ಬಿಗ್ ಬಾಸ್ ಮನೆಯಲ್ಲಿ ಈ ವಾರ ಕ್ಯಾಪ್ಟನ್ ಆಗಿರುವ ರಾಕೇಶ್, ಮನೆಯವರಿಗೆಲ್ಲಾ ಟೀ ಒಟ್ಟಿಗೆ ಮಾಡಿಕೊಳ್ತೀರಾ? ಅಥವಾ ಬೇರೆ ಬೇರೆ ಮಾಡಿಕೊಳ್ತೀರಾ ಎಂದು ಕೇಳ್ತಾರೆ. ಅದಕ್ಕೆ ಮನೆಯವರು ಅವರಿಗೆ ಅನ್ನಿಸಿದ್ದನ್ನು ಹೇಳಿದ್ರು.
2/ 8
ಮನೆಯವರೆಲ್ಲಾ ಒಂದು ಕಡೆ ಕೂತಿದ್ದಾರೆ. ಅಮೂಲ್ಯ ಸ್ಪಲ್ಪ ದೂರದಲ್ಲಿ ಕೂತಿದ್ದಳು. ಅವಳು ನನಗೆ ಒಟ್ಟಿಗೆ ಟೀ ಬೇಡ. ಹಾಲಿಗೆ ನೀರು ಹಾಕುತ್ತಾರೆ. ನನಗೆ ಬೇರೆ ಪ್ಯಾಕೆಟ್ ಕೊಡಿ ಎಂದು ಕೇಳ್ತಾಳೆ.
3/ 8
ಅಮೂಲ್ಯ ಗೌಡ ಹೇಳುವುದು ರಾಕೇಶ್ ಗೆ ಕೇಳಲ್ಲ. ಅದಕ್ಕೆ ಅಮೂಲ್ಯ ನನ್ನ ಮಾತು ಗಮನಕ್ಕೆ ತೆಗೆದುಕೊಳ್ಳಲಿಲ್ಲ ಎಂದು ಬೇಸರವಾಗಿ ಎದ್ದು ಹೋಗ್ತಾರೆ.
4/ 8
ಏಕೆ ಎದ್ದು ಹೋದೆ ಎಂದು ಅಮೂಲ್ಯಳನ್ನು ರಾಕೇಶ್ ಕೇಳ್ತಾರೆ. ಅದಕ್ಕೆ ಅಮೂಲ್ಯ, ನೀನು ನನ್ನ ಮಾತಿಗೆ ರೆಸ್ಪಾನ್ಸ್ ಮಾಡಲಿಲ್ಲ ಎಂದಿದ್ದಕ್ಕೆ, ರಾಕೇಶ್ ನನ್ನ ಗಮನಕ್ಕೆ ಬರಲಿಲ್ಲ ಎನ್ನುತ್ತಾರೆ.
5/ 8
ನಿನ್ನ ಗಮನಕ್ಕೆ ನಾನು ಬರದೇ ಇರುವುದು ಸಹ ನನಗೆ ಹಿಂಸೆ ಆಯ್ತು ಎಂದು ಅಮೂಲ್ಯ ಹೇಳ್ತಾರೆ. ಅದಕ್ಕೆ ರಾಕಿ ಎಲ್ಲರೂ ಅಲ್ಲಿ ಇದ್ರು. ನೀವು ಎಲ್ಲಿ ಇದ್ರಿ ನೋಡಿ ಎಂದು ಹೇಳ್ತಾರೆ.
6/ 8
ಅಮೂಲ್ಯ ನಾವು ಅಷ್ಟೇ ಅಂತರದಲ್ಲಿ ಕೂರಬೇಕು ಎಂದು ನನಗೆ ಗೊತ್ತಿರಲಿಲ್ಲ ಎಂದಾಗ, ಒಂದೆರೆಡು ಹೆಜ್ಜೆ ಮುಂದೆ ಬಂದಿದ್ರೆ ನಿಮ್ಮ Ego ಕಮ್ಮಿ ಆಗ್ತಿತ್ತಾ, ಅದು ಕಾಮನ್ ಸೆನ್ಸ್ ಅಲ್ವಾ ಎಂದು ರಾಕೇಶ್ ಕೇಳ್ತಾರೆ.
7/ 8
ಅಮೂಲ್ಯ, ನನಗೆ ಕಾಮನ್ ಸೆನ್ಸ್ ಇಲ್ಲ. ನನ್ನ ಥಿಂಕಿಂಗ್ ಕೆಪಾಸಿಟಿ ನಿಮ್ಮ ಲೆವೆಲ್ಗೆ ಇಲ್ಲ ಎಂದು ಜೋರಾಗಿ ಹೇಳ್ತಾಳೆ. ಅದಕ್ಕೆ ರಾಕಿ ಕಿರುಚಬೇಡ. ನಿಧಾನಕ್ಕೆ ಮಾತನಾಡು ಎಂದು ಹೇಳುತ್ತಾರೆ.
8/ 8
ಯಾವಾಗಲೂ ಖುಷಿ-ಖುಷಿಯಾಗಿ, ನಗ್ತಾ ನಗ್ತಾ ಮಾತನಾಡುತ್ತಾ ಇದ್ದ ರಾಕಿ-ಅಮೂಲ್ಯ ಜಗಳ ಮಾಡಿಕೊಂಡ ಮುನಿಸಿಕೊಂಡಿದ್ದಾರೆ. ದೂರ ದೂರ ಆಗಿದ್ದಾರೆ.