ಬಿಗ್ ಬಾಸ್ ಸೀಸನ್ 09ಕ್ಕೆ ಅನುಪಮಾ ಗೌಡ ಪ್ರವೀಣರಾಗಿ ಎಂಟ್ರಿ ಕೊಟ್ಟಿದ್ದರು. ತುಂಬಾ ಸ್ಟ್ರಾಂಗ್ ಅಭ್ಯರ್ಥಿಯಾಗಿ ಗುರುತಿಸಿಕೊಂಡಿದ್ರು. ಅಲ್ಲದೇ ಎಲ್ಲರ ಜೊತೆ ಸ್ನೇಹವನ್ನು ಬೆಳೆಸಿಕೊಂಡಿದ್ದರು.
2/ 8
ಬಿಗ್ ಬಾಸ್ ಸೀಸನ್ ನಲ್ಲಿ ಹುಡುಗಿಯರೆಲ್ಲಾ ಒಂದು ಗುಂಪು ಮಾಡಿಕೊಂಡಿದ್ರು. ಬಿಗ್ ಬಾಸ್ ನಿಂದ ಬಂದ ಮೇಲೂ ಆ ಸ್ನೇಹವನ್ನು ಅನುಪಮಾ ಗೌಡ ಸಂಭ್ರಮಿಸಿದ್ದಾರೆ.
3/ 8
ಅನುಪಮಾ ಗೌಡ, ಅಮೂಲ್ಯ ಗೌಡ, ರಾಕೇಶ್ ಅಡಿಗ, ದಿವ್ಯಾ ಉರುಡುಗ ಸಖತ್ ಕ್ಲೋಸ್ ಆಗಿದ್ದರು. ಯಾವಾಗಲೂ ಜೊತೆಗೆ ಇರುತ್ತಿದ್ರು. ತುಂಬಾ ಆತ್ಮೀಯರಾಗಿದ್ದರು.
4/ 8
ಟಾಪ್ 5 ನಲ್ಲಿ ಇದ್ದ ರಾಕೇಶ್ ಅಡಿಗ ಬಿಗ್ ಬಾಸ್ ಮುಂದೆ ತಮ್ಮ ಆಸೆಯೊಂದನ್ನು ಹೇಳಿಕೊಂಡಿದ್ದರು. ಅನುಪಮಾ ಗೌಡ, ಅಮೂಲ್ಯ ಗೌಡ, ಕಾವ್ಯಶ್ರೀ ಗೌಡ ಅವರನ್ನು ಕರೆಸಿ. ನಾನು ಅವರೊಟ್ಟಿಗೆ ಊಟ ಮಾಡಬೇಕು ಎಂದಿದ್ದರು.
5/ 8
ರಾಕೇಶ್ ಅಡಿಗ ಆಸೆಯಂತೆ ಬಿಗ್ ಬಾಸ್ ಆ ಮೂರು ಜನರನ್ನು ಮತ್ತೆ ಬಿಗ್ ಬಾಸ್ ಮನೆ ಒಳಗೆ ಕಳಿಸಿದ್ದರು. ಆಗ ಕ್ಲಿಕ್ಕಿಸಲಾದ ಫೋಟೋಗಳು ಇವು. ಎಲ್ಲವನ್ನು ಅನುಪಮಾ ಗೌಡ ಮತ್ತೆ ನೆನಪಿಸಿಕೊಂಡಿದ್ದಾರೆ.
6/ 8
ಅನುಪಮಾ ಗೌಡ ಈ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂ ನಲ್ಲಿ ಶೇರ್ ಮಾಡಿದ್ದಾರೆ. ಇದಕ್ಕೆ ಹಲವು ಮೆಚ್ಚುಗೆ ವ್ಯಕ್ತವಾಗಿದೆ. ನಿಮ್ಮ ಸ್ನೇಹ ಸುಂದರ ಎಂದು ಹಲವರು ಕಾಮೆಂಟ್ ಹಾಕಿದ್ದಾರೆ.
7/ 8
ಬಿಗ್ ಬಾಸ್ ಮನೆಗೆ ಮತ್ತೆ ಕರೆಸಿದ್ದಕ್ಕೆ ಅನುಪಮಾ ಹಾಗೂ ಅಮೂಲ್ಯ ಗೌಡ ರಾಕೇಶ್ ಅಡಿಗಾಗೆ ಹಗ್ ಮಾಡಿ ಧನ್ಯವಾದ ತಿಳಿಸಿದ್ದಾರೆ. ಎಲ್ಲರೂ ಖುಷಿಯಿಂದ ಊಟ ಮಾಡಿದ್ದರು.
8/ 8
ಬಿಗ್ ಬಾಸ್ ನಿಂದ ಆಚೆ ಬಂದ ಮೇಲೂ ಕೆಲ ಸಂಬಂಧಗಳು ಗಟ್ಟಿಯಾಗಿ ಉಳಿಯುತ್ತವೆ. ಅದರಲ್ಲು ಇವರ ಸ್ನೇಹವೂ ಒಂದು. ಇವರ ಸ್ನೇಹ ಇದೇ ರೀತಿ ಮುಂದುವರೆಯಲಿ ಎಂದು ಅಭಿಮಾನಿಗಳು ಹೇಳಿದ್ದಾರೆ.