ಕಲಾವಿದ ಅರುಣ್ ಸಾಗರ್ ಇದ್ರೆ ಸಾಕು ಅಲ್ಲಿ ನಗು ಇರುತ್ತೆ. ಆ ರೀತಿ ಮನೆಯವರನ್ನು ನಗಿಸುತ್ತಾರೆ. ಎಷ್ಟೇ ನೋವಿದ್ರೂ ತೋರಿಸಿಕೊಳ್ಳದೇ ಮಾತನಾಡಿಕೊಂಡು ಲವಲವಿಕೆಯಿಂದ ಇರ್ತಾರೆ. ಬಿಗ್ ಬಾಸ್ ಸೀಸನ 1 ರ ಅಭ್ಯರ್ಥಿ. ರನ್ನರ್ ಅಪ್ ಕೂಡ ಆಗಿದ್ದರು. ಸ್ಪಲ್ಪದರಲ್ಲೇ ಬಿಗ್ ಬಾಸ್ ಟ್ರೋಫಿ ಕೈ ತಪ್ಪಿತ್ತು. ಅದನ್ನು ಈ ಬಾರಿ ಪಡೆಯಬೇಕು ಎಂದುಕೊಂಡಿದ್ದಾರೆ. ಮನೆಯಲ್ಲಿ ಜೋಕರ್ ವೇಷ ಅಥವಾ ಬೇರೆ ಬೇರೆ ಡ್ರೆಸ್ಗಳನ್ನು ಧರಿಸುವ ಮೂಲಕ ಜನರ ಮನಸ್ಸು ಗೆದ್ದಿದ್ದಾರೆ. ಯಾವಗಲೂ ಎಲ್ಲರ ಬಗ್ಗೆ ಕಾಳಜಿಯನ್ನೂ ವಹಿಸುತ್ತಾರೆ. ಎಲ್ಲರನ್ನೂ ನಗಿಸೋ ಅರುಣ್ ಸಾಗರ್ ಆರ್ಯವರ್ಧನ್ ಗುರೂಜಿ ಮೇಲೆ ಕೋಪ ಮಾಡಿಕೊಂಡಿದ್ದಾರೆ. ಅವರು ಒಮ್ಮೆ ಮಾತನಾಡಿದ ಹಾಗೆ ಮತ್ತೊಮ್ಮೆ ಇರಲ್ಲ ಎಂದು ಹೇಳಿದ್ದಾರೆ. ರಾಕೇಶ್ ಅಡಿಗ ಮತ್ತು ಆರ್ಯವರ್ಧನ್ ಗುರೂಜಿ ಜಗಳ ಮಾಡುವಾಗ, ಅರುಣ್ ಸಾಗರ್ ಮಧ್ಯೆ ಹೋಗಿ, ರಾಕಿ ಗಲೀಜಿನ ಮೇಲೆ ಕಾಲಿಡಬೇಡ ನಮಗೆ ಅಂಟಿಕೊಳ್ಳುತ್ತೆ ಎನ್ನುತ್ತಾರೆ. ಗಲೀಜು ಎಂದಿದ್ದಕ್ಕೆ ಆರ್ಯವರ್ಧನ್ ಗುರೂಜಿ ಅವರಿಗೆ ಕೋಪ ಬರುತ್ತೆ. ಗಲೀಜು ಕ್ಲೀನ್ ಆದ ಮೇಲೆಯೇ ಮನೆ ಕಟ್ಟಲು ಆಗುವುದು ಎಂದು ಆರ್ಯವರ್ಧನ್ ಗುರೂಜಿ ಹೇಳ್ತಾರೆ. ಅರುಣ್ ಸಾಗರ್ ಆರ್ಯವರ್ಧನ್ ಗುರೂಜಿಗೆ ಕಷ್ಟಪಟ್ಟ ದುಡಿದ್ರೆ ತಾನೇ ದುಡ್ಡಿನ ಬೆಲೆ ಗೊತ್ತಾಗೋದು ಎಂದು ಹೇಳ್ತಾರೆ. ಆಗಲೂ ಗುರೂಜಿ ಅರುಣ್ ಸಾಗರ್ ಮೇಲೆ ಕೋಪ ಮಾಡಿಕೊಳ್ತಾರೆ. ನಾವು ಬೇಕರಿ, ಅಲ್ಲಿ ಇಲ್ಲಿ ಕೆಲಸ ಮಾಡಿ ಕಷ್ಟ ಪಟ್ಟಿದ್ದೇವೆ ಎಂದು ಆರ್ಯವರ್ಧನ್ ಗುರೂಜಿ ಹೇಳ್ತಾರೆ. ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆಯುತ್ತೆ.