ಅನುಪಮಾ ಗೌಡ ಪ್ರತಿ ಬಾರಿ ನೀರು ಕುಡಿಯುವ ಮೊದಲು ಪುರುಷ ಸದ್ಯರಿಗೆ ಡ್ಯಾನ್ಸ್ ಹೇಳಿಕೊಡಬೇಕು ಎಂದು ಬಿಗ್ ಬಾಸ್ ತಿಳಿಸಿದ್ದಾರೆ. ಅನುಪಮಾ ಬಿಗ್ ಬಾಸ್ ನೀಡಿದ ಶಿಕ್ಷೆ ಸ್ವೀಕರಿಸಿದ್ದಾರೆ.
2/ 8
ಮೊದಲು ಅನುಪಮಾ ಗೌಡ ರೂಪೇಶ್ ರಾಜಣ್ಣಗೆ ಡ್ಯಾನ್ಸ್ ಹೇಳಿಕೊಟ್ಟಿದ್ದಾರೆ. ಅನುಪಮಾ ರೀತಿ ಕ್ಯಾಪ್ಟನ್ ರಾಜಣ್ಣ ಡ್ಯಾನ್ಸ್ ಮಾಡಿದ್ದಾರೆ. ಮನೆಯವರೆಲ್ಲಾ ಇವರ ನೃತ್ಯ ನೋಡಿ ನಕ್ಕಿದ್ದಾರೆ.
3/ 8
ಪ್ರಶಾಂತ್ ಸಂಬರ್ಗಿ ಇವತ್ತು ಹುಡುಗಿಯರ ರೀತಿ ರೆಡಿಯಾಗಿದ್ದಾರೆ. ಅನುಪಮಾ, ಸಂಬರ್ಗಿ ಅವರಿಗೆ ಡ್ಯಾನ್ಸ್ ಹೇಳಿಕೊಟ್ಟಿದ್ದಾರೆ. ಅವರ ಬಟ್ಟೆಗೂ, ಡ್ಯಾನ್ಸ್ಗೂ ಮ್ಯಾಚ್ ಆಗಿತ್ತು.
4/ 8
ಅನುಪಮಾ, ರೂಪೇಶ್ ಶೆಟ್ಟಿ ಹತ್ತಿರ ಬೆಲ್ಲಿ ಡ್ಯಾನ್ಸ್ ಮಾಡಿಸುತ್ತೇನೆ ಎಂದು ಹೇಳಿ ಕೊಟ್ಟಿದ್ದಾರೆ. ಎಷ್ಟು ಹೇಳಿ ಕೊಟ್ಟರೂ ರೂಪೇಶ್ ಶೆಟ್ಟಿಗೆ ಡ್ಯಾನ್ಸ್ ಮಾಡಲು ಬರಲಿಲ್ಲ.
5/ 8
ರಾಕೇಶ್ ಅಡಿಗಾಗೆ ಕಟ್ ಡ್ಯಾನ್ಸ್ ಹೇಳಿ ಕೊಟ್ರು. ಅದು ಸಹ ಅವರಿಗೆ ಬರಲಿಲ್ಲ. ನಂತರ ರೂಪೇಶ್ ಶೆಟ್ಟಿ, ಅನುಪಮಾ ಗೌಡ, ರಾಕೇಶ್ ಅಡಿಗ ಒಟ್ಟಿಗೆ ಡ್ಯಾನ್ಸ್ ಮಾಡಿದ್ರು.
6/ 8
ಆರ್ಯವರ್ಧನ್ ಕಳೆದ ವಾರ ಕಳಪೆ ಪಡೆದಿದ್ರು. ಆರೋಗ್ಯ ಸರಿ ಇಲ್ಲದ ಕಾರಣ ಜೈಲಿಗೆ ಹೋಗಿರಲಿಲ್ಲ. ಅದಕ್ಕೆ ಈಗ ಜೈಲಿನಲ್ಲಿ ಇದ್ದಾರೆ. ಅನುಪಮಾ ಆರ್ಯವರ್ಧನ್ ಅವರಿಗೆ, ಪೋಲಿ ಇವನು ಹಾಡಿಗೆ ಡ್ಯಾನ್ಸ್ ಕಲಿಸಿದ್ದಾರೆ.
7/ 8
ರೂಪೇಶ್ ಶೆಟ್ಟಿ, ಬೆಲ್ಲಿ ಡ್ಯಾನ್ಸ್ ಮಾಡು ಅಂದ್ರೆ, ಮಿಕ್ಸರ್ ಗ್ರೈಂಡರ್ ತರ ಸುತ್ತುತ್ತಾನೆ ಎಂದು ಮನೆಯವರು ಹೇಳಿದ್ದಾರೆ. ಅದಕ್ಕೆ ಅವರು ಆ ಡ್ಯಾನ್ಸ್ ನನ್ನ ಮೈಂಡ್ ಗೆ ಹೋಗ್ತಾ ಇದೆ. ಹೊಟ್ಟೆ ಬಳಿ ಬರುತ್ತಿಲ್ಲ ಎಂದು ಹೇಳಿದ್ದಾರೆ.
8/ 8
ಅನುಪಮಾ ನೀರು ಕುಡಿಯಲು ತುಂಬಾ ಕಷ್ಟ ಪಡ್ತಾ ಇದ್ದಾರೆ. ಇವರು ನೀರು ಕುಡಿಸುತ್ತಿಲ್ಲ, ನೀರು ಇಳಿಸುತ್ತಿದ್ದಾರೆ ಎಂದು ಅನುಪಮಾ ಗೌಡ ಹೇಳಿದ್ದಾರೆ.