Bigg Boss Kannada: ಪ್ರಶಾಂತ್ ಸಂಬರ್ಗಿಗೆ ಕಿಚ್ಚನ ಮುಂದೆಯೇ ಕ್ಲಾಸ್, ಲೋ ಥಿಂಕಿಂಗ್ ಎಂದಿದ್ದಕ್ಕೆ ಅಮೂಲ್ಯ ತರಾಟೆ!
ಕಿಚ್ಚ ಸುದೀಪ್ ಮುಂದೆಯೇ ಅಮೂಲ್ಯ ಗೌಡ ಪ್ರಶಾಂತ್ ಸಂಬರ್ಗಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಲೋ ಥಿಂಕಿಂಗ್ ಅಂತ ಹೇಳಬೇಡಿ. ನನಗೆ ಇಷ್ಟ ಆಗಲ್ಲ. ಇನ್ನೊಂದು ಸಲ ನನ್ನ ಹತ್ತಿರ ಮಾತನಾಡುವಾಗ ಕರೆಕ್ಟ್ ಆಗಿ ಮಾತನಾಡಿ ಎಂದು ಪ್ರಶಾಂತ್ ಸಂಬರ್ಗಿಗೆ ತರಾಟೆ ತೆಗೆದುಕೊಂಡಿದ್ದಾರೆ!
ವಾರದ ಕಥೆ ಕಿಚ್ಚನ ಜೊತೆಯಲಿ ಕಾರ್ಯಕ್ರಮದಲ್ಲಿ ಸುದೀಪ್, "ನಮಗೆ ಸಿಗದ ಅವಕಾಶ ಯಾರಿಗೂ ಸಿಗೋದು ಬೇಡ. ಆ ತರಹದ ಆಟಿಟ್ಯೂಡ್ ಈ ಮನೆಯಲ್ಲಿ ಕಾಣಿಸಿತು ಈ ವಾರ" ಎಂದು ಹೇಳಿದ್ರು.
2/ 8
ಎಲ್ಲರಿಗೂ ಕ್ಯಾಪ್ಟೆನ್ಸಿ ಟಾಸ್ಕ್ ಬೇಕಿತ್ತು. ಎಲ್ಲಾ ಟೆಕ್ನಿಷಿಯನ್ಸ್ ಎಫರ್ಟ್ಸ್ಗೆ ಅಗೌರವ ತೋರಿದ ಹಾಗಾಯ್ತು. ಎಲ್ಲರೂ ಅವರವರ ಪಾಯಿಂಟ್ಸ್ ನಿಂದ ನಿರ್ಧಾರ ತೆಗೆದುಕೊಳ್ಳಲು ಆಗಲಿಲ್ಲ ಎಂದು ದಿವ್ಯಾ ಉರುಡುಗ ಹೇಳಿದ್ದಾರೆ.
3/ 8
ಕೆಸರಿನ ಆಟ ಹೊರಗೆ ಆಡದೇ, ಅಲ್ಲಿ ಇಳಿಯದೇ, ಒಬ್ಬರ ಮೇಲೆ ಒಬ್ಬರು ಹಾಕಿಕೊಂಡ್ರಿ ಎಂದು ಸುದೀಪ್ ಕೇಳಿದ್ದಾರೆ. ಅದಕ್ಕೆ ಮನೆಯವರು ಒಂದೊಂದು ರೀತಿ ಉತ್ತರ ಹೇಳಿದ್ದಾರೆ.
4/ 8
ಸ್ವಾರ್ಥವಾಗಿ ಯೋಚನೆ ಮಾಡಿದ್ರು. ಸ್ಫೋರ್ಟ್ಸ್ ಮ್ಯಾನ್ಶಿಪ್ ಇರಲಿಲ್ಲ. ಜೋರಾಗಿ ಮಾತನಾಡಿ ಕರ್ಕಶ ವಾಯ್ಸ್ನಲ್ಲಿ ಹೇಳಿದ್ರು. ಅಮೂಲ್ಯ ಅವರದ್ದು ಲೋ ಥಿಂಕಿಂಗ್ ಆಟಿಟ್ಯೂಡ್ ಎಂದು ಪ್ರಶಾಂತ್ ಸಂಬರ್ಗಿ ಹೇಳಿದ್ದಾರೆ.
5/ 8
ಹೌದು ನನಗೆ 2 ಪಾಯಿಂಟ್ಸ್ ಬಂದಿತ್ತು. ಇನ್ನೊಂದು ಪಾಯಿಂಟ್ ಬಂದ್ರೆ ಕ್ಯಾಪ್ಟೆನ್ಸಿ ಟಾಸ್ಕ್ ಗೆ ಸುಲಭ ಆಗುತ್ತೆ ಎಂದು ನಾನು ಆಟ ಆಡುತ್ತೇನೆ ಎಂದೆ, ಅದರಲ್ಲಿ ತಪ್ಪೇನಿದೆ ಎಂದು ಅಮೂಲ್ಯ ಕೇಳಿದ್ದಾರೆ.
6/ 8
ಕ್ಯಾಪ್ಟೆನ್ಸಿ ಟಾಸ್ಕ್ ಆಡಬೇಕು ಅನ್ನೋದು ನನಗೂ ಇತ್ತು ಸರ್ ಎಂದು ರೂಪೇಶ್ ರಾಜಣ್ಣ ಹೇಳಿದ್ದಾರೆ. 2 ಪಾಯಿಂಟ್ ತಗೊಂಡಿರೋರು ಗೇಮ್ ಬಿಟ್ಟು ಕೊಡಿ. ಹೊಸಬರಿಗೆ ಅವಕಾಶ ಕೊಡಿ ಅಂತ ಕೇಳಿದೆ. ಯಾರು ಬಿಡಲಿಲ್ಲ ಎಂದು ಹೇಳಿದ್ದಾರೆ.
7/ 8
ಟಾಸ್ಕ್ ಕ್ಯಾನ್ಸಲ್ ಆಗೋದಕ್ಕೆ ಮುಖ್ಯ ಕಾರಣ ನಾನು ಅಂತ ಹೇಳಿದರು, ಅದನ್ನು ನಾನು ಒಪ್ಪಿಕೊಳ್ಳಲಿಲ್ಲ. ಪ್ರಶಾಂತ್ ಸರ್ ಯಾವಾಗಲು ಅದೇ ರೀತಿ ಹೇಳ್ತಾರೆ ಎಂದು ಅಮೂಲ್ಯ ಹೇಳಿದ್ದಾರೆ.
8/ 8
ಅಲ್ಲದೇ ಸುದೀಪ್ ಸರ್ ಗೆ ಕ್ಷಮಿಸಿ ಸರ್ ಎಂದು ಹೇಳಿ, ಲೋ ಥಿಂಕಿಂಗ್ ಅಂತ ಹೇಳಬೇಡಿ. ನನಗೆ ಇಷ್ಟ ಆಗಲ್ಲ. ಇನ್ನೊಂದು ಸಲ ನನ್ನ ಹತ್ತಿರ ಮಾತನಾಡುವಾಗ ಕರೆಕ್ಟ್ ಆಗಿ ಮಾತನಾಡಿ ಎಂದು ಪ್ರಶಾಂತ್ ಸಂಬರ್ಗಿಗೆ ತರಾಟೆ ತೆಗೆದುಕೊಂಡಿದ್ದಾರೆ.