತು ಬಿಡಪ್ಪಾ ಎಂದು ಮಲಗಿ ನಮಸ್ಕಾರ ಮಾಡುತ್ತಾರೆ.