Bigg Boss Kannada: ಆರ್ಯವರ್ಧನ್, ರಾಜಣ್ಣ ಇವರಿಬ್ಬರಲ್ಲಿ ಯಾರು ಮುಗ್ಧರು? ಮನೆಯವರು ಹೇಳಿದ್ದೇನು ನೋಡಿ
ಸೂಪರ್ ಸಂಡೇ ವಿತ್ ಸುದೀಪ್ ಕಾರ್ಯಕ್ರಮದಲ್ಲಿ ಸುದೀಪ್ ಮನೆಯವರಿಗೆ ಆರ್ಯವರ್ಧನ್ ಗುರೂಜಿ, ರೂಪೇಶ್ ರಾಜಣ್ಣ ಇನ್ನೋಸೆಂಟ್ ಎಂದು ಪ್ರಶ್ನೆ ಕೇಳ್ತಾರೆ. ಇಲ್ಲವೇ ಇಲ್ಲ ಎಂದಿದ್ದಾರೆ ಮನೆಯವರು.
ಸೂಪರ್ ಸಂಡೇ ವಿತ್ ಸುದೀಪ್ ಕಾರ್ಯಕ್ರಮದಲ್ಲಿ ಸುದೀಪ್ ಮನೆಯವರಿಗೆ ಆರ್ಯವರ್ಧನ್ ಗುರೂಜಿ, ರೂಪೇಶ್ ರಾಜಣ್ಣ ಇನ್ನೋಸೆಂಟ್ ಎಂದು ಪ್ರಶ್ನೆ ಕೇಳ್ತಾರೆ. ಮನೆಯವರ ಉತ್ತರ ನೋಡಿ.
2/ 8
ಆರ್ಯವರ್ಧನ್ ಗುರೂಜಿ ಮತ್ತು ರೂಪೇಶ್ ರಾಜಣ್ಣ, ರೂಪೇಶ್ ಶೆಟ್ಟಿ ಒಟ್ಟಿಗೆ ಇರ್ತಾರೆ. ಆದ್ರೆ ಯಾರೂ ಮುಗ್ಧರು ಎನ್ನುವ ಪ್ರಶ್ನೆ ಬಿಗ್ ಬಾಸ್ ಮನೆಯಲ್ಲಿ ಹುಟ್ಟಿಕೊಂಡಿದೆ.
3/ 8
ಆರ್ಯವರ್ಧನ್ ಗುರೂಜಿ, ರೂಪೇಶ್ ರಾಜಣ್ಣ ಮುಗ್ಧರ ಎಂಬ ಪ್ರಶ್ನೆಗೆ ಅಮೂಲ್ಯ ಚಾನ್ಸೇ ಇಲ್ಲ ಸರ್. ಅವರು ಮುಗ್ಧರು ಅಲ್ಲವೇ ಅಲ್ಲ ಎಂದು ಹೇಳಿದ್ದಾರೆ.
4/ 8
ರಾಜಣ್ಣ ಅವರನ್ನು ಗುರೂಜಿ ನಾಗರಹಾವು ಎಂದಿದ್ದರು. ಆದ್ರೆ ಅದನ್ನು ದೋಸೆ ರೀತಿ ತಿರುವಿ ಹಾಕಿ ನಾನು ಆ ರೀತಿ ಹೇಳಿಲ್ಲ ಎಂದು ಅವರನ್ನು ನಂಬಿಸುತ್ತಾರೆ ಎಂದು ರೂಪೇಶ್ ಶೆಟ್ಟಿ ಹೇಳಿದ್ದಾರೆ.
5/ 8
ವಾರದ ಕಥೆ ಕಿಚ್ಚನ ಜೊತೆ ಅಂದ್ರೆ ಶನಿವಾರದ ಸಂಚಿಕೆಯಲ್ಲಿ ಆರ್ಯವರ್ಧನ್ ಗುರೂಜಿ ರೂಪೇಶ್ ರಾಜಣ್ಣ ನಾಗರಹಾವಿನ ರೀತಿ. ಅವರ ಬಾಲ ಹಿಡಿದ್ರೆ ಕಚ್ಚೇ ಬಿಡ್ತಾರೆ ಎಂದು ಹೇಳಿದ್ದರು.
6/ 8
ಅದಕ್ಕೆ ರಾಜಣ್ಣ ಯಾಕ್ರಿ ನನ್ನ ನಾಗರಹಾವು ಎಂದ್ರಿ ಅಂತ ಕೇಳುತ್ತಾರೆ. ನಾನು ಆ ನಾಗರಹಾವು ಹೇಳಿಲ್ಲ. ಶಿವನ ಕೊರಳಲ್ಲಿ ಇರೋ ನಾಗರಹಾವು ಎಂದು ಹೇಳಿದೆ ಎಂದು ಗುರೂಜಿ ಹೇಳಿದ್ದಾರೆ.
7/ 8
ರಾಜಣ್ಣ ಅವರಿಗೆ ಆರ್ಯವರ್ಧನ್ ಗುರೂಜಿ ಮಾತುಗಳು ಅರ್ಥ ಆಗಿವೆ. ಆದ್ರೆ ಅರ್ಥ ಆಗಿದೆ ಎಂದ್ರೆ ಅನರ್ಥ ಆಗಿ ಬಿಡುತ್ತೆ ಅಂತ ನಾಟಕ ಮಾಡ್ತಾರೆ ಅಂತ ರೂಪೇಶ್ ಶೆಟ್ಟಿ ಹೇಳಿದ್ದಾರೆ.
8/ 8
ಸುದೀಪ್ ಅವರು ಮನೆಯವರ ಮಾತು ಕೇಳಿ ಸಖತ್ ನಕ್ಕಿದ್ದಾರೆ. ಸೂಪರ್ ಸಂಡೇ ವಿತ್ ಸುದೀಪ ಕಾರ್ಯಕ್ರಮದಲ್ಲಿ ನಗೆಗಡಲಿನಲ್ಲಿ ತೇಲಿದ್ದಾರೆ.